• search
 • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಬುಲ್ಲಿ ಬಾಯಿ' ಪ್ರಕರಣ: ಸಿಖ್ ಹೆಸರುಗಳ ದುರ್ಬಳಕೆ

|
Google Oneindia Kannada News

ಮುಂಬೈ ಜನವರಿ 6: ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಹರಾಜಿಗಾಗಿ ಹಾಕುವ 'ಬುಲ್ಲಿ ಬಾಯಿ' ಅಪ್ಲಿಕೇಶನ್‌ ಸೃಷ್ಟಿಕರ್ತನನ್ನು ದೆಹಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಂಧಿತ ಮಾಸ್ಟರ್ ಮೈಂಡ್ ನಿರಾಜ್ ಬಿಷ್ಣೋಯ್ ವಿಚಾರಣೆ ವೇಳೆ ದಾರಿತಪ್ಪಿಸಲು ಸಿಖ್ ಹೆಸರುಗಳ ಬಳಕೆ ಮಾಡಿದ್ದಾನೆಂದು ತಿಳಿದು ಬಂದಿದೆ.

ನಿರಾಜ್ ಬಿಷ್ಣೋಯ್ ಎಂಬ ವ್ಯಕ್ತಿಯನ್ನು ಇಂದು ಅಸ್ಸಾಂನಲ್ಲಿ ಬಂಧಿಸಲಾಗಿದ್ದು, ಈತನನ್ನು ರಾಷ್ಟ್ರ ರಾಜಧಾನಿಗೆ ಕರೆತರಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ ಆರೋಪಿ ಬಿಷ್ಣೋಯ್ ಜನ್ಮ ದಿನಾಂಕ ಸೆಪ್ಟೆಂಬರ್ 27, 2001 ಆಗಿದ್ದು ಭೋಪಾಲ್‌ನ ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎರಡನೇ ವರ್ಷದ ಬಿ.ಟೆಕ್ ಕಂಪ್ಯೂಟರ್ ಸೈನ್ಸ್‌ ವಿದ್ಯಾರ್ಥಿಯಾಗಿದ್ದಾನೆ. ಪ್ರಕರಣದಲ್ಲಿ ಬಂಧಿಯಾಗಿದ್ದ ಎರಡನೇ ಆರೋಪಿ ಶ್ವೇತಾ ಸಿಂಗ್ ಈತನ ಬಗ್ಗೆ ಪೊಲೀಸರಿಗೆ ಸುಳಿವು ನೀಡಿದ್ದಳು. ಮೊದಲು ಸೋಮವಾರ ಬೆಂಗಳೂರು ಮೂಲಕ ಇಂಜಿನೀಯರಿಂಗ್ ವಿದ್ಯಾರ್ಥಿ ವಿಶಾಲ್ ಕುಮಾರ್ ಝಾ (21)ಯನ್ನು ಬಂಧಿಸಲಾಗಿತ್ತು.

ನಂತರ ಶ್ವೇತಾ ಸಿಂಗ್ ಜೊತೆಗೆ ಬುಧವಾರ ಮುಂಜಾನೆ ಉತ್ತರಾಖಂಡದ ಮಾಯಾಂಕ್ ರಾವಲ್ (21) ಅವರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದರು. ಈ ಪ್ರಕರಣದಲ್ಲಿ ನಿರಾಜ್ ಬಿಷ್ಣೋಯ್ ನಾಲ್ಕನೇ ಆರೋಪಿಯಾಗಿದ್ದಾನೆ. ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಮುಂಬೈ ಪೊಲೀಸ್ ಕಮಿಷನರ್ ಹೇಮಂತ್ ನಗ್ರಾಳೆ ಹೇಳಿದ್ದಾರೆ. ಜನವರಿ 2 ರಂದು ಅಪ್ಲಿಕೇಶನ್ ಬಗ್ಗೆ ದೂರನ್ನು ಸ್ವೀಕರಿಸಿದ ನಂತರ ಮುಂಬೈ ಪೊಲೀಸರು ಪ್ರಕರಣದ ಕುರಿತು ಎಫ್‌ಐಆರ್ ದಾಖಲಿಸಿದ್ದಾರೆ, ನಂತರ ತನಿಖಾಧಿಕಾರಿಗಳು ಅಪ್ಲಿಕೇಶನ್ ಮತ್ತು ಸಂಬಂಧಿತ ಟ್ವಿಟರ್ ಹ್ಯಾಂಡಲ್‌ನ ತಾಂತ್ರಿಕ ವಿಶ್ಲೇಷಣೆಯನ್ನು ಪ್ರಾರಂಭಿಸಿದರು ಎಂದು ನಗ್ರಾಳೆ ಹೇಳಿದರು.

