ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಲ್ಲಿ ಬಾಯಿ: 'ಪಶ್ಚಾತ್ತಾಪವಿಲ್ಲ, ಸರಿಯಾಗಿ ಮಾಡಿದ್ದೇನೆ'

|
Google Oneindia Kannada News

ನವದೆಹಲಿ, ಜನವರಿ 07: ಮುಸ್ಲಿಂ ಮಹಿಳೆಯರನ್ನು ಹರಾಜು ಹಾಕಲು 'ಬುಲ್ಲಿ ಬಾಯಿ' ಆ್ಯಪ್‌ನ ಹಿಂದಿನ ಪ್ರಮುಖ ಆರೋಪಿ ನೀರಜ್ ಬಿಷ್ಣೋಯ್ ಪೊಲೀಸ್ ವಿಚಾರಣೆ ವೇಳೆ ತನ್ನ ಕೃತ್ಯಕ್ಕೆ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ ಎಂದು ಮೂಲಗಳು ಶುಕ್ರವಾರ ತಿಳಿಸಿವೆ. ಬದಲಾಗಿ ಆರೋಪಿ ತಾನು ಮಾಡಿದ್ದು 'ಸರಿ' ಎಂದು ಭಾವಿಸಿದ್ದನು ಎಂದು ಮೂಲಗಳು ತಿಳಿಸಿವೆ. ಕಳೆದ ಕೆಲ ದಿನಗಳಿಂದ ಭಾರೀ ವಿವಾದವನ್ನು ಸೃಷ್ಟಿ ಮಾಡಿದ ಬುಲ್ಲಿ ಬಾಯಿ ಆ್ಯಪ್‌ನ ಸೃಷ್ಟಿಕರ್ತರ ವಿರುದ್ಧ ಕಠಿಣ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅವರ ಅನುಮತಿ ಇಲ್ಲದೇ ಬುಲ್ಲಿ ಬಾಯಿ ಆ್ಯಪ್‌ನಲ್ಲಿ ಅಪ್ಲೋಡ್ ಮಾಡುವ ಮೂಲಕ ಹರಾಜಿಗಾಗಿ ಬಳಕೆ ಮಾಡಲಾಗುತ್ತಿತ್ತು. ಇದನ್ನು ಖಂಡಿಸಿ ಹಲವಾರು ಜನ ಆಕ್ರೋಶ ಹೊರಹಾಕಿದ್ದರು ಜೊತೆಗೆ ಕ್ರಮಕ್ಕೆ ಒತ್ತಾಯಿಸಿದ್ದರು. ಜೊತೆಗೆ ಇದು ರಾಜಕೀಯ ಕದನಕ್ಕೂ ಒಳಗಾಗಿತ್ತು. ಇದರ ಬೆನ್ನಲ್ಲೇ ಪೊಲೀಸರು ಇದರ ವಿಚಾರಣೆಯನ್ನು ಚುರುಕುಗೊಳಿಸಿ ಈವರೆಗೆ ಪ್ರಕರಣದಲ್ಲಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.

ವಿಚಾರಣೆ ವೇಳೆ ಆರೋಪಿ ಹೇಳಿದ್ದೇನು?

ವಿಚಾರಣೆ ವೇಳೆ ಆರೋಪಿ ಹೇಳಿದ್ದೇನು?

ಇವರಲ್ಲಿ ನಾಲ್ಕನೇ ಆರೋಪಿ ಬಿಷ್ಣೋಯ್ (21)ನನ್ನು ಭೋಪಾಲ್‌ನ ಇನ್‌ಸ್ಟಿಟ್ಯೂಟ್‌ನ ಎರಡನೇ ವರ್ಷದ ಬಿಟೆಕ್ ವಿದ್ಯಾರ್ಥಿಯನ್ನು ದೆಹಲಿ ಪೊಲೀಸರು ನಿನ್ನೆ ಅಸ್ಸಾಂನ ಜೋರ್ಹತ್ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಬಿಷ್ಣೋಯಿ @bullibai_ Twitter ಹ್ಯಾಂಡಲ್ ನ ಸೃಷ್ಟಿಕರ್ತನಾಗಿದ್ದಾನೆ. ಮೈಕ್ರೋಸಾಫ್ಟ್ ಒಡೆತನದ ಸಾಫ್ಟ್‌ವೇರ್-ಹಂಚಿಕೆ ವೇದಿಕೆಯಾದ ಗಿಟ್‌ಹಬ್‌ನಲ್ಲಿ ಹೋಸ್ಟ್ ಮಾಡಲಾದ ಅಪ್ಲಿಕೇಶನ್ ಸಂಬಂಧಿತ ಮಾಹಿತಿಗಳನ್ನು ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಸ್ಟರ್ ಮೈಂಡ್ ನಿರಾಜ್ ಬಿಷ್ಣೋಯ್ ತನಿಖೆ ವೇಳೆ ದಾರಿತಪ್ಪಿಸಲು ಸಿಖ್ ಹೆಸರುಗಳ ಬಳಕೆ ಮಾಡಿದ್ದಾನೆಂದು ತಿಳಿದು ಬಂದಿದೆ.

