ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೀಗೂ ಧ್ವಜವನ್ನು ಹಾರಿಸಬಹುದೇ? ಬಾಂಬೆ IITಗೆ ನೆಟ್ಟಿಗರ ಪ್ರಶ್ನೆ

|
Google Oneindia Kannada News

ಮುಂಬೈ, ಆಗಸ್ಟ್ 16: ಆಗಸ್ಟ್ 15 ರಂದು ದೇಶದಾದ್ಯಂತ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಇದಲ್ಲದೆ ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ ಹರ್ ಘರ್ ತಿರಂಗ ಅಭಿಯಾನವನ್ನು ದೇಶದಾದ್ಯಂತ ಗೌರವಿಸಲಾಯಿತು. ಜನರು ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದರು. ಅಲ್ಲದೆ, ಕಂಪನಿಗಳು ಮತ್ತು ಕಾಲೇಜುಗಳಂತಹ ಹಲವಾರು ಸಂಸ್ಥೆಗಳು ತಮ್ಮ ಕೆಲಸದ ಸ್ಥಳ ಅಥವಾ ಕಟ್ಟಡಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿವೆ.

ಈ ನಡುವೆ ಧ್ವಜವನ್ನು ಉಲ್ಟಾ ಹಾರಿಸಿರುವುದು, ಎಲ್ಲೆಂದರಲ್ಲಿ ಬೀಸಾಡುವುದು, ಹರಿದ ಧ್ವಜವನ್ನು ಹಾರಿಸಿರುವುದು ಹೀಗೆ ಹಲವಾರು ಘಟನೆಗಳು ನಡೆದಿರುವುದು ಕಂಡುಬಂದಿದೆ. ಆದರೆ ಇಲ್ಲೊಂದು ಫೋಟೋವನ್ನು ನೋಡಿ ನೆಟ್ಟಿಗರು ಹೀಗೂ ಧ್ವಜವನ್ನು ಹಾರಿಸಬಹುದೇ? ಎಂದು ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆ ಮಾಡಲು ಕಾರಣ ಕೇಳಿದರೆ ನೀವು ಆಶ್ಚರ್ಯವಾಗದೇ ಇರದು. ಯಾಕೆಂದರೆ ಈ ಫೇಸ್‌ಬುಕ್‌ನಲ್ಲಿ ಧ್ವಜ ಹಾರಿಸಿರುವ ಫೋಟೋವನ್ನು ನೋಡಿದರೆ, ಇವರಿಗೆ ಧ್ವಜ ತೆಗೆದುಕೊಳ್ಳಲು ಹಣದ ಕೊರತೆ ಇರಬೇಕು ಅಥವಾ ಧ್ವಜ ಹಾರಿಸಲು ಹೋಗಿ ಏನಾದರೂ ಸಮಸ್ಯೆಗಳು ಆದರೆ ಏನ್ ಮಾಡೋದು ಅನ್ನೋ ಮುಂದಾಲೋಚನೆಯಿಂದ ಈ ಯೋಜನೆಯನ್ನು ಬಾವುಟ ಹಾರಿಸುವವರು ಮಾಡಿರಬೇಕು ಎಂದು ಯೋಚನೆ ಮಾಡುವುದರಲ್ಲಿ ಅನುಮಾನವೇ ಇಲ್ಲ.

ಬಾಂಬೆ ಐಐಟಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿರುವ ಚಿತ್ರ ನೆಟಿಜನ್‌ಗಳಲ್ಲಿ ಸಾಕಷ್ಟು ಸಂಚಲನವನ್ನು ಸೃಷ್ಟಿಸಿದೆ. ಏಕೆಂದರೆ, ಇಲ್ಲಿ ಧ್ವಜವನ್ನು ಹಾರಿಸಲಾಗಿಲ್ಲ. ಬದಲಿಗೆ ಸಂಸ್ಥೆಯು ತಮ್ಮ ಕಟ್ಟಡದ ಮೇಲೆ "ಫೋಟೋಶಾಪ್" ಮಾಡಿರುವ ಧ್ವಜವನ್ನು ಹಾರಿಸಿರುವ ಚಿತ್ರವನ್ನು ಪೋಸ್ಟ್ ಮಾಡಿದೆ. ಇದನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ. ಪೋಸ್ಟ್‌ನಲ್ಲಿ ಕಂಡುಬಂದ ರಾಷ್ಟ್ರೀಯ ಧ್ವಜವನ್ನು "ಫೋಟೋಶಾಪ್" ಮಾಡಲಾಗಿದೆ ಎಂದು ಕಾಲೆಳಿದಿದ್ದಾರೆ.

