ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ದುರ್ಬಲವಾಗಿದೆ, ಪವಾರ್ ಯುಪಿಎ ಮುಖ್ಯಸ್ಥರಾದರೆ ಬೆಂಬಲ: ಶಿವಸೇನಾ

|
Google Oneindia Kannada News

ಮುಂಬೈ, ಡಿಸೆಂಬರ್ 11: ಯುಪಿಎ ಅಧ್ಯಕ್ಷ ಸ್ಥಾನದಿಂದ ಸೋನಿಯಾ ಗಾಂಧಿ ಅವರು ಕೆಳಕ್ಕಿಳಿಯಲಿದ್ದು, ಅವರ ಸ್ಥಾನಕ್ಕೆ ತಮ್ಮನ್ನು ಆಯ್ಕೆ ಮಾಡಲಾಗುತ್ತದೆ ಎಂಬ ಚರ್ಚೆಯನ್ನು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ತಿರಸ್ಕರಿಸಿದ್ದಾರೆ. ಆದರೆ ಈ ಸಂಬಂಧ ಅಧಿಕೃತವಾದ ಪ್ರಸ್ತಾವ ಬಂದರೆ ಖಂಡಿತಾ ಶರದ್ ಪವಾರ್ ಅವರನ್ನು ಬೆಂಬಲಿಸುವುದಾಗಿ ಶಿವಸೇನಾ ತಿಳಿಸಿದೆ.

'ಶರದ್ ಪವಾರ್ ಸರ್ ಅವರು ಯುಪಿಎ ಅಧ್ಯಕ್ಷರಾದರೆ ನಮಗೆ ಬಹಳ ಸಂತೋಷವಾಗುತ್ತದೆ. ಆದರೆ ಅವರು ವೈಯಕ್ತಿಕವಾಗಿ ಅದನ್ನು ತಿರಸ್ಕರಿಸಿದ್ದಾರೆ ಎಂದು ಕೇಳಿದೆ. ಅಂತಹ ಪ್ರಸ್ತಾವ ಅಧಿಕೃತವಾಗಿ ಮುನ್ನಲೆಗೆ ಬಂದರೆ ನಾವು ಅವರನ್ನು ಬೆಂಬಲಿಸುತ್ತೇವೆ' ಎಂದು ಶಿವಸೇನಾದ ರಾಜ್ಯಸಭೆ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.

ಸೋನಿಯಾ ನಿವೃತ್ತಿ ಬಳಿಕ ಯುಪಿಎ ಸಾರಥ್ಯ ಯಾರಿಗೆ?: ಮುಂಚೂಣಿಯಲ್ಲಿ ಯಾರ ಹೆಸರು?ಸೋನಿಯಾ ನಿವೃತ್ತಿ ಬಳಿಕ ಯುಪಿಎ ಸಾರಥ್ಯ ಯಾರಿಗೆ?: ಮುಂಚೂಣಿಯಲ್ಲಿ ಯಾರ ಹೆಸರು?

ಅತಿ ಹಳೆಯ ಪಕ್ಷವಾದ ಕಾಂಗ್ರೆಸ್ ಈಗ ದುರ್ಬಲವಾಗಿದೆ. ಹೀಗಾಗಿ ವಿರೋಧಪಕ್ಷಗಳೆಲ್ಲವೂ ಒಟ್ಟಾಗಿ ಸೇರಿ ಯುಪಿಎಯನ್ನು ಬಲಪಡಿಸಬೇಕು ಎಂದು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿಯ ಮಿತ್ರಪಕ್ಷವಾಗಿರುವ ಶಿವಸೇನಾ ಹೇಳಿದೆ. ಮುಂದೆ ಓದಿ.

ಶರದ್ ಪವಾರ್ ಸಮರ್ಥರು

ಶರದ್ ಪವಾರ್ ಸಮರ್ಥರು

ರಾಜಕೀಯದಲ್ಲಿ ಏನು ಬೇಕಾದರೂ ಸಂಭವಿಸಬಹುದು. ಮಾಜಿ ಕೇಂದ್ರ ಸಚಿವ ಶರದ್ ಪವಾರ್ ಅವರು ರಾಷ್ಟ್ರಮಟ್ಟದ ದೊಡ್ಡ ಹುದ್ದೆಗೆ ಅರ್ಹರಾಗಿದ್ದಾರೆ. ಅವರಿಗೆ ದೇಶವನ್ನು ಮುನ್ನಡೆಸುವ ಎಲ್ಲ ಸಾಮರ್ಥ್ಯವೂ ಇದೆ ಎಂದು ಸಂಜಯ್ ರಾವತ್ ಅಭಿಪ್ರಾಯಪಟ್ಟಿದ್ದಾರೆ.

