ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಸೇನೆಗೆ ಬೆಂಬಲ ನೀಡುವುದು ದುರಂತದ ನಡೆ ಎಂದ ಕಾಂಗ್ರೆಸ್ ಮುಖಂಡ

|
Google Oneindia Kannada News

ಮುಂಬೈ, ನವೆಂಬರ್ 11: "ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಎನ್ ಸಿಪಿ ಮೈತ್ರಿ ಪಕ್ಷ ಶಿವಸೇನೆ ಬೆಂಬಲಕ್ಕೆ ನಿಂತರೆ ಅದು ದುರಂತದ ನಡೆಯಾಗಲಿದೆ" ಎಂದು ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ಹೇಳಿದ್ದಾರೆ.

ಶಿವಸೇನೆಯ ಏಕೈಕ ಕೇಂದ್ರ ಸಚಿವರ ರಾಜೀನಾಮೆ, ಗರಿಗೆದರಿತು 'ಮಹಾ' ರಾಜಕೀಯಶಿವಸೇನೆಯ ಏಕೈಕ ಕೇಂದ್ರ ಸಚಿವರ ರಾಜೀನಾಮೆ, ಗರಿಗೆದರಿತು 'ಮಹಾ' ರಾಜಕೀಯ

ಮಹಾರಾಷ್ಟ್ರ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ಸಂಜಯ್ ನಿರುಪಮ್, ರಾಜ್ಯಪಾಲರು ಮೊದಲು ಕಾಂಗ್ರೆಸ್ ಮತ್ತು ಎನ್ಸಿಪಿ ಮೈತ್ರಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದರು. ಆದರೆ ಬಹುಮತವಿರಲಿಲ್ಲ. 288 ಕ್ಷೇತ್ರಗಳ ವಿಧಾನಸಭೆಯಲ್ಲಿ ಎನ್ ಸಿಪಿ-ಕಾಂಗ್ರೆಸ್ ಮೈತ್ರಿಪಕ್ಷ ಕೇವಲ 98 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಬಹುಮತಕ್ಕೆ ಅಗತ್ಯವಿರುವ ಮ್ಯಾಜಿಕ್ ನಂಬರ್ 145 ಅನ್ನು ತಲುಪಲು ಸಾಧ್ಯವಾಗದ ಕಾರಣ ಇದೀಗ ಶಿವಸೇನೆ ಈ ಎರಡು ಮೈತ್ರಿಪಕ್ಷಗಳೊಂದಿಗೆ ಸೇರಿ ಸರ್ಕಾರ ರಚಿಸುವ ಚಿಂತನೆಯಲ್ಲಿದೆ.

Congress Leader Warns Congress And NCP To No To Give Supoort To Shiv Sena

ಈಗಾಗಲೇ ರಾಜ್ಯಪಾಲ ಭಗತ್​ ಸಿಂಗ್​ ಕೋಶಿಯಾರಿ ಅವರು ಶಿವಸೇನೆಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ್ದಾರೆ. ಜೊತೆಗೆ ಶಿವಸೇನೆಯ ಏಕೈಕ ಕೇಂದ್ರ ಸಚಿವ ಅರವಿಂದ್ ಸಾವಂತ್ ಅವರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಎನ್ ಸಿಪಿ ಶಿವಸೇನೆಗೆ ಬೆಂಬಲನೀಡುವ ತಯಾರಿಯಲ್ಲಿದೆ ಎಂಬ ಸೂಚನೆ ನೀಡಿದೆ.

English summary
Congress Leader Sanjay Nirupam Said, It will Be a Disastrous Move If NCP and Congress Supports Shiv Sena,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X