ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಗ ದಿನದಂದು ಸೇನೆಗೆ ಅವಮಾನ: ರಾಹುಲ್ ಗಾಂಧಿ ವಿರುದ್ಧ ದೂರು

|
Google Oneindia Kannada News

Recommended Video

ರಾಹುಲ್ ಗಾಂಧಿ ವಿರುದ್ಧ ದೂರು | Oneindia Kannada

ಮುಂಬೈ, ಜೂನ್ 24: ಅಂತಾರಾಷ್ಟ್ರೀಯ ಯೋಗ ದಿನದಂದು ಸೇನಾ ಪಡೆಯ ಶ್ವಾನದಳ ಯೋಗ ಮಾಡುವ ಚಿತ್ರವನ್ನು ಹಂಚಿಕೊಂಡು ಟ್ವೀಟ್ ಮಾಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಮುಂಬೈ ಮೂಲದ ವಕೀಲ ಅಟಲ್ ಬಿಹಾರಿ ದುಬೆ ಎಂಬುವವರು ದೂರು ನೀಡಿದ್ದಾರೆ.

ಐಪಿಸಿ ಸೆಕ್ಷನ್ 505ರ (ಸಾರ್ವಜನಿಕವಾಗಿ ದುರ್ವರ್ತನೆ ತೋರಿದ್ದು) ಅಡಿ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಅವರು ಆಜಾದ್ ಮೈದಾನ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಕೋರಿದ್ದಾರೆ.

ಭಾರತೀಯ ಸೇನೆಗೆ ಅಗೌರವ ತೋರಿದ ರಾಹುಲ್ ಗಾಂಧಿ?ಭಾರತೀಯ ಸೇನೆಗೆ ಅಗೌರವ ತೋರಿದ ರಾಹುಲ್ ಗಾಂಧಿ?

ಸೇನಾ ಪಡೆಯ ಶ್ವಾನಗಳು ಮತ್ತು ಅವುಗಳ ತರಬೇತುದಾರರು ಅಂತಾರಾಷ್ಟ್ರೀಯ ಯೋಗ ದಿನದಂದು ಯೋಗ ಮಾಡುವ ಚಿತ್ರವನ್ನು ರಾಹುಲ್‌ ಗಾಂಧಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 'ನವಭಾರತ' ಘೋಷಣೆಯನ್ನು ಅಣಕಿಸುವಂತೆ 'ನ್ಯೂ ಇಂಡಿಯಾ' ಎಂದು ವ್ಯಂಗ್ಯವಾಗಿ ಬರೆದಿದ್ದರು.

ರಾಹುಲ್ ಗಾಂಧಿ ಅವರ ಟ್ವೀಟ್‌ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ರಾಹುಲ್ ಗಾಂಧಿ ಅವರ ಕೀಳು ಮನಸ್ಥಿತಿಯನ್ನು ಇದು ಪ್ರದರ್ಶಿಸುತ್ತದೆ ಎಂದು ಟೀಕಿಸಲಾಗಿತ್ತು. ಆದರೆ, ಇದುವರೆಗೂ ರಾಹುಲ್ ಗಾಂಧಿ ತಮ್ಮ ಟ್ವೀಟ್‌ಗೆ ವ್ಯಕ್ತವಾದ ವಿರೋಧಗಳಿಗೆ ಪ್ರತಿಕ್ರಿಯೆ ನೀಡಿಲ್ಲ.

ರಾಹುಲ್ ಗಾಂಧಿ ಟ್ವೀಟ್

ರಾಹುಲ್ ಗಾಂಧಿ ಟ್ವೀಟ್

'ನನ್ನ ಟ್ವಿಟ್ಟರ್ ಖಾತೆಯನ್ನು ಪರಿಶೀಲಿಸುತ್ತಿದ್ದಾಗ 2019ರ ಜೂನ್ 21ರ ಸಂಜೆ 4.12ರ ಸುಮಾರಿಗೆ ರಾಹುಲ್ ಗಾಂಧಿ ಅವರು ಎರಡು ಚಿತ್ರಗಳನ್ನು 'ನ್ಯೂ ಇಂಡಿಯಾ' ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿರುವುದು ತಿಳಿಯಿತು. ಸೇನಾ ಯೋಧರೊಂದಿಗೆ ಶ್ವಾನದಳವು ಯೋಗ ಮಾಡುವ ಚಿತ್ರವನ್ನು ಸೇನಾ ಶ್ವಾನದಳದ ಘಟಕದಿಂದ ಪಡೆದುಕೊಳ್ಳಲಾಗಿತ್ತು' ಎಂದು ದುಬೆ ಅವರು ತಮ್ಮ ದೂರಿನಲ್ಲಿ ಹೇಳಿದ್ದಾರೆ.

