ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ಮಗುವಿನ ಬೆಲೆ 45 ಲಕ್ಷ! ಹೀಗೆ ಮಾರಾಟವಾಗಿರುವುದು 300 ಮಕ್ಕಳು

|
Google Oneindia Kannada News

ಮುಂಬೈ, ಆಗಸ್ಟ್ 16: ಭಾರತದಿಂದ ಮಕ್ಕಳನ್ನು ಅಮೆರಿಕಕ್ಕೆ ಮಾರಾಟ ಮಾಡುವ ದಂಧೆಯ ಕರಾಳ ಮುಖವೊಂದು ಬಹಿರಂಗವಾಗಿದೆ.

ಮುಂಬೈ ಪೊಲೀಸರು ಅಂತಾರಾಷ್ಟ್ರೀಯ ಮಕ್ಕಳ ಕಳ್ಳಸಾಗಣೆಯ ಕಿಂಗ್‌ ಪಿನ್‌ನನ್ನು ಬಂಧಿಸಿದ್ದು, 2007ರಿಂದ ಈಚೆಗೆ ಆತ ಕನಿಷ್ಠ 300 ಮಕ್ಕಳನ್ನು ಅಮೆರಿಕ ಮೂಲದ 'ಗ್ರಾಹಕ'ರಿಗೆ ಮಾರಾಟ ಮಾಡಿದ್ದಾನೆ. ಒಂದು ಮಗುವಿಗೆ ಆತ ತೆಗೆದುಕೊಂಡಿರುವ ಹಣ 45 ಲಕ್ಷ ರೂಪಾಯಿ.

ಮಾನವ ಕಳ್ಳಸಾಗಣೆ: ಕೇಂದ್ರದಿಂದ ಹೊಸ ಮಸೂದೆಯ ಚಾಟಿಮಾನವ ಕಳ್ಳಸಾಗಣೆ: ಕೇಂದ್ರದಿಂದ ಹೊಸ ಮಸೂದೆಯ ಚಾಟಿ

ಗುಜರಾತ್ ನಿವಾಸಿಯಾದ ರಾಜುಭಾಯಿ ಗಮ್ಲೇವಾಲ ಅಲಿಯಾಸ್ ರಾಜುಭಾಯಿ ಬಂಧಿತ ಆರೋಪಿ. ಇದಕ್ಕೂ ಮೊದಲು ಈ ದಂಧೆಯಲ್ಲಿ ತೊಡಗಿದ್ದ ಕೆಲವರನ್ನು ಮಾರ್ಚ್‌ನಲ್ಲಿ ಬಂಧಿಸಲಾಗಿತ್ತು. ಮಾರಾಟವಾದ ಮಕ್ಕಳ ಭವಿಷ್ಯ ಏನಾಗಿದೆ ಎಂಬ ಮಾಹಿತಿ ದೊರೆತಿಲ್ಲ.

child trafficking racket kingpin arrested

ಹೀಗೆ ಮಾರಾಟವಾದ ಮಕ್ಕಳಲ್ಲಿ ಹೆಚ್ಚಿನವರು ಗುಜರಾತ್‌ನ ಬಡಕುಟುಂಬದವರಾಗಿದ್ದು, ಎಲ್ಲರೂ 11-16 ವರ್ಷ ವಯಸ್ಸಿನವರಾಗಿದ್ದಾರೆ. ಕಡುಬಡಕುಟುಂಬದ ಪೋಷಕರು ಮಕ್ಕಳನ್ನು ಸಾಕಲು ಸಾಧ್ಯವಾಗದ ಕಾರಣ ಅವರನ್ನು ಮಾರಾಟ ಮಾಡುತ್ತಾರೆ.

ಅಮೆರಿಕದ ತನ್ನ ಗ್ರಾಹಕರಿಂದ ಬೇಡಿಕೆ ಬಂದ ಕೂಡಲೇ ರಾಜುಭಾಯಿ, ಗುಜರಾತ್‌ನಲ್ಲಿ ತಮ್ಮ ಮಕ್ಕಳನ್ನು ಮಾರಾಟ ಮಾಡಲು ಬಯಸಿರುವ ಬಡ ಕುಟುಂಬವನ್ನು ಹುಡುಕುವಂತೆ ತನ್ನ ಗ್ಯಾಂಗ್‌ಗೆ ಸೂಚಿಸುತ್ತಿದ್ದ. ಅಲ್ಲದೆ, ತಮ್ಮ ಮಕ್ಕಳ ಪಾಸ್‌ಪೋರ್ಟ್‌ಅನ್ನು ಬಾಡಿಗೆಗೆ ನೀಡುವ ಕುಟುಂಬವನ್ನು ಸಹ ಹುಡುಕುತ್ತಿದ್ದರು. ಮಗುವನ್ನು ಹೋಲುವ ಚಿತ್ರವುಳ್ಳ ಪಾಸ್‌ಪೋರ್ಟ್ಅನ್ನು ಆಯ್ಕೆ ಮಾಡಲಾಗುತ್ತಿತ್ತು.

ನವದೆಹಲಿ: ಮಾನವ ಕಳ್ಳ ಸಾಗಣೆ, 16 ಯುವತಿಯರ ರಕ್ಷಣೆನವದೆಹಲಿ: ಮಾನವ ಕಳ್ಳ ಸಾಗಣೆ, 16 ಯುವತಿಯರ ರಕ್ಷಣೆ

ಬಳಿಕ ಆ ಮಗುವನ್ನು ಅಮೆರಿಕಕ್ಕೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗುತ್ತಿತ್ತು. ಪಾಸ್‌ಪೋರ್ಟ್‌ನಲ್ಲಿರುವ ಮಗುವಿನ ಮುಖಕ್ಕೆ ಹೊಂದಾಣಿಕೆಯಾಗುವಂತೆ ಈ ಮಗುವಿಗೆ ಮೇಕಪ್ ಮಾಡಲಾಗುತ್ತಿತ್ತು. ಅಮೆರಿಕದಿಂದ ಹಡಗು ಮರಳಿದ ಬಳಿಕ ಪಾಸ್‌ಪೋರ್ಟ್ ಅನ್ನು ಅದರ ಮಾಲೀಕರಿಗೆ ಮರಳಿಸಲಾಗುತ್ತಿತ್ತು.

ಆದರೆ, ವ್ಯಕ್ತಿಯ ಹಾಜರಿ ಇಲ್ಲದೆಯೇ ವಲಸೆ ಕೇಂದ್ರದಲ್ಲಿ ಪಾಸ್‌ಪೋರ್ಟ್‌ಗೆ ಹೇಗೆ ಸ್ಟಾಂಪ್ ಹಾಕಲಾಗುತ್ತಿತ್ತು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

English summary
The Mumbai police arrested the kingpin of an international child trafficking racket. The gang sent at least 300 children from India to US and charge Rs 45 lakhs for each child.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X