ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಎದುರು ಗುಲಾಮಗಿರಿ ಮನಸ್ಥಿತಿ ಪ್ರದರ್ಶಿಸಿದರಾ ಪ್ರಧಾನಿ ಮೋದಿ?

|
Google Oneindia Kannada News

ಮುಂಬೈ, ಫೆಬ್ರವರಿ.17: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮನಕ್ಕೆ ಭಾರತದಲ್ಲಿ ನಡೆಯುತ್ತಿರುವ ಸಿದ್ಧತೆಗಳನ್ನು ಗಮನಿಸಿದಾಗ ಕೇಂದ್ರ ಸರ್ಕಾರದ ಗುಲಾಮಗಿರಿ ಮನಸ್ಥಿತಿಯ ಅರಿವಾಗುತ್ತದೆ ಎಂದು ಶಿವಸೇನೆ ಕಿಡಿ ಕಾರಿದೆ.

ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವರದಿಯೊಂದು ಪ್ರಕಟವಾಗಿದೆ. ಡೊನಾಲ್ಡ್ ಟ್ರಂಪ್ ರನ್ನು 'ಬಾದ್ ಶಾ' ರೀತಿಯಲ್ಲಿ ಬಿಂಬಿಸಲಾಗುತ್ತಿದ್ದು ಭಾರತೀಯರನ್ನು ಗುಲಾಮರಂತೆ ತೋರಿಸಲು ಸರ್ಕಾರ ಮುಂದಾಗಿದೆ ಎಂದು ದೂಷಿಸಲಾಗಿದೆ.

ಟ್ರಂಪ್‌ಗೆ ಸ್ಲಂ ಕಾಣದಂತೆ ಗೋಡೆ ನಿರ್ಮಾಣ; ಮೇಯರ್ ಹೇಳಿದ್ದೇನು? ಟ್ರಂಪ್‌ಗೆ ಸ್ಲಂ ಕಾಣದಂತೆ ಗೋಡೆ ನಿರ್ಮಾಣ; ಮೇಯರ್ ಹೇಳಿದ್ದೇನು?

ಫೆಬ್ರವರಿ.24ರಂದು ಅಹ್ಮದಾಬಾದ್ ನ ಸಬರ್ ಮತಿ ಆಶ್ರಮಕ್ಕೆ ಡೊನೊಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ನಂತರದ ನಡೆಯುವ ರೋಡ್ ಶೋ ನಲ್ಲಿ ಇಬ್ಬರೂ ನಾಯಕರು ಒಟ್ಟಾಗಿ ಸಾಗಲಿದ್ದು, ಬಳಿಕ ಕೆಮ್ ಛೋ ಟ್ರಂಪ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ರಾಜಕೀಯ ಲೆಕ್ಕಾಚಾರ ಎಂದು ದೂಷಿಸಿದ ಶಿವಸೇನೆ

ರಾಜಕೀಯ ಲೆಕ್ಕಾಚಾರ ಎಂದು ದೂಷಿಸಿದ ಶಿವಸೇನೆ

ಇನ್ನು, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ಹಿಂದೆ ರಾಜಕೀಯ ಲೆಕ್ಕಾಚಾರ ಅಡಗಿದೆ ಎಂದು ಶಿವಸೇನೆ ಆರೋಪಿಸಿದೆ. ಕಳೆದ ವರ್ಷ ಅಮೆರಿಕಾದಲ್ಲಿ ಹೌಡಿ ಮೋದಿ ಎಂಬ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಅದೇ ತರನಾದ ಕಾರ್ಯಕ್ರಮವನ್ನು ಅಹ್ಮದಾಬಾದ್ ನಲ್ಲಿ ಈಗ ಆಯೋಜಿಸಲಾಗಿದೆ. "ಕೆಮ್ ಛೋ ಟ್ರಂಪ್" ಕಾರ್ಯಕ್ರಮ ಆಯೋಜಿಸಿದ್ದು, ಗುಜರಾತಿಯಲ್ಲಿ ಕೆಮ್ ಛೋ ಟ್ರಂಪ್ ಎಂದರೆ "How Are You Trump" ಎಂಬ ಅರ್ಥ ಬರುತ್ತದೆ.