ಆಪ್ ದುರ್ಬಳಕೆ

ಆಪ್ ದುರ್ಬಳಕೆ

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಮೂಲದ ವಿಶಾಲ್ ಕುಮಾರ್ ಝಾ ಅವರು ಎರಡನೇ ವರ್ಷದ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಪ್ರಕರಣದ ಆರೋಪಿಗಳಲ್ಲಿ ಒಬ್ಬರು ಎಂದಿದ್ದಾರೆ. ಜೊತೆಗೆ ದೆಹಲಿ ಪೊಲೀಸರು ನಿರ್ವಹಿಸುತ್ತಿರುವ ‘ಸುಲ್ಲಿ ಡೀಲ್ಸ್' ಪ್ರಕರಣದ ಆರೋಪಿಗಳು ಇದರಲ್ಲಿ ಭಾಗಿಯಾಗಿದ್ದಾರೆಯೇ ಎಂದು ಕೇಳಿದಾಗ ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು. ಮುಂಬೈ ಪೊಲೀಸರು ತನಿಖೆ ನಡೆಸುತ್ತಿರುವ 'ಬುಲ್ಲಿ ಬಾಯಿ' ಅಪ್ಲಿಕೇಶನ್‌ನಲ್ಲಿ ಮುಸ್ಲಿಂ ಮಹಿಳೆಯರನ್ನು ಅವರ ಒಪ್ಪಿಗೆ ಇಲ್ಲದೆ ಹರಾಜಿಗಾಗಿ ಅವರ ಫೋಟೋಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಈವರೆಗೂ ಯಾವುದೇ ಯಾವುದೇ ಮಾರಾಟ ಇಲ್ಲದಿದ್ದರೂ ಆ್ಯಪ್‌ನ ಉದ್ದೇಶ ಮಹಿಳೆಯರನ್ನು ಬೆದರಿಸುವುದು ಎಂದು ತೋರುತ್ತದೆ. ಈ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವವರಾಗಿದ್ದಾರೆ.

ಆರೋಪಿ ಬಾಯಿಬಿಟ್ಟ ಸತ್ಯ

ಆರೋಪಿ ಬಾಯಿಬಿಟ್ಟ ಸತ್ಯ

ಈ ಪ್ರಕರಣದ ಪ್ರಮುಖ ಆರೋಪಿ 18 ವರ್ಷದ ಶ್ವೇತಾ ಸಿಂಗ್ ಅವರು ಆಪ್‌ನ ಟ್ವಿಟರ್ ಹ್ಯಾಂಡಲ್ ಅನ್ನು ರಚಿಸಿದ್ದಾರೆ ಎಂದು ಹೇಳಲಾಗಿದೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ಸಿಂಗ್ 12 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು ಮತ್ತು ಎಂಜಿನಿಯರಿಂಗ್ ಕೋರ್ಸ್ ಅನ್ನು ಮುಂದುವರಿಸಲು ಯೋಜಿಸುತ್ತಿದ್ದರು. ಅವಳು ತನ್ನ ತಂದೆಯನ್ನು ಕೋವಿಡ್ -19 ಗೆ ಕಳೆದುಕೊಂಡಳು ಮತ್ತು ಆಕೆಯ ತಾಯಿ 2011 ರಲ್ಲಿ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ. ಸುದ್ದಿ ಸಂಸ್ಥೆ IANS ನಲ್ಲಿನ ವರದಿಯ ಪ್ರಕಾರ, ಸಿಂಗ್ ಅವರಿಗೆ ಇಬ್ಬರು ಸಹೋದರಿಯರಿದ್ದಾರೆ. ಕುಟುಂಬದ ವಾರ್ಷಿಕ ಆದಾಯ ಸುಮಾರು 13,000 ರೂಪಾಯಿ ಆಗಿದೆ. ಕೋವಿಡ್ -19 ನಿಂದ ಅನಾಥರಾದವರ ಕಲ್ಯಾಣಕ್ಕಾಗಿ ಉತ್ತರಾಖಂಡ ಸರ್ಕಾರದ ಯೋಜನೆಯಾದ ವಾತ್ಸಲ್ಯ ಯೋಜನೆಯಿಂದ ಅವರು ರೂ 3,000 ಮತ್ತು ಆಕೆಯ ತಂದೆ ಕೆಲಸ ಮಾಡುತ್ತಿದ್ದ ಉತ್ಪಾದನಾ ಘಟಕದಿಂದ ರೂ 10,000 ಪಡೆಯುತ್ತಿದ್ದಾರೆ ಎಂದು ವರದಿ ಹೇಳಿದೆ.

