ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾತ್ಮ ಗಾಂಧಿ ಬಗ್ಗೆ ವಿವಾದಾತ್ಮಕ ಟ್ವೀಟ್; ವರಸೆ ಬದಲಿಸಿದ ಐಎಎಸ್ ಅಧಿಕಾರಿ

|
Google Oneindia Kannada News

ಮುಂಬೈ, ಜೂನ್ 2: ವಿಶ್ವಾದ್ಯಂತ ಇರುವ ಮಹಾತ್ಮ ಗಾಂಧಿ ಪುತ್ಥಳಿಯನ್ನು ತೆಗೆಯಬೇಕು. ಅಷ್ಟೇ ಅಲ್ಲ, ಭಾರತದ ನೋಟುಗಳಲ್ಲಿರುವ ಅವರ ಭಾವಚಿತ್ರವನ್ನೂ ತೆಗೆದುಹಾಕಬೇಕು ಎಂದು ಮುಂಬೈನ ಐಎಎಸ್ ಅಧಿಕಾರಿ ಟ್ವೀಟ್ ಮಾಡಿದ್ದು, ಭಾರೀ ವಿವಾದ ಎಬ್ಬಿಸಿದೆ. ಇನ್ನು ಯಾವ ರಸ್ತೆ, ಸಂಸ್ಥೆಗಳಿಗೆ ಮಹಾತ್ಮ ಗಾಂಧಿ ಹೆಸರಿದೆಯೋ ಅದನ್ನೂ ಬದಲಿಸಬೇಕು ಎಂದಿರುವ ಅವರು, ಗಾಂಧಿ ಹತ್ಯೆ ಮಾಡಿದ ನಾಥೂರಾಂ ಗೋಡ್ಸೆಗೆ 'ಧನ್ಯವಾದ' ಹೇಳಿದ್ದಾರೆ ನಿಧಿ ಚೌಧರಿ.

ಆ ವಿವಾದದ ನಂತರ ಆಕೆಯನ್ನು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಡೆಪ್ಯೂಟಿ ಮುನ್ಸಿಪಲ್ ಕಮಿಷನರ್ ಆಗಿ ನಿಯೋಜಿಸಲಾಗಿದೆ. 'ಚುಚ್ಚುವ' ಅಥವಾ ಕುಟುಕುವ ರೀತಿಯಲ್ಲಿದ್ದ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಆಕೆ ಹೇಳಿದ್ದು, ಆ ಅನಂತರ ಟ್ವೀಟ್ ಅನ್ನು ತೆಗೆದಿದ್ದಾರೆ.

Controversial tweet about Mahatma Gandhi; IAS officer U turn

ಐಎಎಸ್ ಅಧಿಕಾರಿ ಗಾಂಧೀಜಿಯನ್ನು ಅವಹೇಳನ ಮಾಡಿದರೆ?ಐಎಎಸ್ ಅಧಿಕಾರಿ ಗಾಂಧೀಜಿಯನ್ನು ಅವಹೇಳನ ಮಾಡಿದರೆ?

ಮಹಾತ್ಮ ಗಾಂಧಿಯ ಅವಹೇಳನ ಹಾಗೂ ಗೋಡ್ಸೆಯನ್ನು ವೈಭವೀಕರಿಸಿದ ಆಕೆಯನ್ನು ಅಮಾನತು ಮಾಡಬೇಕು ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ ಸಿಪಿ) ಒತ್ತಾಯಿಸಿದೆ. ಆದರೆ ಚೌಧರಿ, ಮಹಾತ್ಮ ಗಾಂಧಿಯ 'ನನ್ನ ಸತ್ಯಾನ್ವೇಷಣೆ' ಪುಸ್ತಕ ಸಾರ್ವಕಾಲಿಕವಾಗಿ ಮೆಚ್ಚಿನದು. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ.

ನಾನು ಎಂದಿಗೂ ಗಾಂಧೀಜಿಯನ್ನು ಅವಮಾನ ಮಾಡಲು ಸಾಧ್ಯವಿಲ್ಲ. ಅವರು ನಮ್ಮ ರಾಷ್ಟ್ರಪಿತ. ಈ ವರ್ಷ ನಮ್ಮ ದೇಶದ ಒಳಿತಿಗಾಗಿ ಕೈಲಾದ ಸಣ್ಣ ಕೆಲಸವಾದರೂ ಮಾಡಬೇಕು. ನನ್ನ ಟ್ವೀಟ್ ನಲ್ಲಿ ಇದ್ದ ವ್ಯಂಗ್ಯವನ್ನು ಟೀಕಾಕಾರರು ಅರ್ಥ ಮಾಡಿಕೊಳ್ಳುತ್ತಾರೆ ಅಂದುಕೊಳ್ತೀನಿ ಎಂದಿದ್ದಾರೆ ಚೌಧರಿ.

English summary
Controversial tweet about Mahatma Gandhi by Mumbai IAS officer Nidhi Choudhari. After huge opposition IAS officer U turn and said, she sarcastically tweeted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X