ನಾಡಿಮಿಡಿತ ಚೆನ್ನಾಗಿ ಅರಿವಿದೆ

ನಾಡಿಮಿಡಿತ ಚೆನ್ನಾಗಿ ಅರಿವಿದೆ

'ದೇಶದ ಮುಂದಿರುವ ಸಮಸ್ಯೆಗಳ ಬಗ್ಗೆ ಶರದ್ ಪವಾರ್ ಅವರು ಅಪಾರ ಅನುಭವ, ಜ್ಞಾನ ಹೊಂದಿದ್ದಾರೆ. ಅವರಿಗೆ ಜನರ ನಾಡಿಮಿಡಿತ ಕೂಡ ಚೆನ್ನಾಗಿ ಗೊತ್ತಿದೆ ಎಂದು ರಾವತ್ ಹೇಳಿದ್ದಾರೆ.

''ಪೆಟ್ರೋಲ್ ಬಂಕ್‌ಗೆ ನರೇಂದ್ರ ಮೋದಿ ವಸೂಲಿ ಕೇಂದ್ರ ಎಂದು ಹೆಸರಿಡಿ''''ಪೆಟ್ರೋಲ್ ಬಂಕ್‌ಗೆ ನರೇಂದ್ರ ಮೋದಿ ವಸೂಲಿ ಕೇಂದ್ರ ಎಂದು ಹೆಸರಿಡಿ''

ಆಧಾರ ರಹಿತ ಎಂದ ಎನ್‌ಸಿಪಿ

ಆಧಾರ ರಹಿತ ಎಂದ ಎನ್‌ಸಿಪಿ

ಯುಪಿಎ ಅಧ್ಯಕ್ಷ ಸ್ಥಾನದಿಂದ ಸೋನಿಯಾ ಗಾಂಧಿ ನಿವೃತ್ತರಾಗುವ ದಿನಗಳು ಸಮೀಪಿಸಿದ್ದು, ಶರದ್ ಪವಾರ್ ಅವರು ಈ ಸ್ಥಾನಕ್ಕೆ ಏರುವ ಸಾಧ್ಯತೆ ಹೆಚ್ಚಾಗಿದೆ ಎಂಬ ಮಾಧ್ಯಮ ವರದಿಗಳನ್ನು ಎನ್‌ಸಿಪಿ ಆಧಾರ ರಹಿತ ಎಂದು ಗುರುವಾರ ತಳ್ಳಿಹಾಕಿದೆ.

ಗಮನ ತಿರುಗಿಸುವ ಪ್ರಯತ್ನ

ಗಮನ ತಿರುಗಿಸುವ ಪ್ರಯತ್ನ

'ಅಂತಹ ಯಾವುದೇ ಪ್ರಸ್ತಾವದ ಬಗ್ಗೆ ಯುಪಿಎ ಪಾಲುದಾರ ಪಕ್ಷಗಳ ನಡುವೆ ಯಾವುದೇ ಚರ್ಚೆ ನಡೆದಿಲ್ಲ ಎಂದು ರಾಷ್ಟ್ರೀಯವಾದ ಕಾಂಗ್ರೆಸ್ ಪಕ್ಷ ಸ್ಪಷ್ಟಪಡಿಸಲು ಬಯಸುತ್ತದೆ. ಪ್ರಸ್ತುತ ನಡೆಯುತ್ತಿರುವ ರೈತರ ಪ್ರತಿಭಟನೆಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸ್ವಹಿತಾಸಕ್ತಿಯ ಗುಂಪುಗಳು ಇಂತಹ ಸುದ್ದಿಯನ್ನು ಸೃಷ್ಟಿಸಿವೆ' ಎಂದು ಎನ್‌ಸಿಪಿ ವಕ್ತಾರ ಮಹೇಶ್ ತಪಾಸೆ ಹೇಳಿದ್ದಾರೆ.

English summary
Shiv Sena MP Sanjay Raut said, Congress has become weak now, we will be happy f Sharad Pawar becomes UPA chairman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X