ಗರೀಬಿ ಹಟಾವೋ ಅಲ್ಲ, ಇದು ಗರೀಬಿ ಚುಪಾವೋ ನೀತಿ

ಗರೀಬಿ ಹಟಾವೋ ಅಲ್ಲ, ಇದು ಗರೀಬಿ ಚುಪಾವೋ ನೀತಿ

ದೇಶವನ್ನು ಆಳಿದ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರು ಗರೀಬಿ ಹಟಾವೋ ಎಂಬ ಘೋಷಣೆಯೊಂದಿಗೆ ಬಡತನವನ್ನು ಓಡಿಸಲು ಪಣ ತೊಟ್ಟಿದ್ದರು. ಆದರೆ, ಈಗಿನ ಸರ್ಕಾರದಲ್ಲಿ ಎಲ್ಲವೂ ಉಲ್ಟಾ-ಪಲ್ಟಾ ಆಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಗರೀಬಿ ಚುಪಾವೋ ನೀತಿ ಅನುಸರಿಸುತ್ತಿದ್ದಾರೆ. ಹೀಗಾಗಿ ಬಡತನವನ್ನು ಬಡವರನ್ನು ಬಚ್ಚಿಡುವ ಕೆಲಸ ಮಾಡುತ್ತಿದ್ದಾರೆ ಎಂದು ಸಾಮ್ನಾದಲ್ಲಿ ಆರೋಪಿಸಲಾಗಿದೆ.

ಟ್ರಂಪ್ ನೀಡುವ 3 ಗಂಟೆಯ ಭೇಟಿಗೆ 100 ಕೋಟಿ ಖರ್ಚು

ಟ್ರಂಪ್ ನೀಡುವ 3 ಗಂಟೆಯ ಭೇಟಿಗೆ 100 ಕೋಟಿ ಖರ್ಚು

ಭಾರತದಲ್ಲಿ ಗೋಡೆ ನಿರ್ಮಾಣಕ್ಕೆ ಎಂದು ಅಮೆರಿಕಾ ಸರ್ಕಾರವೇನಾದರೂ ಅನುದಾನವನ್ನು ನೀಡಿದೆಯಾ ಹೇಗೆ. ಅಧ್ಯಕ್ಷ ಡೊನೊಲ್ಡ್ ಟ್ರಂಪ್ ಅಹ್ಮದಾಬಾದ್ ಭೇಟಿ ನೀಡುವುದೇ ಕನಿಷ್ಠ 3 ಗಂಟೆ. ಈ 3 ಗಂಟೆಯ ಭೇಟಿಗಾಗಿ ಬರೋಬ್ಬರಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಗೋಡೆ ನಿರ್ಮಾಣ ಮಾಡುವ ಅಗತ್ಯವಾದರೂ ಏನಿತ್ತು ಎಂದು ಶಿವಸೇನೆ ಪ್ರಶ್ನೆ ಮಾಡಿದೆ.

ಸ್ಲಂಗಳ ಸುತ್ತಲೂ 4 ಅಡಿ ಎತ್ತರದ ಗೋಡೆ ನಿರ್ಮಾಣ

ಸ್ಲಂಗಳ ಸುತ್ತಲೂ 4 ಅಡಿ ಎತ್ತರದ ಗೋಡೆ ನಿರ್ಮಾಣ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಜರಾತ್ ಭೇಟಿಯ ದಿನಾಂಕ ನಿಗದಿಯಾಗುತ್ತಿದ್ದಂತೆ ರಾಜ್ಯ ಸರ್ಕಾರವು ಎಚ್ಚೆತ್ತುಕೊಂಡಿತು. ಅಹ್ಮದಾಬಾದ್ ನ ಸ್ಲಂಗಳ ಸುತ್ತಲೂ 4 ಅಡಿ ಎತ್ತರದ ಬೃಹತ್ ಗೋಡೆಯನ್ನು ಅಹ್ಮದಾಬಾದ್ ಮಹಾನಗರ ಪಾಲಿಕೆಯೇ ನಿರ್ಮಾಣ ಮಾಡಿತು. ಇದಕ್ಕೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು.

English summary
Central Government Shows Thats Salve Mentality. Shiva Sena Attacked On Preparations For Trump Visit To Ahmedabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X