ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬುಲ್ಲಿ ಬಾಯಿ' ಪ್ರಕರಣ: ಉತ್ತರಾಖಂಡದ 21 ವರ್ಷದ ಯುವಕ ಅರೆಸ್ಟ್

|
Google Oneindia Kannada News

ಮುಂಬೈ ಜನವರಿ 5: 'ಬುಲ್ಲಿ ಬಾಯಿ' ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಸೈಬರ್ ಪೊಲೀಸರು ಉತ್ತರಾಖಂಡದ ಮತ್ತೊಬ್ಬ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ. ವಿದ್ಯಾರ್ಥಿಯನ್ನು ಮಯಾಂಕ್ ರಾವಲ್ (21) ಎಂದು ಗುರುತಿಸಲಾಗಿದೆ. ಬುಧವಾರ ಮುಂಜಾನೆ ಈ ವಿದ್ಯಾರ್ಥಿಯನ್ನು ಉತ್ತರ ರಾಜ್ಯದಿಂದ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಂಬೈ ಪೊಲೀಸರ ಸೈಬರ್ ಸೆಲ್ ಉತ್ತರಾಖಂಡದ ಶ್ವೇತಾ ಸಿಂಗ್ (18) ಮತ್ತು ಬೆಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿ ವಿಶಾಲ್ ಕುಮಾರ್ ಝಾ (21) ಅವರನ್ನು ಬಂಧಿಸಿತ್ತು.

ದೊಡ್ಡ ನೆಟ್‌ವರ್ಕ್
ಪ್ರಕರಣದಲ್ಲಿ ಮೊದಲು ಬಂಧಿತರಾದ ಬೆಂಗಳೂರು ಕಾಲೇಜು ವಿದ್ಯಾರ್ಥಿ ಇತರರ ಮೇಲೆ ಆರೋಪ ಹೋರಿಸಿದ ಬೆನ್ನಲ್ಲೆ 'ಬುಲ್ಲಿ ಬಾಯಿ' ಆ್ಯಪ್ ಪ್ರಕರಣ ದೊಡ್ಡ ನೆಟ್‌ವರ್ಕ್‌ ಹೊಂದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಜೊತೆಗೆ ಇದರ ಹಿಂದೆ ದೊಡ್ಡ ಗ್ಯಾಂಗ್ ಇದೆ ಎಂದು ನಂಬಲು ಪೊಲೀಸರ ಬಳಿ ಸಾಕಷ್ಟು ಪುರಾವೆಗಳಿವೆ ಎನ್ನಲಾಗುತ್ತಿದೆ. ಆರೋಪಿತ ಮಹಿಳೆ ಹಾಗೂ ವಿದ್ಯಾರ್ಥಿಗಳನ್ನು ಬೇರೊಬ್ಬರು ಬಳಸಿಕೊಂಡಿದ್ದಾರೆ. ನಾವು ಅವರನ್ನು ಬಹಿರಂಗಪಡಿಸಲು ಬಯಸುತ್ತೇವೆ. ಅವರು ಯಾವುದೇ ಸಂಘಟನೆ ಅಥವಾ ಪಕ್ಷಕ್ಕೆ ಸೇರಿದವರಾದರೂ ನಾವು ಅವರನ್ನು ಪರಿಶೀಲಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಆ್ಯಪ್

ಓಪನ್ ಸೋರ್ಸ್ ಸಾಫ್ಟ್‌ವೇರ್ ಪ್ಲಾಟ್‌ಫಾರ್ಮ್ ಗಿಟ್‌ಹಬ್‌ನಲ್ಲಿ ಹೋಸ್ಟ್ ಮಾಡಲಾದ 'ಬುಲ್ಲಿ ಬಾಯಿ' ಎಂಬ ಅಪ್ಲಿಕೇಶನ್‌ನಲ್ಲಿ ನೂರಾರು ಮುಸ್ಲಿಂ ಮಹಿಳೆಯರ ಫೋಟೋಗಳನ್ನು 'ಹರಾಜಿಗೆ' ಅಪ್‌ಲೋಡ್ ಮಾಡಲಾಗಿದೆ ಎಂಬ ದೂರಿನ ನಂತರ ಮುಂಬೈ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ. ಈವರೆಗೆ ಈ ಆ್ಯಪ್ ಮೂಲಕ ಯಾವುದೇ ನಿಜವಾದ 'ಹರಾಜು' ಅಥವಾ 'ಮಾರಾಟ' ಮಾಡದೇ ಇದ್ದರೂ, ಆ್ಯಪ್‌ನ ಉದ್ದೇಶವು ಮಹಿಳೆಯರನ್ನು ಅವಮಾನಿಸುವುದು ಮತ್ತು ಬೆದರಿಸುವುದು ಎಂದು ತೋರುತ್ತಿದೆ. ಅದರಲ್ಲೂ ಸಾಮಾಜಿಕ ಮಾಧ್ಯಮದ ಸಕ್ರಿಯ ಬಳಕೆದಾರರಾಗಿರುವ ಮುಸ್ಲಿಂ ಮಹಿಳೆಯರನ್ನು ಹೆಚ್ಚು ಗುರಿಯಾಗಿಸಿಕೊಳ್ಳಲಾಗಿದೆ. ಮುಂಬೈ ಸೈಬರ್ ಪೊಲೀಸ್ ಠಾಣೆಯು ಅಪ್ಲಿಕೇಶನ್‌ನ ಗುರುತಿಸದ ಡೆವಲಪರ್‌ಗಳು ಮತ್ತು ಅದನ್ನು ಪ್ರಚಾರ ಮಾಡಿದ ಟ್ವಿಟರ್ ಹ್ಯಾಂಡಲ್‌ಗಳ ವಿರುದ್ಧವೂ ಪ್ರಕರಣ ದಾಖಲಿಸಿದೆ.

