• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮನೆಯಲ್ಲಿ ಡ್ರಗ್ಸ್ ಪತ್ತೆ: ಖ್ಯಾತ ಹಾಸ್ಯ ಕಲಾವಿದೆ ಭಾರತಿ ಸಿಂಗ್ ಬಂಧನ

|

ಮುಂಬೈ, ನವೆಂಬರ್ 21: ಜನಪ್ರಿಯ ಹಾಸ್ಯ ಕಲಾವಿದೆ ಭಾರತಿ ಸಿಂಗ್ ಅವರ ಮನೆಯಲ್ಲಿ ಮಾದಕವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಮಾದಕವಸ್ತು ನಿಯಂತ್ರಣ ಬ್ಯೂರೋ (ಎನ್‌ಸಿಬಿ) ಅವರನ್ನು ಬಂಧಿಸಿದೆ.

ಭಾರತಿ ಸಿಂಗ್ ಅವರ ಮುಂಬೈ ನಿವಾಸದ ಮೇಲೆ ಶನಿವಾರ ಬೆಳಿಗ್ಗೆ ದಾಳಿ ನಡೆಸಿದ್ದ ಎನ್‌ಸಿಬಿಗೆ ಕ್ಯಾನ್ನಬಿಸ್ ಮಾದಕವಸ್ತು ಪತ್ತೆಯಾಗಿತ್ತು. ಭಾರತಿ ಸಿಂಗ್ ಮತ್ತು ಅವರ ಪತಿ ಇಬ್ಬರೂ ಮಾದಕವಸ್ತಗಳ ಸೇವನೆ ಮಾಡುತ್ತಿದ್ದದ್ದನ್ನು ಒಪ್ಪಿಕೊಂಡಿದ್ದಾರೆ. ಭಾರತಿ ಅವರನ್ನು ಭಾನುವಾರ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು. ಅವರು ಎನ್‌ಸಿಬಿ ವಶದಲ್ಲಿಯೇ ಶನಿವಾರ ರಾತ್ರಿ ಇರಲಿದ್ದಾರೆ.

ಭಾರತಿ ಸಿಂಗ್ ಮತ್ತು ಅವರ ಪತಿ ಹರ್ಷ್ ಅವರ ಮನೆಯ ಮೇಲೆ ಎನ್‌ಸಿಬಿ ದಾಳಿ ನಡೆಸಿ ಸ್ವಲ್ಪ ಪ್ರಮಾಣದ ಕ್ಯಾನ್ನಬಿಸ್ ಅನ್ನು ವಶಪಡಿಸಿಕೊಂಡಿತ್ತು. ಮನರಂಜನಾ ಕ್ಷೇತ್ರದಲ್ಲಿ ವ್ಯಾಪಕ ಮಾದಕವಸ್ತು ಬಳಕೆ ನಡೆಯುತ್ತಿದೆ ಎಂಬ ಆರೋಪದಡಿ ನಡೆಯುತ್ತಿರುವ ತನಿಖೆ ಭಾಗವಾಗಿ ಈ ದಾಳಿ ನಡೆದಿದೆ.

'ಈ ಹಿಂದೆ ದೊರೆತ ಮಾಹಿತಿಗಳ ಆಧಾರದಲ್ಲಿ ಎನ್‌ಸಿಬಿಯು ನಟಿ-ಹಾಸ್ಯ ಕಲಾವಿದೆ ಭಾರತಿ ಸಿಂಗ್ ಅವರ ನಿರ್ಮಾಣ ಕಚೇರಿ ಮತ್ತು ಮನೆಗಳ ಮೇಲೆ ದಾಳಿ ನಡೆಸಿದ್ದು, ಎರಡೂ ಕಡೆಗಳಿಂದ 86.5 ಗ್ರಾಂಗಳಷ್ಟು ಗಾಂಜಾ ಪತ್ತೆಯಾಗಿದೆ' ಎಂದು ಎನ್‌ಸಿಬಿ ಹೇಳಿಕೆ ನೀಡಿದೆ.

'ಭಾರತಿ ಸಿಂಗ್ ಮತ್ತು ಅವರ ಪತಿ ಹರ್ಷ್ ಲಿಂಬಾಚಿಯಾ ಅವರು ಗಾಂಜಾ ಸೇವನೆ ಮಾಡುವುದನ್ನು ಒಪ್ಪಿಕೊಂಡಿದ್ದಾರೆ. ಎನ್‌ಡಿಪಿಎಸ್ ಕಾಯ್ದೆ 1986ರ ನಿಯಮಗಳ ಅಡಿ ಭಾರತಿ ಸಿಂಗ್ ಅವರನ್ನು ಬಂಧಿಸಲಾಗಿದ್ದು, ಹರ್ಷ್ ಲಿಂಬಾಚಿಯಾ ಅವರ ವಿಚಾರಣೆ ನಡೆಯುತ್ತಿದೆ' ಎಂದು ತಿಳಿಸಿದೆ.

English summary
Comedian Bharti Singh has been arrested by NCB after drugs recovered from her residence during a raid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X