ಅಸ್ಸಾಂನ ನಿವಾಸಿ ಬಿಷ್ಣೋಯ್ ಅವರ ಟ್ವಿಟರ್ ಖಾತೆಯ ಡಿಜಿಟಲ್ ಕಣ್ಗಾವಲು ಮೂಲಕ ಪತ್ತೆಹಚ್ಚಲಾಗಿದೆ ಎಂದು ಮೂಲಗಳು ಇಂದು ತಿಳಿಸಿವೆ. ಜೊತೆಗೆ ಈತನು ಸೃಷ್ಟಿಸಿದ ಆ್ಯಪ್‌ನ್ನು ಈಗ ತೆಗೆದುಹಾಕಲಾಗಿದೆ. ಇದುವರೆಗಿನ ವಿಚಾರಣೆಯಿಂದ ನವೆಂಬರ್‌ನಲ್ಲಿ ಈ ಆ್ಯಪ್‌ನ್ನು ರಚಿಸಲಾಗಿದೆ. ಕಳೆದ ತಿಂಗಳು ನವೀಕರಿಸಲಾಗಿದೆ ಎಂದು ತಿಳಿದುಬಂದಿದೆ. ಆ ಸಮಯದಲ್ಲಿ ಮತ್ತೊಂದು ಟ್ವಿಟರ್ ಹ್ಯಾಂಡಲ್ - @sage0x1 ಅನ್ನು ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ವಿಚಾರಣೆ ವೇಳೆ ಬಿಷ್ಣೋಯ್ ಬುಲ್ಲಿ ಬಾಯಿ ಸೃಷ್ಟಿಯ ಬಗ್ಗೆ ಯಾವುದೇ 'ಪಶ್ಚಾತ್ತಾಪವಿಲ್ಲ, ಸರಿಯಾಗಿ ಮಾಡಿದ್ದೇನೆ' ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಪೊಲೀಸರನ್ನು ಅಪಹಾಸ್ಯ ಮಾಡುವ ಆ್ಯಪ್

ಪೊಲೀಸರನ್ನು ಅಪಹಾಸ್ಯ ಮಾಡುವ ಆ್ಯಪ್

ಬಿಷ್ಣೋಯ್ ಕೇವಲ ಬುಲ್ಲಿ ಬಾಯಿ ಆ್ಯಪ್‌ ಮಾತ್ರವಲ್ಲದೇ ಮುಂಬೈ ಪೊಲೀಸರನ್ನು ಅಪಹಾಸ್ಯ ಮಾಡಲು ಕೂಡ ಆ್ಯಪ್ ನ್ನು ರಚಿಸಿದ್ದರು ಎನ್ನಲಾಗುತ್ತಿದೆ. ಪೊಲೀಸರನ್ನು ಅಪಹಾಸ್ಯ ಮಾಡಲು ಬಿಷ್ಣೋಯ್ @giyu44 ಹ್ಯಾಂಡಲ್ ಅನ್ನು ರಚಿಸಿದ್ದರು. ಇದರಲ್ಲಿ ಬಿಷ್ಣೋಯ್ ಪೊಲೀಸರನ್ನು "ಸ್ಲಂಬೈ ಪೋಲೀಸ್" ಎಂದು ಉಲ್ಲೇಖಿಸಿದ್ದಾರೆ.