Bulli Bai App Case: Mumbai Police Nab 21-year-old student from Uttarakhand; 3rd arrest in the case

ಗಿಟ್‌ಹಬ್‌ನಲ್ಲಿ ಮುಸ್ಲಿಂ ಮಹಿಳೆಯರ ಈ 'ಹರಾಜು' ಒಂದು ವರ್ಷದೊಳಗೆ ಎರಡನೇ ಬಾರಿಗೆ ನಡೆದಿದೆ. ಇಂಥಹ ಅಪ್ಲಿಕೇಶನ್ ಕಳೆದ ವರ್ಷ 'ಸುಲ್ಲಿ ಡೀಲ್ಸ್' ಎಂಬ ಹೆಸರಿನಲ್ಲಿ ಕಾಣಿಸಿಕೊಂಡಿತ್ತು. ಆದರೆ ಆ ಪ್ರಕರಣದಲ್ಲಿ ಯಾವುದೇ ಬಂಧನಗಳನ್ನು ಮಾಡಲಾಗಿಲ್ಲ. ಆದರೀಗ ಗಿಟ್‌ಹಬ್ ಪ್ಲಾಟ್‌ಫಾರ್ಮ್ ಹೋಸ್ಟ್ ಮಾಡಿದ ಆ್ಯಪ್‌ನಲ್ಲಿ ಮುಸ್ಲಿಂ ಮಹಿಳೆಯರ ಛಾಯಾಚಿತ್ರಗಳನ್ನು 'ಹರಾಜಿಗೆ' ಅಪ್‌ಲೋಡ್ ಮಾಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆರಂಭದಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದರು. ಈ 'ಬುಲ್ಲಿ ಬಾಯಿ' ಆಪ್ ಸಾಮಾಜಿಕ ಜಾಲತಾಣ ಬಳಕೆದಾರರಿಂದ ಹಾಗೂ ರಾಜಕೀಯ ವಲಯಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ದೆಹಲಿ ಪೊಲೀಸರು GitHub ಪ್ಲಾಟ್‌ಫಾರ್ಮ್‌ನಿಂದ ಅಪ್ಲಿಕೇಶನ್‌ನ ಡೆವಲಪರ್ ಕುರಿತು ವಿವರಗಳನ್ನು ಪಡೆದಿದ್ದಾರೆ ಮತ್ತು ಅದರ ಪ್ಲಾಟ್‌ಫಾರ್ಮ್‌ನಲ್ಲಿ ಸಂಬಂಧಿಸಿದ "ಆಕ್ಷೇಪಾರ್ಹ ವಿಷಯಗಳನ್ನು" ನಿರ್ಬಂಧಿಸಲು ಮತ್ತು ತೆಗೆದುಹಾಕಲು Twitter ಗೆ ತಿಳಿಸಿದ್ದಾರೆ.

ಈ ಆಕ್ಷೇಪಾರ್ಹ ಅಪ್ಲಿಕೇಶನ್‌ನಲ್ಲಿ, ಮುಸ್ಲಿಂ ಮಹಿಳೆಯರ ಚಿತ್ರಗಳನ್ನು ಅವರ ಅನುಮತಿಯಿಲ್ಲದೆ 'ಬುಲ್ಲಿ ಬಾಯಿ'ಯಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಹರಾಜಿಗೆ ಬಿಡ್ ಮಾಡುವ ಆಯ್ಕೆಯನ್ನು ಸಹ ನೀಡಲಾಗಿದೆ ಎಂದು ಹೇಳಲಾಗಿದೆ. 'ಬುಲ್ಲಿ ಬಾಯಿ'ಗೆ ಸಂಬಂಧಿಸಿದಂತೆ ರಾಜಕೀಯ ಕದನವೂ ಶುರುವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಶಶಿ ತರೂರು, ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ ಸೇರಿದಂತೆ ಹಲವು ನಾಯಕರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮುಂಬೈ ಪೊಲೀಸರು ಜನವರಿ 1 ರಂದು ಆ್ಯಪ್ ಡೆವಲಪರ್‌ಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 354-ಡಿ (ಮಹಿಳೆಯರನ್ನು ಹಿಂಬಾಲಿಸುವುದು), 500 (ಮಾನನಷ್ಟಕ್ಕೆ ಶಿಕ್ಷೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಇತರ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಗ್ಯಾಂಗ್ ಹಿಂದೆ ಇನ್ನೂ ಕೆಲ ಜನ ಇರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Recommended Video

Shardul Thakur ಆಟ ನೋಡಿ Ashwin ತಮಿಳಿನಲ್ಲಿ ಹೇಳಿದ್ದೇನು | Oneindia Kannada

English summary
Mumbai cyber police have arrested one more student from Uttarakhand in connection with the 'Bulli Bai' app case, an official told PTI on Wednesday, January 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X