ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ; ಕಾಂಗ್ರೆಸ್ ನಾಯಕ ಸಂಜಯ್ ಝಾ ಪಕ್ಷದಿಂದ ಅಮಾನತು

|
Google Oneindia Kannada News

ಮುಂಬೈ, ಜುಲೈ 14 : ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ಸಂಜಯ್ ಝಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತು ಮಾಡಲಾಗಿದೆ. ಕಳೆದ ವಾರ ಅವರನ್ನು ಪಕ್ಷದ ವಕ್ತಾರ ಹುದ್ದೆಯಿಂದ ವಜಾಗೊಳಿಸಲಾಗಿತ್ತು.

ಮಂಗಳವಾರ ಸಂಜಯ್ ಝಾ ಅವರನ್ನು ಪಕ್ಷದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಆರೋಪದ ಹಿನ್ನಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಸಂಜಯ್ ಝಾ ಅಮಾನತುಗೊಳಿಸಲಾಗಿದೆ.

ಗಣೇಶ ಉತ್ಸವಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನು ಪ್ರಕಟಿಸಿದ ಮಹಾರಾಷ್ಟ್ರಗಣೇಶ ಉತ್ಸವಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನು ಪ್ರಕಟಿಸಿದ ಮಹಾರಾಷ್ಟ್ರ

ಪಕ್ಷದ ಧೋರಣೆ, ನೀತಿಯನ್ನು ಖಂಡಿಸಿ ಸಂಜಯ್ ಝಾ ಪತ್ರಿಕೆಯೊಂದಕ್ಕೆ ಲೇಖನ ಬರೆದಿದ್ದರು. ಪಕ್ಷ ತನ್ನ ಪ್ರಜಾತಂತ್ರ, ಉದಾರ ಮೌಲ್ಯ ಹಾಗೂ ಸಹಿಷ್ಣುತೆಯಿಂದ ದೂರ ಸರಿಯುತ್ತಿದೆ ಎಂದು ಲೇಖನದಲ್ಲಿ ಅವರು ಉಲ್ಲೇಖಿಸಿದ್ದರು.

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತದ ಪ್ರಶ್ನೆಯೇ ಇಲ್ಲ: ಸಂಜಯ್ ರಾವತ್ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತದ ಪ್ರಶ್ನೆಯೇ ಇಲ್ಲ: ಸಂಜಯ್ ರಾವತ್

Sanjay Jha

ಕಳೆದ ಬುಧವಾರ ಸಂಜಯ್ ಝಾ ಲೇಖನ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದಂತೆ ಅವರನ್ನು ಪಕ್ಷದ ವಕ್ತಾರ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಪಕ್ಷ ವಿರೋಧಿ ಚಟುಚಟಿಕೆ ದೂರಿನ ಹಿನ್ನಲೆಯಲ್ಲಿ ಇಂದು ಪಕ್ಷದಿಂದ ಅಮಾನತು ಮಾಡಲಾಗಿದೆ.

ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟು; ರಾಹುಲ್ ಭೇಟಿಗೆ ನಿರಾಕರಿಸಿದ ಸಚಿನ್! ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟು; ರಾಹುಲ್ ಭೇಟಿಗೆ ನಿರಾಕರಿಸಿದ ಸಚಿನ್!

ಪಕ್ಷದ ವಕ್ತಾರ ಹುದ್ದೆಯಿಂದ ವಜಾಗೊಂಡ ಬಳಿಕ ಹೇಳಿಕೆ ನೀಡಿದ್ದ ಸಂಜಯ್ ಝಾ, "ಏನೇ ಆಗಲಿ ಇನ್ನು ಮುಂದೆಯೂ ನಾನು ಪಕ್ಷದ ಶಿಸ್ತಿನ ಸಿಪಾಯಿ. ಭಯರಹಿತ ಸಿದ್ಧಾಂತದ ಸೈನಿಕನಾಗಿ ಪಕ್ಷದಲ್ಲಿ ಇರುವೆ" ಎಂದು ಹೇಳಿಕೆ ನೀಡಿದ್ದರು.

English summary
Maharashtra Congress leader Sanjay Jha has been suspended from Congress party with immediate effect. He is suspended for anti-party activities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X