ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾತಂತ್ರ್ಯ ಹೋರಾಟಕ್ಕೆ ಕ್ರೈಸ್ತರ ಕೊಡುಗೆ ಏನೂ ಇಲ್ಲ: ಬಿಜೆಪಿ ಸಂಸದ

|
Google Oneindia Kannada News

ಮುಂಬೈ, ಜುಲೈ 06: ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಕ್ರೈಸ್ತರು ಯಾವುದೇ ಕೊಡುಗೆ ನೀಡಿಲ್ಲ ಎನ್ನುವ ಮೂಲಕ ಬಿಜೆಪಿ ಸಂಸದರೊಬ್ಬರು ವಿವಾದ ಸೃಷ್ಟಿಸಿದ್ದಾರೆ.

'ಕ್ರಿಶ್ಚಿಯನ್ನರು ಬ್ರಿಟಿಶರು, ವಿದೇಶಿಯರು. ಅದಕ್ಕೆಂದೇ ಅವರು ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಯಾವುದೇ ಕೊಡುಗೆ ನೀಡಿಲ್ಲ' ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

ಮುಸ್ಲಿಮರಿಂದ ಅಲ್ಪಸಂಖ್ಯಾತ ಸ್ಥಾನಮಾನ ಹಿಂಪಡೆಯಿರಿ: ತೊಗಾಡಿಯಾಮುಸ್ಲಿಮರಿಂದ ಅಲ್ಪಸಂಖ್ಯಾತ ಸ್ಥಾನಮಾನ ಹಿಂಪಡೆಯಿರಿ: ತೊಗಾಡಿಯಾ

ಮುಂಬೈಯಲ್ಲಿಶಿಯಾ ಕಬ್ರಸ್ತಾನ್ ಸಮಿತಿಯು ಮಲ್ವಾನಿಯಲ್ಲಿ ಆಯೋಜಿಸಿದ್ದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದರು.

Christians played no role in Indias freedom struggle: BJP MP

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನಾವು ಮುಸ್ಲಿಮರು, ಹಿಂದುಗಳು ಬೇರೆ ಬೇರೆ ಎಂಬಂತೆ ಹೋರಾಡಿಲ್ಲ. ನಾವೆಲ್ಲ ಒಂದಾಗಿ ಹೋರಾಡಿದೆವು. ಆದ್ದರಿಂದಲೇ ಸ್ವಾತಂತ್ರ್ಯ ಬಂತು. ಆದರೆ ಕ್ರೈಸ್ತರು ಮಾತ್ರ ಸುಮ್ಮನೇ ಇದ್ದರು ಎಂದು ಅವರು ಹೇಳಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಮುಂಬೈ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಭೂಷಣ್ ಪಾಟೀಲ್, 'ಗೋಪಾಲ್ ಶೆಟ್ಟಿ ಎಂದಿಗೂ ಇಮಠ ವಿವಾದಾತ್ಮಕ ಹೇಳಿಕೆ ನೀಡುವುದರಲ್ಲಿ ಪರಿಣಿತರು. ರೈತರ ಆತ್ಮಹತ್ಯೆ ಮಾಡಿಕೊಳ್ಳುವುದನ್ನೂ ಫ್ಯಾಶನ್ ಎಂದಿದ್ದ ಬಿಜೆಪಿ ನಾಯಕರಿಂದ ಇನ್ನೇನನ್ನು ನಿರೀಕ್ಷಿಸುವುದಕ್ಕೆ ಸಾಧ್ಯ?' ಎಂದಿದ್ದಾರೆ.

English summary
A Bharatiya Janata Party (BJP) MP from Mumbai North Gopal Shetty has stoked a controversy recently stating Christians did not contribute to the freedom struggle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X