ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

41 ಗಂಟೆ ಪ್ರಯಾಣ ಮಾಡಿ ಭಾರತಕ್ಕೆ ಬರಲು ಸಾಧ್ಯವಿಲ್ಲ: ಮೆಹುಲ್ ಚೋಕ್ಸಿ

|
Google Oneindia Kannada News

ಮುಂಬೈ, ಡಿಸೆಂಬರ್ 25: ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಹುಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ಮೆಹುಲ್ ಚೋಕ್ಸಿ, ಅನಾರೋಗ್ಯದ ಕಾರಣ ಭಾರತಕ್ಕೆ ಬರಲು ಸಾಧ್ಯವಾಗುವುದಿಲ್ಲ ಎಂದು ಕೋರ್ಟ್‌ಗೆ ತಿಳಿಸಿದ್ದಾರೆ.

ಆಂಟಿಗುವಾದಲ್ಲಿ ನೆಲೆಸಿರುವ ಚೋಕ್ಸಿ, ಭಾರತಕ್ಕೆ ಬರಲು 41 ಗಂಟೆ ಪ್ರಯಾಣ ಮಾಡಬೇಕಾಗುತ್ತದೆ. ಆದರೆ, ಅನಾರೋಗ್ಯಕ್ಕೆ ತುತ್ತಾಗಿರುವ ತಮಗೆ ಅಷ್ಟು ದೂರ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.

ನೀರವ್ ಮೋದಿಯ 56 ಕೋಟಿ ಮೌಲ್ಯದ 11 ಆಸ್ತಿ ವಶಕ್ಕೆ ಪಡೆದ ಇಡಿನೀರವ್ ಮೋದಿಯ 56 ಕೋಟಿ ಮೌಲ್ಯದ 11 ಆಸ್ತಿ ವಶಕ್ಕೆ ಪಡೆದ ಇಡಿ

ಸಾಲದ ಹಣವನ್ನು ವಂಚಿಸಿರುವ ಆರೋಪ ಎದುರಿಸುತ್ತಿರುವ ಚೋಕ್ಸಿ, ತನಿಖಾ ಸಂಸ್ಥೆಗಳಿಗೆ ಬೇಕಾಗಿದ್ದಾರೆ. ಆತನ ಸಂಬಂಧಿ ನೀರವ್ ಮೋದಿ ಕೂಡ ಜನವರಿ ಮೊದಲ ವಾರದಲ್ಲಿ ದೇಶ ತ್ಯಜಿಸಿದ್ದರು. ಇಬ್ಬರ ಮೇಲೆಯೂ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13 ಸಾವಿರ ಕೋಟಿ ವಂಚನೆ ಮಾಡಿದ ಆರೋಪವಿದೆ.

cant travel 41 hours to india pnb bank fraud mehul choksi antigua

ನ್ಯಾಯಾಲಯಕ್ಕೆ ಲಿಖಿತ ಪ್ರತಿಕ್ರಿಯೆ ನೀಡಿರುವ ಚೋಕ್ಸಿ, ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಒಳಪಡಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ.

ಮೆಹುಲ್ ಚೋಕ್ಸಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದ ಇಂಟರ್ ಪೋಲ್ಮೆಹುಲ್ ಚೋಕ್ಸಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದ ಇಂಟರ್ ಪೋಲ್

ತಮ್ಮ ಆರೋಗ್ಯ ಪರಿಸ್ಥಿತಿಯ ಮಾಹಿತಿಗಳನ್ನು ಉದ್ದೇಶಪೂರ್ವಕವಾಗಿ ಹಂಚಿಕೊಳ್ಳದೆಯೇ ಜಾರಿ ನಿರ್ದೇಶನಾಲಯವು ತನಿಖೆಯ ಹಾದಿ ತಪ್ಪಿಸುತ್ತಿದೆ ಎಂದು ಚೋಕ್ಸಿ ಆರೋಪಿಸಿದ್ದಾರೆ.

13 ಸಾವಿರ ಕೋಟಿ ವಂಚನೆ ನಂತರ ಮೆಹುಲ್ ಚೋಕ್ಸಿ ಮೊದಲ ಮಾತುಗಳಿವು13 ಸಾವಿರ ಕೋಟಿ ವಂಚನೆ ನಂತರ ಮೆಹುಲ್ ಚೋಕ್ಸಿ ಮೊದಲ ಮಾತುಗಳಿವು

34 ಪುಟಗಳ ಸುದೀರ್ಘ ಪ್ರತಿಕ್ರಿಯೆ ನೀಡಿರುವ ಅವರು ಸಾಲದ ಮೊತ್ತವನ್ನು ಹಿಂದಿರುಗಿಸುವ ವಿಚಾರದಲ್ಲಿ ಪಿಎನ್ ಬಿ ಬ್ಯಾಂಕ್ ಜೊತೆ ನಿರಂತರ ಸಂಪರ್ಕದಲ್ಲಿ ಇರುವುದಾಗಿ ಹೇಳಿದ್ದಾರೆ.

English summary
Prime Accused of Punjab National Bank multicrore cheating case Mehul Choksi told to a Mumbai court that he cannot travel 41 hours long journey from Antigua because of his poor health.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X