ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೋಷಕರಿಗೆ ಮತ್ತೆ ಹೊರೆ, ಶಾಲಾ ವಾಹನಗಳ ಶುಲ್ಕ ಏರಿಕೆ

|
Google Oneindia Kannada News

ಮುಂಬೈ, ಜೂ.13: ಇಂಧನ ಬೆಲೆ ಏರಿಕೆ ಮತ್ತು ಇತರ ಕಾರಣಗಳನ್ನು ಮುಂದಿಟ್ಟುಕೊಂಡು ಶಾಲಾ ಬಸ್‌ಗಳ ದರ ಏರಿಕೆ ಮಾಡಲಾಗುತ್ತಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ ಶೇ. 20 ಪ್ರತಿಶತ ದರ ಏರಿಕೆ ಮಾಡುವುದಾಗಿ ಮುಂಬೈನ ಶಾಲಾ ಬಸ್ ನಿರ್ವಾಹಕರು ಹೇಳಿದ್ದಾರೆ.

ನಗರದಾದ್ಯಂತ ಶಾಲೆಗಳು ಸೋಮವಾರ ತೆರೆದಿದ್ದು, ವಿದ್ಯಾರ್ಥಿಗಳ ಬಸ್ ಶುಲ್ಕವನ್ನು ಶೇಕಡಾ 20 ಅಥವಾ ಅದಕ್ಕಿಂತ ಹೆಚ್ಚು ಹೆಚ್ಚಿಸಲಾಗುವುದು. ಆದರೆ ಇದು ಮಕ್ಕಳು ಇರುವ ಪ್ರದೇಶಗಳು ಮತ್ತು ಶಾಲೆಗಳಿಗೆ ಅನುಗುಣವಾಗಿ ಬದಲಾಗುತ್ತದೆ ಎಂದು ಶಾಲಾ ಬಸ್ ಮಾಲೀಕರ ಸಂಘದ (ಎಸ್‌ಬಿಒಎ) ಪದಾಧಿಕಾರಿ ರಮೇಶ್ ಮಣಿಯನ್ ಪಿಟಿಐಗೆ ತಿಳಿಸಿದ್ದಾರೆ.

ನಗರದಲ್ಲಿ 'ರಾತ್ರಿ ಶಾಲೆ' ಯೋಜನೆ ಜಾರಿಗೆ ತರಲು ಬಿಬಿಎಂಪಿ ಚಿಂತನೆ ನಗರದಲ್ಲಿ 'ರಾತ್ರಿ ಶಾಲೆ' ಯೋಜನೆ ಜಾರಿಗೆ ತರಲು ಬಿಬಿಎಂಪಿ ಚಿಂತನೆ

ಇಂಧನ ಬೆಲೆ ಏರಿಕೆ, ಚಾಲಕರು ಮತ್ತು ಇತರ ಸಿಬ್ಬಂದಿಯ ವೇತನ ಪಾವತಿ, ಹೆಚ್ಚಿದ ಬಸ್ ನಿರ್ವಹಣಾ ವೆಚ್ಚ, ಆರ್‌ಟಿಒ ಶುಲ್ಕ, ಟ್ರಾಫಿಕ್ ದಂಡ ಮತ್ತು ಕಳೆದ ಎರಡು ವರ್ಷಗಳಲ್ಲಿ ಪಾವತಿಸಿದ ದಂಡದಂತಹ ವಿವಿಧ ಕಾರಣಗಳಿಂದ ಶಾಲಾ ಬಸ್ ಶುಲ್ಕವನ್ನು ಹೆಚ್ಚಿಸಲು ಆಗ್ರಹವಿತ್ತು.

Bus Operators Raising School Vehicle Fees at Mumbai

ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳಿಂದ ವ್ಯಾಪಾರ ನಿಂತು ಹೋಗಿದ್ದರೂ, ಚಾಲಕರು ಮತ್ತು ಇತರ ಸಿಬ್ಬಂದಿ, ಕ್ಲೀನರ್‌ಗಳು ಮತ್ತು ಮಹಿಳಾ ಅಟೆಂಡರ್‌ಗಳ ಸಂಬಳ ಹೆಚ್ಚಾಗಿದೆ ಎಂದು ಅವರು ಹೇಳಿದರು.

