India
 • search
 • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎರಡು ಬಾರಿ ರಾಜೀನಾಮೆ ನೀಡಲು ಸಿದ್ಧರಾಗಿದ್ದ ಉದ್ಧವ್ ಠಾಕ್ರೆ: ತಡೆದವರು ಯಾರು?

|
Google Oneindia Kannada News

ಮುಂಬೈ ಜೂನ್ 28: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆ ಈ ಸಮಯದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಎರಡು ಬಾರಿ ರಾಜೀನಾಮೆ ನೀಡಲು ಬಯಸಿದ್ದರು ಎಂಬುದು ಮುನ್ನೆಲೆಗೆ ಬಂದಿದೆ. ಮೂಲಗಳ ಪ್ರಕಾರ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೋಮವಾರ, ಜೂನ್ 27 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಬಯಸಿದ್ದರು. ಆದರೆ ಅವರನ್ನು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಎರಡೂ ಬಾರಿ ತಡೆದಿದ್ದಾರೆ ಎನ್ನಲಾಗುತ್ತಿದೆ. ಮುಖ್ಯಮಂತ್ರಿ ಠಾಕ್ರೆ ಇಂದು ಸಂಜೆ 5 ಗಂಟೆಗೆ ಸಾಮಾಜಿಕ ಮಾಧ್ಯಮದ ಮೂಲಕ ನಿರ್ಧಾರವನ್ನು ಪ್ರಕಟಿಸಲು ಬಯಸಿದ್ದಾರೆ ಎಂದು ವರದಿಯಾಗಿದೆ.

   ಮಹಾ ರಾಜಕೀಯಕ್ಕೆ‌ ರಣರೋಚಕ ತಿರುವು:BJP ಜೊತೆ ಶಿಂಧೆ ಮೈತ್ರಿ ಮಾಡ್ಕೊಳ್ಳೊದು ಪಕ್ಕಾ!!! | *Politics | OneIndia

   ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದಂತೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಉದ್ಧವ್ ಠಾಕ್ರೆ ಅವರಿಗೆ ಮನವರಿಕೆ ಮಾಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇ ಹೇಳಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಎರಡು ಬಾರಿ ರಾಜೀನಾಮೆ ನೀಡಲು ಮುಂದಾದರು, ಆದರೆ ಶರದ್ ಪವಾರ್ ಅವರು ನಿರಾಕರಿಸಿದರು ಎಂದು ವರದಿಯಾಗಿದೆ.

   'ಬಂಡಾಯ ಶಾಸಕರು ಬಯಸಿದರೆ ರಾಜೀನಾಮೆಗೆ ಸಿದ್ಧ'

   'ಬಂಡಾಯ ಶಾಸಕರು ಬಯಸಿದರೆ ರಾಜೀನಾಮೆಗೆ ಸಿದ್ಧ'

   ಶಿವಸೇನೆಯ ಬಂಡಾಯ ಶಾಸಕರು ಬಯಸಿದರೆ ಸಿಎಂ ಹುದ್ದೆ ತೊರೆಯಲು ಸಿದ್ಧ ಎಂದು ಕಳೆದ ವಾರ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದರು. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಶಾಸಕರು ಬಯಸಿದರೆ ಶಿವಸೇನೆ ಮುಖ್ಯಸ್ಥ ಸ್ಥಾನವನ್ನು ತ್ಯಜಿಸಲು ಸಿದ್ಧ ಎಂದು ಹೇಳಿದ್ದಾರೆ. "ಶಿವಸೇನೆ ಮುಖ್ಯಸ್ಥ ಸ್ಥಾನವನ್ನು ಸಹ ಬಿಟ್ಟುಕೊಡಲು ನಾನು ಸಿದ್ಧನಿದ್ದೇನೆ. ಇದನ್ನು ನನ್ನ ಶಿವಸೈನಿಕರು ನನಗೆ ತಿಳಿಸಬೇಕು ಮತ್ತು ನಾನು ಎರಡೂ ಹುದ್ದೆಗಳನ್ನು ತ್ಯಜಿಸುತ್ತೇನೆ. ಆದರೆ ಮುಖಾಮುಖಿಯಾಗಿ ನನಗೆ ಹೇಳಲಿ" ಎಂದು ಠಾಕ್ರೆ ಹೇಳಿದರು.

   ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು

   ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು

   ಮಹಾರಾಷ್ಟ್ರದ ಶಿವಸೇನೆಯ ಬಂಡಾಯ ಶಾಸಕ ಏಕನಾಥ್ ಶಿಂಧೆ ತಮ್ಮ ಬಳಿ 40-50 ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ. ಏಕನಾಥ್ ಶಿಂಧೆ ಮತ್ತು ಇತರ ಹಲವಾರು ಶಾಸಕರು ಪಕ್ಷದ ವಿರುದ್ಧ ಬಂಡಾಯವೆದ್ದ ನಂತರ, ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಸೇರಿದಂತೆ ಎಂವಿಎ ಸರ್ಕಾರ ಬಿಕ್ಕಟ್ಟಿನಲ್ಲಿ ಮುಳುಗಿದೆ. ಉದ್ಧವ್ ಠಾಕ್ರೆ ಅವರ ರಾಜೀನಾಮೆ ಹೇಳಿಕೆಯಿಂದಾಗಿ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದೆ.

   'ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ'

   'ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ'

   ಏಕನಾಥ್ ಶಿಂಧೆ ಅವರ ಪಾಳೆಯಕ್ಕೆ ದೊಡ್ಡ ಪರಿಹಾರವಾಗಿ, ಸೋಮವಾರ ಸುಪ್ರೀಂ ಕೋರ್ಟ್ ಬಂಡಾಯ ಶಾಸಕರ ವಿರುದ್ಧದ ಅನರ್ಹತೆಯ ಪ್ರಕ್ರಿಯೆಗಳನ್ನು ಜುಲೈ 11 ಕ್ಕೆ ಮುಂದೂಡಿದೆ. ನ್ಯಾಯಾಲಯದ ಆದೇಶದ ನಂತರ, ಮಹಾ ವಿಕಾಸ್ ಅಘಾಡಿ ಸರ್ಕಾರಕ್ಕೆ ಬೆಂಬಲವನ್ನು ಹಿಂಪಡೆಯಲು ಏಕನಾಥ್ ಶಿಂಧೆ ಬಣ ಶೀಘ್ರದಲ್ಲೇ ಮಹಾರಾಷ್ಟ್ರ ರಾಜ್ಯಪಾಲರನ್ನು ಸಂಪರ್ಕಿಸಬಹುದು ಎಂದು ಮೂಲಗಳು ತಿಳಿಸಿವೆ. ಶಿವಸೇನೆ ಬಂಡುಕೋರರು ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಒತ್ತಾಯಿಸಬಹುದು.

   ಬಿಜೆಪಿ ವಿರುದ್ಧ ವಾಗ್ದಾಳಿ

   ಬಿಜೆಪಿ ವಿರುದ್ಧ ವಾಗ್ದಾಳಿ

   ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದಿರುವ ಶಿವಸೇನೆ ನಾಯಕ ಏಕನಾಥ್ ಶಿಂಧೆ ಹಿಂದೆ ಕೆಲವು "ಪ್ರಬಲ ಶಕ್ತಿ"ಗಳು ಕೆಲಸ ಮಾಡುತ್ತಿವೆ ಎಂದು ಆರೋಪಿಸಲಾಗುತ್ತಿದೆ. "ಇದು(ಬಂಡಾಯ) ಶಿವಸೇನೆಯ ಆಂತರಿಕ ಸಮಸ್ಯೆಯಾಗಿದೆ. ಆದರೆ, ಖಂಡಿತವಾಗಿಯೂ ಶಿಂಧೆ ಹಿಂದೆ ಪ್ರಬಲ ಶಕ್ತಿ ಕೆಲಸ ಮಾಡುತ್ತಿದೆ. ಅವರು ಪ್ರಬಲ ಶಕ್ತಿಗಳ ಬೆಂಬಲವಿಲ್ಲದೆ ಇಂತಹ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ನನ್ನ 40 ವರ್ಷಗಳಲ್ಲಿ ರಾಜಕೀಯ ಜೀವನದಲ್ಲಿ ರಾಜ್ಯದಲ್ಲಿ ಇಂತಹ ಅಸ್ಥಿರತೆಯನ್ನು ನಾನು ನೋಡಿಲ್ಲ" ಬಿಜೆಪಿಯ ಮಾಜಿ ನಾಯಕ ಖಡ್ಸೆ ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

   English summary
   Amidst the ongoing political crisis in Maharashtra, it has come to the fore that during this time Maharashtra Chief Minister Uddhav Thackeray wanted to resign twice. But he has been stopped by NCP chief Sharad Pawar both times.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X