ನೇಪಾಳದಲ್ಲಿ ನೆಲೆಸಿರುವ ಶಂಕಿತ ‘ಗಿಯೂ' ಎಂಬಾತನ ಸೂಚನೆ ಮೇರೆಗೆ ಸಿಂಗ್ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಈ ವ್ಯಕ್ತಿಯ ಸೂಚನೆಯ ಮೇರೆಗೆ ಸಿಂಗ್ ಟ್ವಿಟ್ಟರ್ ಹ್ಯಾಂಡಲ್ ಅನ್ನು ಮಾಡಿದರು (@jattkhalsa07). ಇದರಲ್ಲಿ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅಪ್‌ಲೋಡ್ ಮಾಡಲು ಪ್ರಾರಂಭಿಸಿದರು. ವರದಿಗಳ ಪ್ರಕಾರ ಮುಂಬೈ ಪೊಲೀಸರು ಇದೀಗ ಶ್ವೇತಾ ಸಿಂಗ್ ಮತ್ತು ವಿಶಾಲ್ ಕುಮಾರ್ ಝಾ ಅವರೊಂದಿಗೆ ಇತ್ತೀಚಿನ ಬಂಧನ ಮಯಾಂಕ್ ರಾವಲ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಆ್ಯಪ್ ಸೃಷ್ಟಿಕರ್ತ ಸಿಕ್ಕಿಬಿದ್ದಿದ್ದು ಹೇಗೆ?

ಆ್ಯಪ್ ಸೃಷ್ಟಿಕರ್ತ ಸಿಕ್ಕಿಬಿದ್ದಿದ್ದು ಹೇಗೆ?

ಹಿಂದೂಸ್ತಾನ್ ಟೈಮ್ಸ್‌ನ ವರದಿಯ ಪ್ರಕಾರ, '@giyu44' ಹ್ಯಾಂಡಲ್ ಅನ್ನು ಬಳಸುವ ಟ್ವಿಟರ್ ಬಳಕೆದಾರ ಅಪ್ಲಿಕೇಶನ್‌ನಲ್ಲಿ ಬಿಷ್ಣೋಯ್ ತಾನು "ನೈಜ ಸೃಷ್ಟಿಕರ್ತ" ಎಂದು ಹೇಳಿಕೊಂಡಿದ್ದಾರೆ. "ನೀವು ತಪ್ಪು ವ್ಯಕ್ತಿಯನ್ನು ಬಂಧಿಸಿದ್ದೀರಿ. ನಾನು #BulliBaiApp ನ ಸೃಷ್ಟಿಕರ್ತ. ನೀವು ಬಂಧಿಸಿದ ಇಬ್ಬರು ಅಮಾಯಕರಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ, ಅವರನ್ನು ಆದಷ್ಟು ಬೇಗ ಬಿಡುಗಡೆ ಮಾಡಿ,"ಎಂದು ಟ್ವೀಟ್‌ನಲ್ಲಿ ಬರೆದಿದ್ದರು.

"ಈ ವೈಫಲ್ಯ ಪ್ರಾರಂಭವಾದಾಗ ಅದು ಏನಾಗಬಹುದು ಎಂಬುದರ ಬಗ್ಗೆ ನನಗೆ ತಿಳಿದಿರಲಿಲ್ಲ, ಆದ್ದರಿಂದ ನಾನು ನನ್ನ ಸ್ನೇಹಿತರ ಖಾತೆಗಳನ್ನು ಬಳಸುತ್ತೇನೆ. ವಿಶಾಲ್ ಮತ್ತು ಆ ಶ್ವೇತಾ ಇಬ್ಬರ ಖಾತೆಯನ್ನು ನಾನು ಬಳಸುತ್ತೇನೆ. ನಾನು ಏನು ಮಾಡಲಿದ್ದೇನೆ ಎಂದು ಅವರಿಗೆ ತಿಳಿದಿರಲಿಲ್ಲ. ಈಗ ಅವರು ನನ್ನನ್ನು ಬಂಧಿಸಿದ್ದಾರೆ. ಕಾಮೆಂಟ್‌ಗಳಲ್ಲಿ ನನ್ನನ್ನು ನಿಂದಿಸಲು ಹಿಂಜರಿಯಬೇಡಿ. ಯಾರಾದರೂ ನನ್ನ ವಿಮಾನ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದರೆ ನಾನು ವೈಯಕ್ತಿಕವಾಗಿ ಶರಣಾಗುತ್ತೇನೆ" ಎಂದು ಬರೆಯಲಾಗಿತ್ತು. ಮುಂಬೈ ಪೊಲೀಸರು ಈ ಖಾತೆಯ ಹ್ಯಾಂಡಲ್‌ನ ಮಾಲೀಕರನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ ಎಂದು ವರದಿ ಹೇಳಿದೆ.