ಮುಂಬೈ ಬಸ್ ಮಾಲೀಕರ ಸಂಘಟನೆಯ ಪದಾಧಿಕಾರಿಯೂ ಆಗಿರುವ ಮಣಿಯನ್, ದೇಶದ ಇತರ ಭಾಗಗಳಿಗೆ ಹೋಲಿಸಿದರೆ 15 ವರ್ಷಗಳಿಂದ ಮುಂಬೈನಲ್ಲಿ ಶಾಲಾ ಬಸ್‌ಗಳ ಶುಲ್ಕವನ್ನು ಏರಿಕೆ ಮಾಡಿಲ್ಲ. ಹೀಗಾಗಿ ಸಾಂಕ್ರಾಮಿಕ ಸಮಯದಲ್ಲಿ ವಾಹನಗಳು ಓಡದ ಕಾರಣ ಇನ್ನೂ ಎರಡು ವರ್ಷಗಳ ಕಾಲ ಹಳೆಯ ಬಸ್‌ಗಳನ್ನು ಚಲಾಯಿಸಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರೂ ಅದನ್ನು ತಿರಸ್ಕರಿಸಲಾಯಿತು. ಸರ್ಕಾರ ಈ ಬೇಡಿಕೆಯನ್ನು ಒಪ್ಪಿಕೊಂಡಿದ್ದರೆ ವಿದ್ಯಾರ್ಥಿಗಳ ಪೋಷಕರಿಗೆ ಬಸ್ ಶುಲ್ಕ ಏರಿಕೆ ಹೊರೆ ಬೀಳುತ್ತಿರಲಿಲ್ಲ ಎಂದರು.

Viral Video: ಶಾಲೆಯಲ್ಲಿ ನಿದ್ದೆಗೆ ಜಾರಿದ ಶಿಕ್ಷಕಿ: ಗಾಳಿ ಬೀಸಿದ ವಿದ್ಯಾರ್ಥಿನಿ Viral Video: ಶಾಲೆಯಲ್ಲಿ ನಿದ್ದೆಗೆ ಜಾರಿದ ಶಿಕ್ಷಕಿ: ಗಾಳಿ ಬೀಸಿದ ವಿದ್ಯಾರ್ಥಿನಿ

ಕೆಲವು ವಿದ್ಯಾರ್ಥಿಗಳ ಪೋಷಕರು ಬಸ್ ಶುಲ್ಕ ಹೆಚ್ಚಳದ ಬಗ್ಗೆ ಶಾಲೆಗಳಿಗೆ ಇನ್ನೂ ತಿಳಿಸಿಲ್ಲ ಎಂದು ಹೇಳಿದರು, ಆದರೆ ಕೆಲವು ನಿರ್ವಾಹಕರು ಹೆಚ್ಚಳದ ಸುಳಿವು ನೀಡಿದ್ದಾರೆ. ಇದು ಈಗಾಗಲೇ ಹಣದುಬ್ಬರದ ಹೊರೆಯಿಂದ ತತ್ತರಿಸುತ್ತಿರುವ ಸಮಯದಲ್ಲಿ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.

Bus Operators Raising School Vehicle Fees at Mumbai

ನನ್ನ ಮಗಳ ಶಾಲೆ ಬೈಕುಲ್ಲಾ ಪ್ರದೇಶದಲ್ಲಿದೆ. ಶಾಲಾ ವಾಹನ ನಿರ್ವಾಹಕರು ಈ ಹಿಂದೆ ಕಲಾಚೌಕಿ ಪ್ರದೇಶದಿಂದ (ಸುಮಾರು ಮೂರು ಕಿ. ಮೀ. ದೂರ) ಪ್ರಯಾಣಕ್ಕೆ ತಿಂಗಳಿಗೆ 900 ರೂಪಾಯಿ ಶುಲ್ಕ ವಿಧಿಸುತ್ತಿದ್ದರು. ಬಸ್ ಶುಲ್ಕ ಹೆಚ್ಚಳದ ಬಗ್ಗೆ ಶಾಲೆಯು ಇನ್ನೂ ಏನನ್ನೂ ತಿಳಿಸದಿದ್ದರೂ ಹಳೆಯ ನಿರ್ವಾಹಕರು ಕೆಲವು ಪೋಷಕರಿಗೆ 1,300 ರಿಂದ 1,500 ರೂ.ವರೆಗೆ ಶುಲ್ಕ ವಿಧಿಸುವುದಾಗಿ ಹೇಳಿದ್ದಾರೆ. ಇದು ಕಡಿಮೆ ದೂರಕ್ಕೆ ಹೆಚ್ಚು ಶುಲ್ಕವಾಗಿದೆ. ಹೀಗಾಗಿ ಮಕ್ಕಳನ್ನು ಕರೆದೊಯ್ಯಲು ಕ್ಯಾಬ್ ಅನ್ನು ಬಾಡಿಗೆಗೆ ಪಡೆಯುವಂತಹ ಇತರ ಆಯ್ಕೆಗಳನ್ನು ನೋಡುತ್ತಿದ್ದಾರೆ ಎಂದು ಪೋಷಕರೊಬ್ಬರು ಹೇಳಿದ್ದಾರೆ.

English summary
Due to fuel price hikes and other reasons school bus operators in Mumbai city have said they will increase the fee of transport 20 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X