ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಚುನಾವಣೆ: ಕಾಂಗ್ರೆಸ್ -ಎನ್ಸಿಪಿ ಸೀಟು ಹಂಚಿಕೆ ಅಂತಿಮ

|
Google Oneindia Kannada News

ಮುಂಬೈ, ಸೆ. 05: ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಾಗಿ ಬಿಜೆಪಿ ಮಿತ್ರಪಕ್ಷಗಳ ನಡುವೆ ಸೀಟು ಹಂಚಿಕೆ ಮುಕ್ತಾಯಗೊಂಡ ಬಳಿಕ, ಕಾಂಗ್ರೆಸ್- ಎನ್ಸಿಪಿ ಸೀಟು ಹಂಚಿಕ ಪಟ್ಟಿ ಪ್ರಕಟವಾಗಿದೆ.

"ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ಎನ್ಸಿಪಿ ತಲಾ 125 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸ್ಕ್ರೀನಿಂಗ್ ಸಮಿತಿ ಸಭೆ ಬಳಿಕ ನಿರ್ಧಾರ ಕೈಗೊಳ್ಳಲಾಗುತ್ತದೆ. ಕಾಂಗ್ರೆಸ್ ಹಾಗೂ ಎನ್ಸಿಪಿ ಸಮಸ್ಥಾನದಲ್ಲಿ ಸ್ಪರ್ಧಿಸಲಿವೆ. ಸದ್ಯಕ್ಕಂತೂ 100 ಸ್ಥಾನಗಳಿಗೆ ಯಾವುದೇ ತಕರಾರು ಕಂಡು ಬಂದಿಲ್ಲ" ಎಂದು ದಲವಾಯಿ ಎಎನ್ಐಗೆ ತಿಳಿಸಿದರು.

ಮಹಾ ವಲಸೆ : ಬಿಜೆಪಿ ಸೇರಲು ಮುಂದಾದ ಎನ್ಸಿಪಿಯ 50 ಶಾಸಕರುಮಹಾ ವಲಸೆ : ಬಿಜೆಪಿ ಸೇರಲು ಮುಂದಾದ ಎನ್ಸಿಪಿಯ 50 ಶಾಸಕರು

"ಪೈಪೋಟಿ ಹೆಚ್ಚಾಗಿರುವ ಸ್ಥಾನಗಳ ಬಗ್ಗೆ ಚರ್ಚೆ ಆರಂಭಗೊಂಡಿದೆ. ಅಂತಿಮ ಪಟ್ಟಿಯನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ಪರಿಶೀಲಿಸಿ, ಅಭ್ಯರ್ಥಿ ಪಟ್ಟಿಯನ್ನು ಪ್ರಕಟಿಸಲಿದೆ" ಎಂದರು.

Congress NCP contest on 125 seats each in upcoming Maharashtra assembly polls

ಮಹಾರಾಷ್ಟ್ರದಲ್ಲಿ ಒಟ್ಟು 288 ವಿಧಾನಸಭಾ ಸ್ಥಾನಗಳಿದ್ದು, ಕಾಂಗ್ರೆಸ್ ಹಾಗೂ ಎನ್ಸಿಪಿ 250ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಈ ವರ್ಷಾಂತ್ಯದೊಳಗೆ ಚುನಾವಣೆ ನಡೆಯುವ ಸಾಧ್ಯತೆಯಿದೆ.

English summary
Congress Rajya Sabha MP Husain Dalwadi on Thursday said that the Congress and Nationalist Congress Party (NCP) will be contesting on 125 seats each in the upcoming Maharashtra assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X