Can the flag be flown like this? people question for Bombay IIT

ಒಮ್ಮೆ ನೋಡಿ:

ಬಾಂಬೆ ಐಐಟಿ ತಮ್ಮ ಕಟ್ಟಡದ ಮೇಲೆ ತ್ರಿವರ್ಣ ಧ್ವಜವನ್ನು ಬೀಸುತ್ತಿರುವ ಚಿತ್ರವನ್ನು ತನ್ನ ಫೇಸ್‌ಬುಕ್‌ ಪುಟದಲ್ಲಿ ಹಂಚಿಕೊಂಡಿದೆ. ಆದರೆ ಇದು ಸಂಪೂರ್ಣವಾಗಿ ಎಡಿಟ್ ಆಗಿರುವ ಕಾರಣ ಫೋಟೋಶಾಪ್ ಮಾಡಲಾಗಿದೆ ಎಂದು ನೆಟಿಜನ್‌ಗಳು ಟ್ರೋಲ್ ಮಾಡಿದ್ದಾರೆ. ಸಂಸ್ಥೆಯು ಆಗಸ್ಟ್ 8 ರಂದು ಸ್ವಾತಂತ್ರ್ಯ ದಿನಾಚರಣೆಯ ಮೊದಲು ಚಿತ್ರವನ್ನು ತಮ್ಮ ಪುಟದ ಕವರ್ ಚಿತ್ರವಾಗಿ ಅಪ್‌ಲೋಡ್ ಮಾಡಿದೆ.

ಹದ್ದಿನ ಕಣ್ಣಿನ ನೆಟ್ಟಿಗರು ಕಟ್ಟಡದ ಮೇಲೆ ರಾರಾಜಿಸುತ್ತಿರುವ ರಾಷ್ಟ್ರಧ್ವಜವು ಫೋಟೋಶಾಪ್ ಮಾಡಲ್ಪಟ್ಟಿದೆ ಎಂದು ತೋರಿಸಿದರು. ಹೀಗಾಗಿ ಇನ್ಸ್ಟಿಟ್ಯೂಟ್ ಅನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿದೆ. ಕಾಮೆಂಟ್‌ಗಳ ವಿಭಾಗ ಅದಕ್ಕೆ ಪುರಾವೆಯಾಗಿದೆ.

"ಐಐಟಿ ಬಾಂಬೆ ಗ್ರಾಫಿಕ್ಸ್ ಡಿಸೈನ್ ಕೋರ್ಸ್‌ಗೆ ಸುಸ್ವಾಗತ" ಎಂದು ನೆಟ್ಟಿಗರು ಬರೆದಿದ್ದಾರೆ.

Can the flag be flown like this? people question for Bombay IIT

ಮತ್ತೊಬ್ಬರು, "ನಮ್ಮ ದೇಶದ ಪ್ರತಿಷ್ಠಿತ ಸಂಸ್ಥೆಯು ನಮ್ಮ ರಾಷ್ಟ್ರಧ್ವಜವನ್ನು ಫೋಟೋಶಾಪ್ ಮಾಡಬೇಕೇ?" ಎಂದು ಪ್ರಶ್ನೆ ಮಾಡಿದ್ದಾರೆ.

ಮತ್ತೊಬ್ಬರು, "ನಿಮ್ಮ ಸಂಸ್ಥೆಯ ಕಟ್ಟಡದ ಮೇಲೆ ರಾಷ್ಟ್ರಧ್ವಜವನ್ನು ಹಾಕದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಆದರೆ ನೀವು ದೇಶಭಕ್ತಿಯೆಂದು ತೋರಿಸಲು ಈ ಎಡಿಟ್ ಮಾಡಿದ ಫೋಟೋ ಹಾಕಿರುವುದು ತಪ್ಪು. ವಿಶ್ವವಿದ್ಯಾಲಯದಿಂದ ಇದನ್ನು ನೋಡಲು ದುಃಖವಾಗಿದೆ"

Can the flag be flown like this? people question for Bombay IIT

ಕಾಮೆಂಟ್‌ಗಳನ್ನು ಇಲ್ಲಿ ನೋಡಿ:

ಬಾಂಬೆ ಐಐಟಿ ಪ್ರತಿಕ್ರಿಯೆ ಏನು?

ಧ್ವಜವನ್ನು ಹೊಂದಿರುವ ಬಾಂಬೆ ಐಐಟಿ ಮುಖ್ಯ ಕಟ್ಟಡದ ಪೋಟೋ ಆಜಾದಿ ಕಾ ಅಮೃತ್ ಮಹೋತ್ಸವದ ಸ್ಮರಣಾರ್ಥ ಚಿತ್ರಣವಾಗಿದೆ ಮತ್ತು ನಿಜವಾದ ಫೋಟೋ ಅಲ್ಲ. ಮಹೋತ್ಸವದ ಉತ್ಸಾಹವನ್ನು ಮೂಡಿಸುವುದು ನಮ್ಮ ಗುರಿಯಾಗಿತ್ತು. ಇದರಿಂದ ಉಂಟಾದ ಗೊಂದಲಕ್ಕೆ ನಾವು ವಿಷಾದಿಸುತ್ತೇವೆ ಎಂದು ಬಾಂಬೆ ಐಐಟಿ ಪ್ರತಿಕ್ರಿಯೆ ನೀಡಿದೆ.

English summary
Bombay IIT trolled for posting photo of photoshopped National flag.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X