ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1998ರಲ್ಲಿ ದಾವೂದ್ ಹತ್ಯೆ ಸ್ಕೆಚ್ ಮಿಸ್ ಆಗಿದ್ದು ಹೇಗೆ? ಪೂರ್ಣ ವರದಿ

|
Google Oneindia Kannada News

ಮುಂಬೈ, ಫೆಬ್ರವರಿ 25: ಮುಂಬೈ ಪೊಲೀಸರಿಂದ ಬಂಧಿತನಾದ ಏಜಾಜ್ ಲಕ್ಡಾವಾಲ ವಿಚಾರಣೆ ಜಾರಿಯಲ್ಲಿದೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗಿನ ಮಾಜಿ ಬಂಟ ಏಜಾಜ್ ಲಕ್ಡಾವಾಲ, ದಾವೂದ್, ಐಎಸ್ಐ ಬಗ್ಗೆ ಸ್ಫೋಟಕ ಮಾಹಿತಿ ನೀಡಿದ ಬಳಿಕ, ದಾವೂದ್ ಹತ್ಯೆ ಯತ್ನದ ಬಗ್ಗೆ ಪ್ರಮುಖ ಮಾಹಿತಿ ಹೊರ ಹಾಕಿದ್ದಾನೆ. ದಾವೂದ್ ಹತ್ಯೆಗೆ 1998ರಲ್ಲಿ ಛೋಟಾ ರಾಜನ್ ಸ್ಕೆಚ್ ಹಾಕಿದ್ದ ಎಂದು ತಿಳಿಸಿದ್ದಾನೆ.

ದಾವೂದ್ ಇಬ್ರಾಹಿಂನನ್ನು ಕರಾಚಿಯಲ್ಲೇ ಮುಗಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ವಿಕ್ಕಿ ಮಲ್ಹೋತ್ರಾ, ಫರೀದ್ ತನಾಶಾ, ಬಾಲು ಡೋಕ್ರೆ, ಲಕಡವಾಲಾ, ವಿನೋದ್ ಮತ್ಕರ್, ಸಂಜಯ್ ಘಾಟೆ, ಬಾಬಾ ರೆಡ್ಡಿ ಅವರನ್ನೊಳಗೊಂಡ ತಂಡ ದಾವೂದ್ ಹತ್ಯೆ ಸಂಚಿನಲ್ಲಿ ಭಾಗಿಯಾಗಿದ್ದರು. ಆದರೆ, ದಾವೂದ್ ಹತ್ಯೆ ಸಾಧ್ಯವಾಗಲಿಲ್ಲ ಎಂದು ಲಕ್ಡಾವಾಲ ಹೇಳಿದ್ದಾನೆ.

ಪತ್ರಕರ್ತ ಜೇ ಡೇ ಹತ್ಯೆ ಪ್ರಕರಣ, ಛೋಟಾ ರಾಜನ್ ಗೆ ಜೀವಾವಧಿ ಶಿಕ್ಷೆಪತ್ರಕರ್ತ ಜೇ ಡೇ ಹತ್ಯೆ ಪ್ರಕರಣ, ಛೋಟಾ ರಾಜನ್ ಗೆ ಜೀವಾವಧಿ ಶಿಕ್ಷೆ

ಕರಾಚಿಯ ದರ್ಗಾದ ಬಳಿ ದಾವೂದ್ ಹತ್ಯೆ ನಡೆಸಲು ತಂಡ ಸಜ್ಜಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಯೋಜನೆ ನಿಲ್ಲಿಸಬೇಕಾಯಿತು. ದಾವೂದ್ ಅಂದು ಬಚಾವಾಗಿದ್ದ ಎಂದಿದ್ದಾನೆ.

