• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೇಶ ತೊರೆಯದಂತೆ ಕಾಮಿಡಿಯನ್ ಕುನಾಲ್ ಕಾಮ್ರಾಗೆ ತಡೆ

|
Google Oneindia Kannada News

ಮುಂಬೈ, ಜನವರಿ 29:

ಈ ಕುರಿತಂತೆ ಕುನಾಲ್ ಅವರಿಗೆ ನೋಟಿಸ್ ಜಾರಿಯಾಗಿತ್ತು. ನೋಟಿಸ್ ಗೆ ಉತ್ತರಿಸಿ ಸುಪ್ರೀಂಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಅಫಿಡವಿಟ್ ನಲ್ಲಿ ''ನ್ಯಾಯಾಂಗದಲ್ಲಿನ ನಡೆಯಿಂದಾಗಿ ಸಾರ್ವಜನಿಕ ನಂಬಿಕೆ ಸ್ಥಾಪನೆಯಾಗಿದೆಯೇ ಹೊರತು ಟೀಕೆಗಳಿಂದ ಅಲ್ಲ'' ಎಂದಿದ್ದಾರೆ.

ತಮ್ಮ ಟ್ವೀಟ್, ಹಾಸ್ಯಭರಿತ ಟೀಕೆಗಳಿಂದ ವಿಶ್ವದ ಪ್ರಭಾವಿ ನ್ಯಾಯಾಲಯದ ಅಸ್ಥಿಭಾರವೇ ಕುಸಿಯುತ್ತದೆ ಎಂದರೆ ನನ್ನ ಸಾಮರ್ಥ್ಯವನ್ನು ಅತಿಯಾಗಿ ಅಂದಾಜು ಮಾಡಿದಂತಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಸಂಸ್ಥೆ ಟೀಕೆಗೆ ಮೀರಿದ್ದು ಎಂದು ನಂಬುವುದು ಹೇಗೆ? ವಲಸೆ ನೀತಿ ಇಲ್ಲದೆ ದೇಶದೆಲ್ಲೆಡೆ ಲಾಕ್ಡೌನ್ ಸಂದರ್ಭದಲ್ಲಿ ಮನೆಗೆ ಮರಳಲು ಆದೇಶ ನೀಡಿದಂತೆ ಆಗಿದೆ, ಇದು ಪ್ರಜಾಪ್ರಭುತ್ವ ವಿರೋಧಿ ಎಂದು ಹೇಳಿದ್ದಾರೆ.

ಮುನವರ್ ಫಾರೂಕಿ ಹಾಸ್ಯ ಮಾಡಿದ್ದಕ್ಕೆ ಶಿಕ್ಷೆ ಅನುಭವಿಸುತ್ತಿದ್ದಾರೆ, ವಿದ್ಯಾರ್ಥಿಗಳನ್ನು ದೇಶದ್ರೋಹಿ ಎಂದು ಶಿಕ್ಷೆಗೊಳಪಡಿಸಲಾಗುತ್ತದೆ, ಇವೆಲ್ಲ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಆಕ್ರಮಣಕ್ಕೆ ಸಾಕ್ಷಿ ಎಂದು ಕುನಾಲ್ ಕಿಡಿಕಾರಿದ್ದಾರೆ.

ಅರ್ನರ್ಬ್ ಗೋಸ್ವಾಮಿ ಅವರಿಗೆ ಜಾಮೀನು ದೊರೆತ ಸಂದರ್ಭದಲ್ಲಿ....
'ಪ್ರೈಮ್ ಟೈಮ್‌ನ ಲೌಡ್ ಸ್ಪೀಕರ್ (ಅರ್ನಬ್ ಗೋಸ್ವಾಮಿ) ಪರವಾಗಿ ಪಕ್ಷಪಾತಿ ನಿರ್ಣಯ ಪ್ರಕಟಿಸಿದ್ದ ಸುಪ್ರೀಂಕೋರ್ಟ್ ಕುರಿತು ನನ್ನ ಅಭಿಪ್ರಾಯಗಳನ್ನು ಟ್ವೀಟ್ ಮಾಡಿದ್ದೇನೆ. ಇತರೆ ವ್ಯಕ್ತಿಗಳ ವೈಯಕ್ತಿಕ ಸ್ವಾತಂತ್ರ್ಯದ ವಿಚಾರಗಳು ಟೀಕೆಗೆ ಒಳಗಾಗದೆ ಸುಪ್ರೀಂಕೋರ್ಟ್ ಮೌನವಹಿಸಿರುವುದರಿಂದ ನನ್ನ ದೃಷ್ಟಿಕೋನ ಬದಲಾಗುವುದಿಲ್ಲ' ಎಂದು ಕುನಾಲ್ ಬರೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Comedian Kunal Kamra held at Mumbai airport. Not allowed to leave country. Kunal Kamra is facing contempt of court case
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X