ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್​' ಪ್ರದರ್ಶನಕ್ಕೆ ಕಾಂಗ್ರೆಸ್ ತಕರಾರು

|
Google Oneindia Kannada News

ಮುಂಬೈ, ಡಿಸೆಂಬರ್ 28: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕುರಿತ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್​ಸಿನಿಮಾ ಬಿಡುಗಡೆಗೆ ಮಹಾರಾಷ್ಟ್ರದ ಯೂತ್ ಕಾಂಗ್ರೆಸ್ ತಕರಾರು ತೆಗೆದಿದೆ.

ಚಿತ್ರ ಬಿಡುಗಡೆಗೂ ಮುನ್ನ ಪಕ್ಷದ ಕಚೇರಿಯಲ್ಲಿ ಚಿತ್ರದ ಪ್ರದರ್ಶನ ಏರ್ಪಡಿಸಬೇಕು ಎಂದು ಮಹಾರಾಷ್ಟ್ರದ ಯೂತ್ ಕಾಂಗ್ರೆಸ್​ ಆಗ್ರಹಿಸಿದೆ.

Congress objects to The Accidental Prime Minister, demands prior screening

'ಈ ಚಿತ್ರ ಬಿಡುಗಡೆಗೊಳ್ಳುವ ಮೊದಲು ತನಗೆ ತೋರಿಸಬೇಕು ಮತ್ತು ಕೆಲ ದೃಶ್ಯಗಳು ಸತ್ಯಕ್ಕೆ ದೂರಾಗಿವೆ. ಅಂಥ ದೃಶ್ಯಗಳಿಗೆ ಕತ್ತರಿ ಹಾಕಬೇಕು. ಈ ಬೇಡಿಕೆಗೆ ಮಣಿಯದಿದ್ದರೆ ದೇಶದಲ್ಲಿ ಎಲ್ಲಿಯೂ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಬೆದರಿಕೆ ಹಾಕಿದೆ.

ಈ ಚಿತ್ರದ ಮುಖ್ಯ ಪಾತ್ರದಲ್ಲಿ ನಟ ಅನುಪಮ್​ ಖೇರ್ ನಟಿಸಿದ್ದು, ಚಿತ್ರದ ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಅದು ವೈರಲ್‌ ಆಗಿ, ಸಾಕಷ್ಟು ಚರ್ಚೆ ನಡೆಯುತ್ತಿದೆ.

ಭಾರತೀಯ ಜನತಾ ಪಕ್ಷ(ಬಿಜೆಪಿ) ಕೂಡಾ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಚಿತ್ರದ ಬಗ್ಗೆ ಟ್ವೀಟ್ ಮಾಡಿದೆ.

'ಆಕಸ್ಮಿಕ ಪಿಎಂ' ಎಂಎಂ ಸಿಂಗ್ ಪಾತ್ರದಲ್ಲಿ ಅನುಪಮ್ ಖೇರ್'ಆಕಸ್ಮಿಕ ಪಿಎಂ' ಎಂಎಂ ಸಿಂಗ್ ಪಾತ್ರದಲ್ಲಿ ಅನುಪಮ್ ಖೇರ್

ಯುಪಿಎ ಆಡಳಿತ ಅವಧಿಯಲ್ಲಿನ 2004ರಿಂದ 2014ರ ವರೆಗೆ ಪ್ರಧಾನಿಯಾಗಿದ್ದ ಡಾ. ಮನಮೋಹನ್‌ ಸಿಂಗ್‌ ಅವರನ್ನು ಮುಖ್ಯ ಪಾತ್ರದಲ್ಲಿರುವ ಈ ಚಿತ್ರ 2019ರ ಜನವರಿ 11ರಂದು ತೆರೆಗೆ ಬರಲಿದೆ. ಸಂಜಯ್‌ ಬಾರು ವಿರಚಿತ 'ದಿ ಆ್ಯಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್​' ಶೀರ್ಷಿಕೆಯ ಪುಸ್ತಕವನ್ನು ಆಧರಿಸಿದೆ.

English summary
Raising objections to Anupam Kher’s upcoming movie 'The Accidental Prime Minister,' Maharashtra Youth Congress on Thursday demanded prior screening of the movie for the party’s office bearers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X