ಲಕ್ಡಾವಾಲ ಯಾರು: ದಾವೂದ್, ಛೋಟಾ ರಾಜನ್ ಸಂಪರ್ಕ್ ಕಡಿತಗೊಂಡ ಬಳಿಕ 10 ವರ್ಷಗಳ ಹಿಂದೆ ತನ್ನದೇ ಹೊಸ ಗ್ಯಾಂಗ್ ಕಟ್ಟಿ ಭೂಗತ ಚಟುವಟಿಕೆಗಳಲ್ಲಿ ತೊಡಗಿದ್ದ. ಮಲೇಷಿಯಾ, ಯುನೈಟೆಡ್ ಸ್ಟೇಟ್ಸ್, ನೇಪಾಳ ಮುಂತಾದ ದೇಶಗಳಲ್ಲಿ ಕಳೆದ 10 ವರ್ಷಗಳಲ್ಲಿ ವಾಸವಿದ್ದ. ಈತನ ವಿರುದ್ಧ ಇಂಟರ್ ಪೋಲ್ ನಿಂದ ನೋಟಿಸ್ ಕೂಡಾ ಜಾರಿಗೊಳಿಸಲಾಗಿತ್ತು. ಇದೀಗ ಮುಂಬೈ ಪೊಲೀಸ್ ವಶದಲ್ಲಿದ್ದಾನೆ.

 ದಾವೂದ್ ಕರಾಚಿಯ ದರ್ಗಾಕ್ಕೆ ಭೇಟಿ

ದಾವೂದ್ ಕರಾಚಿಯ ದರ್ಗಾಕ್ಕೆ ಭೇಟಿ

ತನ್ನ ಮಗಳು ಮರಿಯಾ ಸಾವಿನ ಬಳಿಕ ದಾವೂದ್ ಕರಾಚಿಯ ದರ್ಗಾಕ್ಕೆ ಭೇಟಿ ನೀಡುವ ಬಗ್ಗೆ ಮಾಹಿತಿ ಇತ್ತು. ನೇಪಾಳದ ಸಂಸದರೊಬ್ಬರು ಹತ್ಯೆ ಸಂಚಿನ ಸುಳಿವು ನೀಡಿದ್ದರು. ಆದರೂ ಭಾರಿ ಬಿಗಿಭದ್ರತೆಯಲ್ಲಿ ದರ್ಗಾಕ್ಕೆ ದಾವೂದ್ ಬಂದು ಹೋಗಿದ್ದ. ದಾವೂದ್ ಅಲರ್ಟ್ ಆಗುತ್ತಿದ್ದಂತೆ, ವಿಕ್ಕಿ ಮಲ್ಹೋತ್ರಾ ಅವರ ತಂಡಕ್ಕೆ ಹಿಂದಕ್ಕೆ ಬರುವಂತೆ ಛೋಟಾ ರಾಜನ್ ಸೂಚಿಸಿದ್ದ. ನಮ್ಮ ತಂಡ ಹಿಂತಿರುಗಿದ ಬಳಿಕ ನಾವು ನೆಲೆಸಿದ್ದ ಫ್ಲ್ಯಾಟ್ ಮೇಲೆ ಪಾಕಿಸ್ತಾನ ಪೊಲೀಸರು ದಾಳಿ ನಡೆಸಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು ಎಂದಿದ್ದಾನೆ.

