ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋಕಾನ್ ಮುಖ್ಯ ಕಚೇರಿ ಮೇಲೆ ಸಿಬಿಐ ದಾಳಿ

|
Google Oneindia Kannada News

ನವದೆಹಲಿ, ಜನವರಿ 24 : ಸರಿ ಸುಮಾರು 3,250 ಕೋಟಿ ರು ಮೌಲ್ಯದ ಐಸಿಐಸಿಐ -ವಿಡಿಯೋಕಾನ್ ಸಾಲ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು(ಜನವರಿ 24) ವಿಡಿಯೋಕಾನ್ ಮುಖ್ಯ ಕಚೇರಿ ಮೇಲೆ ಸಿಬಿಐ ದಾಳಿ ನಡೆಸಲಾಗಿದೆ.

ವಿಡಿಯೋಕಾನ್ ನ ಮುಂಬೈ ಹಾಗೂ ಔರಂಗಾಬಾದ್ ನ ಕಚೇರಿ ಹಾಗೂ ಐಸಿಐಸಿಐನ ಮಾಜಿ ಸಿಇಒ ಚಂದಾ ಕೊಚ್ಚರ್ ಅವರ ಪತಿ ದೀಪಕ್ ಕೊಚರ್ ಅವರ ನುಪವರ್ ಕಚೇರಿ ಮೇಲೂ ದಾಳಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ವಿಡಿಯೋಕಾನ್ ಸಂಸ್ಥೆ ಪ್ರವರ್ಧಕರಾದ ವೇಣುಗೋಪಾಲ್ ಧೂತ್ ಅವರು ಕೋಟ್ಯಂತರ ರುಪಾಯಿಗಳನ್ನು ನುಪವರ್ ನಲ್ಲಿ ಹೂಡಿಕೆ ಮಾಡಿದ್ದರು. ಐಸಿಐಸಿಐ ಬ್ಯಾಂಕಿನಿಂದ 2012ರಲ್ಲಿ ವಿಡಿಯೋಕಾನ್ ಸಂಸ್ಥೆ 3,250 ಕೋಟಿ ರು ಸಾಲ ಪಡೆ ಕೆಲ ತಿಂಗಳಲ್ಲೇ ಈ ಬೆಳವಣಿಗೆ ನಡೆದಿತ್ತು.

CBI registers FIR in ICICI Bank-Videocon loan case

ಹೀಗಾಗಿ, ವೇಣುಗೋಪಾಲ್ ಧೂತ್,ದೀಪಕ್ ಕೊಚ್ಚಾರ್ ಹಾಗೂ ಇನ್ನಿತರರ ವಿರುದ್ಧ ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ತನಿಖಾ ಸಂಸ್ಥೆಯು ಪ್ರಕರಣ ದಾಖಲಿಸಿಕೊಂಡಿತ್ತು. ಇದೀಗ ಎಲ್ಲರ ವಿರುದ್ಧ ಎಫ್ಐಆರ್ ಹಾಕಿರುವ ಸಿಬಿಐ, ತನಿಖೆಯನ್ನು ಚುರುಕುಗೊಳಿಸಿದೆ.

English summary
The CBI has registered an FIR in connection with alleged irregularities in the Rs 3,250 crore ICICI Bank-Videocon loan case and is carrying out searches Thursday at the group headquarters in Mumbai and offices in Aurangabad, officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X