• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಾಜನ್ ಟ್ವೀಟ್ಸ್: ರಾಧೇ ಮಾ ಇನ್ ಮಿನಿ ಸ್ಕರ್ಟ್

By Mahesh
|

ಮುಂಬೈ, ಆಗಸ್ಟ್ 06: ಸ್ವಯಂಘೋಷಿತ ದೇವ ಮಾನವರ ಸಾಲಿಗೆ ಸೇರ್ಪಡೆಗೊಂಡಿರುವ ರಾಧೇ ಮಾ ಹಾಗೂ ಬಿಲ್ಡರ್ ಬಾಬಾಗೆ ನಾಸಿಕ್ ಕುಂಭಮೇಳದಿಂದ ನಿಷೇಧ ಹೇರಿರುವ ಸುದ್ದಿ ಗೊತ್ತಿರಬಹುದು. ಈಗ ರಾಧೇ ಮಾ ಭಕ್ತರು ಮುಜುಗರ ಅನುಭವಿಸುವಂಥ ಚಿತ್ರಗಳನ್ನು ರಾಹುಲ್ ಮಹಾಜನ್ ಹೊರ ಹಾಕಿದ್ದಾರೆ.

ರಾಧೇ ಮಾ ಅವರ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್ ಬುಕ್ ಆಗಿದೆ. ಬಿಲ್ಡರ್ ಬಾಬಾ ಸಚ್ಚಿದಾನಂದ್ ಗಿರಿ ಅವರು ಮದ್ಯಮಾರಾಟ ಹಗರಣ ಹಾಗೂ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿದ ಆರೋಪ ಹೊತ್ತಿರುವುದು ಎಲ್ಲರಿಗೂ ತಿಳಿದೇ ಇದೆ.[ಕುಂಭಮೇಳಕ್ಕೆ ರಾಧೇ ಮಾಗೆ ಪ್ರವೇಶ ನಿಷೇಧ!]

ಈಗ ರಾಧೇ ಮಾ ಸ್ಕರ್ಟ್ ನಲ್ಲಿರುವ ಹಾಟ್ ಚಿತ್ರಗಳನ್ನು ದಿವಂಗತ ಪ್ರಮೋದ್ ಮಹಾಜನ್ ಅವರ ಪುತ್ರ ರಾಹುಲ್ ಮಹಾಜನ್ ಅವರು ಟ್ವೀಟ್ ಮಾಡಿದ್ದಾರೆ. ಕೆಂಪು ಬಣ್ಣದ ಮಿನಿ ಸ್ಕರ್ಟ್ ನಲ್ಲಿರುವ ಸ್ವಯಂಘೋಷಿತ ದೇವದೂತೆಯ ಅವತಾರ ಕಂಡು ಜನತೆ ಬೆಚ್ಚಿದ್ದಾರೆ. [ಚಿತ್ರಗಳಲ್ಲಿ: ಅಸಾರಮ್ ಬಾಪು 10 ವಿವಾದಗಳು]

ರಾಧೇ ಮಾ ಅವರು ವರದಕ್ಷಿಣೆಗಾಗಿ ಸೊಸೆಯೊಬ್ಬರಿಗೆ ಕಿರುಕುಳ ನೀಡುತ್ತಿರುವ ಅತ್ತೆಗೆ ಸಹಾಯ ಮಾಡಿದ ಆರೋಪ ಹೊತ್ತಿದ್ದಾರೆ. ಇದಲ್ಲದೆ ಸತ್ಸಂಗದ ವೇಳೆ ಬಾಲಿವುಡ್ ಹಾಡುಗಳಿಗೆ ಅಶ್ಲೀಲವಾಗಿ ನೃತ್ಯ ಮಾಡಿದ ಅಪಕೀರ್ತಿಯೂ ರಾಧೇ ಮಾ ಮೇಲಿದೆ.

ವರದಕ್ಷಿಣೆ ಕಿರುಕುಳ: ನಿಕ್ಕಿ ಗುಪ್ತಾ ಎಂಬುವವರು ರಾಧೇ ಮಾ ವಿರುದ್ಧ ಆರೋಪ ಮಾಡಿದ್ದು, ರಾಧೇ ಮಾ ಕುಮ್ಮಕ್ಕಿನಿಂದ ನನ್ನ ಪತಿ ಹಾಗೂ ಅತ್ತೆ ಅವರು ನನಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. [ವಿವಾದದಲ್ಲೇ ಮುಳುಗೆದ್ದ ಟಾಪ್ 10 'ದೇವಮಾನವರು']

ಮದುವೆ ಸಂದರ್ಭದಲ್ಲಿ ನಿಕ್ಕಿ ಗುಪ್ತಾ ಅವರ ಪೋಷಕರು 102 ಕೋಟಿ ರು ಮೌಲ್ಯದ ಆಭರಣವನ್ನು ನೀಡಿದ್ದರು. ಅದರೆ, ಇನ್ನೂ ಹೆಚ್ಚಿನ ಹಣವನ್ನು ಕೇಳುವಂತೆ ರಾಧೇ ಮಾ ಒತ್ತಡ ಹೇರಿದ್ದಾರೆ ಎಂದು ಆರೋಪದಲ್ಲಿ ಹೇಳಲಾಗಿದೆ.(ಒನ್ ಇಂಡಿಯಾ ಸುದ್ದಿ)

English summary
In an another embarrassing revelation, Radhe Maa's images in short skirt have become viral on micro-blogging site Twitter. This time it was Rahul Mahajan who released the pictures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more