 ಮಾಹಿತಿ ನೀಡಿದ ನೇಪಾಳಿ ಸಂಸದನ ಹತ್ಯೆ

ಮಾಹಿತಿ ನೀಡಿದ ನೇಪಾಳಿ ಸಂಸದನ ಹತ್ಯೆ

ಕರಾಚಿಯಿಂದ ನಮ್ಮ ತಂಡ ಭಾರತಕ್ಕೆ ಹಿಂತಿರುಗಿದ ನಂತರ ದಾವೂದ್ ಗೆ ಮಾಹಿತಿ ನೀಡಿದ ನೇಪಾಳಿ ಸಂಸದನನ್ನು ಮಲ್ಹೋತ್ರ ಕೊಂದು ಹಾಕಿದ. ದಾವೂದ್ ಹತ್ಯೆ ಯತ್ನಕ್ಕೆ ಪ್ರತೀಕಾರವಾಗಿ 2000ದಲ್ಲಿ ಛೋಟಾ ರಾಜನ್ ಮೇಲೆ ಡಿ ಗ್ಯಾಂಗಿನ ಸಯ್ಯದ್ ಮುದ್ದಾಸರ್ ಹುಸೇನ್ ಅಲಿಯಾಸ್ ಮುನ್ನ ಜಿಂಗಾಡಾ ದಾಳಿ ನಡೆಸಿದ. 2002ರಲ್ಲಿ ಲಕ್ಡಾವಾಲ ಮೇಲೆ ಬ್ಯಾಂಕಾಕ್ ನ ಬೊಬಾಯಿ ಮಾರುಕಟ್ಟೆಯಲ್ಲಿ ದಾಳಿ ನಡೆಸಲಾಯಿತು.

ಡಿ ಗ್ಯಾಂಗಿಗೆ ಹಿನ್ನಡೆ, ದಾವೂದ್ ಸೋದರನ ಪುತ್ರ ರಿಜ್ವಾನ್ ಬಂಧನಡಿ ಗ್ಯಾಂಗಿಗೆ ಹಿನ್ನಡೆ, ದಾವೂದ್ ಸೋದರನ ಪುತ್ರ ರಿಜ್ವಾನ್ ಬಂಧನ

 ಸತ್ತು ಬದುಕಿದ ಲಕ್ಡಾವಾಲ

ಸತ್ತು ಬದುಕಿದ ಲಕ್ಡಾವಾಲ

ಬ್ಯಾಂಕಾಕಿನ ದಾಳಿ ವೇಳೆ ಲಕ್ಡಾವಾಲ ಜೇಬಿನಲ್ಲಿದ್ದ ತಾಬೀಜ್(ತಾಯಿತ) ಆತನನ್ನು ಗುಂಡೇಟಿನಿಂದ ಬಚಾವ್ ಮಾಡಿದೆ. ಜೊತೆಗೆ ಆಸ್ಪತ್ರೆ ಹತ್ತಿರದಲ್ಲೇ ಇದ್ದಿದ್ದರಿಂದ ಅಗತ್ಯ ತುರ್ತು ವೈದ್ಯಕೀಯ ನೆರವು ಪಡೆದು ಲಕ್ಡಾವಾಲ ಸೇಫ್ ಆಗಿದ್ದ. ಆದರೆ, ಹೊರ ಪ್ರಚಂಚಕ್ಕೆ ಲಕ್ಡಾವಾಲ ಇನ್ನಿಲ್ಲ ಎಂಬ ಸುದ್ದಿಯನ್ನು ಛೋಟಾ ರಾಜನ್ ಹಬ್ಬಿಸಿದ್ದ. ತನ್ನನ್ನು ರಕ್ಷಿಸಿದ ತಾಯಿತ ಪಡೆಯಲು ತನ್ನ ಬಂಟ ಸಲೀಂ ಪೆನ್ ವಾಲಕ್ಕೆ ಲಕ್ಡಾವಾಲ ಸೂಚಿಸಿದ್ದ. ತಾಯಿತ ಪಡೆದುಕೊಂಡು ನೇರವಾಗಿ ಮನೆಗೆ ಬರಬೇಡ ಎಂದು ಪತ್ನಿಗೆ ಲಕ್ಡಾವಾಲ ಹೇಳಿದ್ದ. ಆದರೆ, ನೇರವಾಗಿ ಮನೆಗೆ ಬಂದಿದ್ದರಿಂದ ಲಕ್ಡಾವಾಲ ಬಂಧನವಾಯಿತು.

