ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬ್ಬಾ! ಡೆಂಗ್ಯೂ ಗುಣಪಡಿಸುವ ಲಸಿಕೆ ಬಂದಿದೆಯಂತೆ

By Vanitha
|
Google Oneindia Kannada News

ಮುಂಬೈ, ಸೆಪ್ಟೆಂಬರ್,23 : ದೇಶಾದ್ಯಂತ ತನ್ನ ಭೀಕರ ಛಾಯೆ ತೋರಿಸಿದ ಡೆಂಗ್ಯೂ ಬಹಳಷ್ಟು ಮಂದಿಯನ್ನು ಬಲಿ ತೆಗೆದುಕೊಂಡಿದ್ದರೆ, ಇನ್ನೂ ಕೆಲವರನ್ನು ಇದರ ಭೀತಿಯಲ್ಲಿಯೇ ಬಳಲುವಂತೆ ಮಾಡಿದೆ. ಆದರೆ ಇದೀಗ ಎಲ್ಲರೂ ಡೆಂಗ್ಯೂ ಜ್ವರದ ಆತಂಕದಿಂದ ನಿರಾಳವಾಗುವ ಸಂತಸದ ಸುದ್ದಿ ಹೊರಬಿದ್ದಿದೆ.

ಏಷ್ಯಾದ ಅತಿ ಪ್ರತಿ‍ಷ್ಠಿತ ಲಸಿಕೆ ತಯಾರಿಕಾ ಸಂಸ್ಥೆ ಸೀರಂ ಡೆಂಗ್ಯೂ ಜ್ವರವನ್ನು ಗುಣಪಡಿಸುವ ಇಂಜೆಕ್ಷನ್ ಕಂಡು ಹಿಡಿದಿದೆ. ಈ ಲಸಿಕೆಯನ್ನು ದೇಶದೆಲ್ಲೆಡೆ ಬಳಸಲು ಅನುಮತಿ ಕೋರಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವಾಲಯಕ್ಕೆ ಪತ್ರ ಬರೆದು ಅನುಮತಿ ಕೋರಿದ್ದು, ತನ್ನ ಚಿಕಿತ್ಸೆಯನ್ನು ಪಾಕಿಸ್ತಾನ, ನೇಪಾಳ, ಭೂತಾನ್ ಮಾಲ್ಡೀವ್ಸ್ ಬಾಂಗ್ಲಾದೇಶ ಹಾಗೂ ಶ್ರೀಲಂಕಾಗಳಲ್ಲಿ ನೀಡುವ ಯೋಚನೆಯಲ್ಲಿದೆ.[ಸೊಳ್ಳೆ ಒದ್ದೋಡಿಸುವ ಗಿಡಗಳ ನೆಟ್ಟ ಹಿರಿಯ ನಾಗರಿಕರು]

Ciram institution introduce dengue controlling injection

ಈ ಇಂಜೆಕ್ಷನ್ ಸುಮಾರು 5000 ದಿಂದ 10,000 ವೆಚ್ಚವನ್ನು ಒಳಗೊಂಡಿದ್ದು, ಈ ಚಿಕಿತ್ಸೆಯಲ್ಲಿ ಒಂದೇ ಕ್ಲೋನ್ ನಿಂದ (organism or cell) ತಯಾರಾದ ಪ್ರತಿಕಾಯಗಳನ್ನು (ಮೋನೋ ಕ್ಲೋನಲ್ ಆಂಟಿಬಾಡಿ) ರೋಗಿಗಳಿಗೆ ಇಂಜೆಕ್ಷನ್ ಮೂಲಕ ನೀಡಲಾಗುತ್ತದೆ.

ಸೀರಂ ಸಂಸ್ಥೆ ಅಮೆರಿಕ ಮೂಲದ ಜೈವಿಕ ತಂತ್ರಜ್ಞಾನ ಕಂಪನಿಯಾದ ವಿಸ್ಟೆರಾದ ಸಹಕಾರದೊಂದಿಗೆ ಮೋನೋಕ್ಲೋನಲ್ ಆಂಟಿಬಾಡಿ ತಯಾರಿಕೆಗೆ ಮುಂದಾಗಿದ್ದು, 50ಲಕ್ಷ ಡಾಲರ್ ನೀಡಿದೆ. ವಿಸ್ಟೆರಾ ನಡೆಸಿದ ಡೆಂಗ್ಯೂ ನಿರೋಧಕ ಲಸಿಕೆ 'ವಿಐಎಸ್513' ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗಗಳಲ್ಲಿ ಯಶಸ್ವಿಯಾಗಿದೆ.

ಅಲ್ಲದೇ ಸೀರಂ ಸಂಸ್ಥೆಯು ಡೆಂಗ್ಯೂ ಬಾರದಂತೆ ತಡೆಗಟ್ಟುವ ಲಸಿಕೆ ಕಂಡು ಹಿಡಿಯಲು ಎಲ್ಲಾ ತಯಾರಿ ನಡೆಸುತ್ತಿದ್ದು, ಮೂರು ಅಥವಾ ನಾಲ್ಕು ವರ್ಷಗಳಲ್ಲಿ ಇದನ್ನು ಜಾರಿಗೆ ತರುವ ಯೋಚನೆ ಇದೆ ಎಂದು ಸೀರಂ ಸಂಸ್ಥೆಯ ಮುಖ್ಯಸ್ಥ ಪೂನಾವಾಲಾ ತಿಳಿಸಿದ್ದಾರೆ.

ಈ ಲಸಿಕೆಯಿಂದ 2020ರ ಹೊತ್ತಿಗೆ ಇದು 400 ಮಿಲಿಯನ್ ಡಾಲರ್ ನಿಂದ 140 ಕೋಟಿ ಡಾಲರ್ ವರೆಗೆ ಲಾಭ ತರಲಿದ್ದು, ಸೀರಂ ಸಂಸ್ಥೆಯಲ್ಲದೇ, ಸಾನ್ ಪೋಯಿ ಹಾಗೂ ನೋವಾರ್ಟಿಸ್ ನಂತಹ ಬೃಹತ್ ಔಷಧ ತಯಾರಿಕಾ ಸಂಸ್ತೆಗಳು ಡೆಂಗ್ಯೂ ನಿವಾರಣೆ ಹಾಗೂ ತಡೆಗಟ್ಟುವಿಕೆ ಔಷಧಿ ತಯಾರಿಕೆಗಾಗಿ ಹಲವಾರು ಪ್ರಯೋಗಗಳನ್ನು ಕೈಗೊಳ್ಳುತ್ತಿದೆ.

English summary
Ciram institution has introduced dengue controlling injection.One injection fee from 5000 to 10,000rs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X