ಕೋಮು ಉದ್ವಿಗ್ನತೆಗೆ ಸಂಚು

ಕೋಮು ಉದ್ವಿಗ್ನತೆಗೆ ಸಂಚು

ಆರೋಪಿಗಳು ತಮ್ಮ ಟ್ವಿಟರ್ ಹ್ಯಾಂಡಲ್‌ಗಳಲ್ಲಿ ಸಿಖ್ ಸಮುದಾಯಕ್ಕೆ ಸಂಬಂಧಿಸಿದ ಹೆಸರುಗಳನ್ನು ಬಳಸಿದ್ದಾರೆಂದು ಮುಂಬೈ ಪೊಲೀಸರು ಹೇಳಿದ್ದಾರೆ. ಅದು ಅವರ ಗುರುತಿನ ಬಗ್ಗೆ ಜನರನ್ನು ದಾರಿ ತಪ್ಪಿಸುವ ಸಲುವಾಗಿ ಬಳಕೆ ಮಾಡಿಕೊಂಡ ಹೆಸರಾಗಿದೆ ಎಂದು ಮುಂಬೈ ಪೊಲೀಸ್ ಕಮಿಷನರ್ ಹೇಮಂತ್ ನಗ್ರಾಳೆ ಹೇಳಿದ್ದಾರೆ.

ಆರೋಪಿಗಳು ತಮ್ಮ ಟ್ವಿಟರ್ ಹ್ಯಾಂಡಲ್‌ಗಳಲ್ಲಿ ಸಿಖ್ ಸಮುದಾಯಕ್ಕೆ ಸಂಬಂಧಿಸಿದ ಹೆಸರುಗಳನ್ನು ಬಳಸುವುದರಿಂದ ಕೋಮು ಉದ್ವಿಗ್ನತೆ ಉಂಟಾಗಬಹುದು. ಏಕೆಂದರೆ ಗುರಿಯಾಗಿಸಿಕೊಂಡ ಮಹಿಳೆಯರು ಬೇರೆ ಧರ್ಮಕ್ಕೆ ಸೇರಿದವರಾಗಿದ್ದಾರೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. "ಈ ಟ್ವಿಟರ್ ಹ್ಯಾಂಡಲ್‌ಗಳನ್ನು ಆ ಸಮುದಾಯದ ವ್ಯಕ್ತಿಗಳು ರಚಿಸಿದಂತೆ ಕಾಣುವಂತೆ ಸಿಖ್ ಸಮುದಾಯಕ್ಕೆ ಸಂಬಂಧಿಸಿದ ಹೆಸರುಗಳನ್ನು ಬಳಸಲಾಗಿದೆ" ಎಂದು ನಾಗ್ರಾಳೆ ಹೇಳಿದ್ದಾರೆ.

ಆರೋಪಿಗಳು @bullibai_, @sage0x11, @jatkhalsa7, @wannabesigmaf, @jatkhalsa ಮತ್ತು @Sikh_khalsa11 ನಂತಹ ಹ್ಯಾಂಡಲ್‌ಗಳನ್ನು ಬಳಸಿಕೊಂಡು ಟ್ವಿಟ್ಟರ್‌ನಲ್ಲಿ ಬುಲ್ಲಿ ಬಾಯಿ ಅಪ್ಲಿಕೇಶನ್‌ನಿಂದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಪ್ಲಿಕೇಶನ್‌ನ ಟ್ವಿಟರ್ ಹ್ಯಾಂಡಲ್‌ನಲ್ಲಿರುವ ಮಾಹಿತಿಯಲ್ಲಿ ಅದರ ಸೃಷ್ಟಿಕರ್ತ "KSF ಖಾಲ್ಸಾ" ಎಂದಿದೆ.

   IND vs Pak ಮಹಿಳಾ ತಂಡದ ಪಂದ್ಯ ಶುರು ! | Oneindia Kannada

   English summary
   Delhi Police on Thursday reportedly arrested the main conspirator and creator of the ‘Bulli Bai’ app which targeted Muslim women by putting up their images online for ‘auction’.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   Desktop Bottom Promotion