ಬಿಷ್ಣೋಯ್ ಅವರ ಟ್ವಿಟರ್ ಖಾತೆಯ ಡಿಜಿಟಲ್ ಕಣ್ಗಾವಲು ಮೂಲಕ ಪತ್ತೆಹಚ್ಚಲಾಗಿದೆ ಎಂದು ಮೂಲಗಳು ಇಂದು ತಿಳಿಸಿವೆ. ಈ ಪ್ರಕರಣದಲ್ಲಿ ಆರಂಭದಲ್ಲಿ ಬಂಧಿಯಾದ ಇಬ್ಬರ ಬಗ್ಗೆ ಬಿಷ್ಣೋಯ್ ಟ್ವೀಟ್ ಮಾಡಿದ್ದರು. "ನೀವು ತಪ್ಪು ವ್ಯಕ್ತಿಯನ್ನು ಬಂಧಿಸಿದ್ದೀರಿ, ಸ್ಲಂಬೈ ಪೋಲೀಸ್... ನಾನು #BulliBaiApp ನ ಸೃಷ್ಟಿಕರ್ತ, ನೀವು ಬಂಧಿಸಿರುವ ಇಬ್ಬರು ಅಮಾಯಕರಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಅವರನ್ನು ಶೀಘ್ರವಾಗಿ ಬಿಡುಗಡೆ ಮಾಡಿ..." ಎಂದು ಟ್ವೀಟ್ ಮಾಡಿದ್ದನು. ಆರೋಪಿ ಶ್ವೇತಾ ಸಿಂಗ್ ಅವರನ್ನು ಬಂಧಿಸಿದ ಒಂದು ದಿನದ ನಂತರ ಬುಧವಾರ ಬೆಳಿಗ್ಗೆ 10.42 ಕ್ಕೆ ಈ ಪೋಸ್ಟ್ ಮಾಡಲಾಗಿತ್ತು. ಪ್ರಕರಣದಲ್ಲಿ ಈವರೆಗೆ ನಾಲ್ವರನ್ನು ಬಂಧಿಸಲಾಗಿದೆ 21ರ ಹರೆಯದ ಮಯಾಂಕ್ ರಾವಲ್, ನಾಲ್ಕನೇ ವ್ಯಕ್ತಿ ಬಿಷ್ಣೋಯ್, ಎರಡನೇ ಬಂಧಿತೆ ಶ್ವೇತಾ ಸಿಂಗ್ (19) ಮತ್ತು ವಿಶಾಲ್ ಕುಮಾರ್ ಝಾ ಸೇರಿದ್ದಾರೆ.

ಒಂದು ವರ್ಷದಲ್ಲಿ ಎರಡು ಆ್ಯಪ್

ಒಂದು ವರ್ಷದಲ್ಲಿ ಎರಡು ಆ್ಯಪ್

ಮುಸ್ಲಿಂ ಮಹಿಳಾ ಪತ್ರಕರ್ತರು ಮತ್ತು ಕಾರ್ಯಕರ್ತರನ್ನು ಆನ್‌ಲೈನ್‌ನಲ್ಲಿ ಕೆಟ್ಟದಾಗಿ ಮಹಿಳೆಯರನ್ನು ಗುರಿಯಾಗಿಸುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕೆ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಮುಂಬೈ ಪೊಲೀಸರು ಶ್ವೇತಾ ಸಿಂಗ್ ಅವರನ್ನು "ಮಾಸ್ಟರ್ ಮೈಂಡ್" ಎಂದು ಬಂಧಿಸಿತ್ತು. ಉತ್ತರಾಖಂಡ ಮೂಲದ ಶ್ವೇತಾ ಸಿಂಗ್ ಗೂ ಹಾಗೂ ವಿಶಾಲ್‌ ನಡುವೆ ನೇರ ಸಂಪರ್ಕವಿದೆ. ಜೊತೆಗೆ ಈಕೆ ಆ್ಯಪ್‌ನ ಸೃಷ್ಟಿಕರ್ತೆ ಎಂದು ಪೊಲೀಸರು ಭಾವಿಸಿದ್ದರು. ಆದರೀಗ ನೀರಜ್ ಬಿಷ್ಣೋಯ್ ಈ ಆ್ಯಪ್‌ನ ಸೃಷ್ಟಿಕರ್ತ ಎನ್ನಲಾಗುತ್ತಿದೆ. ಇಬ್ಬರೂ ಸಾಮಾಜಿಕ ಮಾಧ್ಯಮದ ಮೂಲಕ ಸಂಪರ್ಕದಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ವರ್ಷದೊಳಗೆ ಇದು ಎರಡನೇ ಬಾರಿಗೆ ಆ್ಯಪ್ ಸೃಷ್ಟಿಯಾಗಿದೆ. ಆರಂಭದಲ್ಲಿ 'ಸುಲ್ಲಿ ಡೀಲ್' ಎನ್ನುವ ಆ್ಯಪ್‌ ಸೃಷ್ಟಿಸಲಾಗಿತ್ತು. ಈ ವೇಳೆ ಯಾಋನ್ನೂ ಬಂಧಿಸಲಾಗಿರಲಿಲ್ಲ. 'ಸುಲ್ಲಿ' ಎಂಬುದು ಭಾರತದ ಮುಸ್ಲಿಂ ಮಹಿಳೆಯರ ವಿರುದ್ಧ ಬಲಪಂಥೀಯರು ಬಳಸುವ ಅವಹೇಳನಕಾರಿ ಗ್ರಾಮ್ಯ ಪದವಾಗಿದೆ.

Recommended Video

Team India ಆಟಗಾರರ ಕಳಪೆ ಆಟದಿಂದ ಬೇಸತ್ತ Dravid | Oneindia Kannada

English summary
Neeraj Bishnoi - the main accused behind the 'Bulli Bai' app used by right-wing extremists to 'auction' Muslim women - showed no remorse for his actions during police interrogation, sources said Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X