ಸೇನೆಯನ್ನು ಅವಮಾನಿಸುವ ಉದ್ದೇಶ

ಸೇನೆಯನ್ನು ಅವಮಾನಿಸುವ ಉದ್ದೇಶ

'ರಾಹುಲ್ ಗಾಂಧಿ ಅವರ ಕಿಡಿಗೇಡಿತನದ ಪೋಸ್ಟ್, ಸಾರ್ವಜನಿಕ ಶಾಂತಿಯನ್ನು ಕದಡುವ ಮತ್ತು ನಮ್ಮ ಸೇನೆಯನ್ನು ಅವಮಾನಿಸುವ ಉದ್ದೇಶವನ್ನು ಹೊಂದಿದೆ. ಜನರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಮತ್ತು ಅದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ' ಎಂದು ಅವರು ದೂರಿದ್ದಾರೆ.

ನಿಮಗಿಂತ ನಾಯಿಗಳೇ ಜಾಣ: ರಾಹುಲ್ ಗಾಂಧಿ ಕಾಲೆಳೆದ ಪರೇಶ್ ರಾವಲ್ನಿಮಗಿಂತ ನಾಯಿಗಳೇ ಜಾಣ: ರಾಹುಲ್ ಗಾಂಧಿ ಕಾಲೆಳೆದ ಪರೇಶ್ ರಾವಲ್

ರಾಹುಲ್ ಗಾಂಧಿ ಋಣಾತ್ಮಕತೆ

ರಾಹುಲ್ ಗಾಂಧಿ ಋಣಾತ್ಮಕತೆ

"ಇಂದು ಅವರ ಋಣಾತ್ಮಕತೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಮೊದಲಿಗೆ ತ್ರಿವಳಿ ತಲಾಖ್ ಮಸೂದೆಯನ್ನು ವಿರೋಧಿಸುವ ಮೂಲಕ ಋಣಾತ್ಮಕ ಮನಸ್ಥಿತಿಯನ್ನು ತೋರಿಸಿಕೊಟ್ಟರು, ಈಗ ಯೋಗದಿನದಂದು ನಮ್ಮ ಸೇನೆಯನ್ನು ಅವಮಾನ ಮಾಡಿದರು(ಮತ್ತೊಮ್ಮೆ)" ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ನಾಯಿಗಳೇ ಚುರುಕು

ನಾಯಿಗಳೇ ಚುರುಕು

ರಾಹುಲ್ ನಿಮಗಿಂತಲೂ ನಾಯಿಗಳೇ ಹೆಚ್ಚು ಚುರುಕು ಎಂದು ಟ್ವೀಟ್ ಮಾಡುವ ಮೂಲಕ ಬಿಜೆಪಿಯ ಮಾಜಿ ಸಂಸದ ಪರೇಶ್ ರಾವಲ್ ಅವರು ರಾಹುಲ್ ಗಾಂಧಿ ಅವರನ್ನು ಲೇವಡಿ ಮಾಡಿದ್ದಾರೆ.

ರಾಹುಲ್ ಗಾಂಧಿ ಟ್ವೀಟ್ ಗೆ ಅಮಿತ್ ಶಾ ಖಡಕ್ ಪ್ರತಿಕ್ರಿಯೆರಾಹುಲ್ ಗಾಂಧಿ ಟ್ವೀಟ್ ಗೆ ಅಮಿತ್ ಶಾ ಖಡಕ್ ಪ್ರತಿಕ್ರಿಯೆ

English summary
A Mumbai based lawyer has filed a complaint against Congress President Rahul Gandhi for his tweet on the International Yoga day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X