 ದಾವೂದ್ ಇಬ್ರಾಹಿಂ ಬಂಟನಾಗಿದ್ದ ಏಜಾಜ್

ದಾವೂದ್ ಇಬ್ರಾಹಿಂ ಬಂಟನಾಗಿದ್ದ ಏಜಾಜ್

ಛೋಟಾ ರಾಜನ್, ದಾವೂದ್ ಇಬ್ರಾಹಿಂ ಬಂಟನಾಗಿದ್ದ ಏಜಾಜ್ ನಂತರ ಗ್ಯಾಂಗಿನಿಂದ ದೂರ ಉಳಿದಿದ್ದ ಏಜಾಜ್ ಮೇಲೆ ಸುಮಾರು 25 ಬೆದರಿಕೆ, ಕೊಲೆ ಯತ್ನ, ಗಲಭೆಗೆ ಕುಮ್ಮಕ್ಕು ಮುಂತಾದ ಪ್ರಕರಣಗಳು ದಾಖಲಾಗಿವೆ. ದಾವೂದ್ ಹಾಗೂ ಆತನ ಸಹಚರರನ್ನು ಎಎಸ್ಐ ಸಾಕುತ್ತಿದೆ. ದಾವೂದ್ ಈಗಲೂ ಕರಾಚಿಯಲ್ಲಿ ನೆಲೆಸಿದ್ದಾನೆ ಎಂದು ಮನೆ ವಿಳಾಸವನ್ನು ಲಕ್ಡಾವಾಲ ತಿಳಿಸಿದ್ದಾನೆ.

ಡಿ ಗ್ಯಾಂಗ್ ಮನಿ ಲಾಂಡ್ರಿಂಗ್ ಗೂ ಬೆಂಗಳೂರಿನ ಮಹಿಳೆಗೂ ಲಿಂಕ್: ಇಡಿಡಿ ಗ್ಯಾಂಗ್ ಮನಿ ಲಾಂಡ್ರಿಂಗ್ ಗೂ ಬೆಂಗಳೂರಿನ ಮಹಿಳೆಗೂ ಲಿಂಕ್: ಇಡಿ

ಮುಂಬೈನ ಮಾಹಿಂ ನಿವಾಸಿಯಾಗಿದ್ದ ಏಜಾಜ್ 8ನೇ ತರಗತಿಯಲ್ಲಿರುವಾಗ ಸಹಪಾಠಿಗೆ ಕಾಂಪಸ್ ನಿಂದ ಚುಚ್ಚುವ ಮೂಲಕ ಕೈಂ ದಾಖಲಿಸಿದ್ದ. ರಿಮ್ಯಾಂಡ್ ಹೋಂ ಸೇರಿದ ಏಜಾಜ್ ನಂತರ 1980ರಲ್ಲಿ ಭೂಗತ ಲೋಕದ ಸದಸ್ಯನಾಗಿಬಿಟ್ಟ. ಡಿ ಗ್ಯಾಂಗ್ ಸೇರಿದ್ದ. ಡಿ ಗ್ಯಾಂಗ್ ಬಿಟ್ಟ ಬಳಿಕ ಛೋಟಾ ರಾಜನ್ ಜೊತೆ ಕೆಲಸ ಮಾಡುತ್ತಿದ್ದ. 1993ರ ಸ್ಫೋಟಕ ಪ್ರಕರಣದ ಆರೋಪಿ ರಾಜಿ ಎಂಬಾತನನ್ನು ಏಜಾಜ್ ಕೊಲೆ ಮಾಡಿದ. 1994ರಲ್ಲಿ ಬಂಧಿತನಾದ ,ಆದರೆ, ಜಾಮೀನು ಪಡೆದು ದೇಶ ತೊರೆದಿದ್ದ.

READ IN ENGLISH

English summary
Gangster Ejaz Lakdawala has told Mumbai Police that close aides of Chhota Rajan had planned to kill fugitive underworld don Dawood Ibrahim in 1998, but the operation failed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X