ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿ ಕನಸಿನ ಬುಲೆಟ್‌ ಟ್ರೈನ್ ಯೋಜನೆಗೆ ಹಿನ್ನಡೆ: ಭೂಮಿ ಹಸ್ತಾಂತರಿಸಲು ಥಾಣೆ ಮಹಾನಗರ ಪಾಲಿಕೆ ನಕಾರ

|
Google Oneindia Kannada News

ಮುಂಬೈ, ಡಿಸೆಂಬರ್ 25: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ಅಹಮದಾಬಾದ್-ಮುಂಬೈ ನಡುವಿನ ಬುಲೆಟ್‌ ಟ್ರೈನ್ ಯೋಜನೆಗೆ ಕೊಂಚ ಹಿನ್ನಡೆಯಾಗಿದೆ. ಶಿವಸೇನೆ ನೇತೃತ್ವದ ಥಾಣೆ ಮಹಾನಗರಪಾಲಿಕೆಯು ಭೂಮಿಯನ್ನು ಹಸ್ತಾಂತರಿಸುವ ಪ್ರಸ್ತಾಪವನ್ನು ತಿರಸ್ಕರಿಸಿದೆ.

ಕಾಂಜು‌ರ್ಮಾರ್ಗ್‌ನಲ್ಲಿ ಮುಂಬೈ ಮೆಟ್ರೋ ಯೋಜನೆಗೆ ಭೂಮಿ ಹಂಚಿಕೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಮತ್ತು ಶಿವಸೇನಾ ನೇತೃತ್ವದ ಮಹಾರಾಷ್ಟ್ರ ನಡುವಿನ ವಿವಾದದ ನಡುವೆ ಈ ನಿರ್ಧಾರ ಹೊರಬಿದ್ದಿದೆ.

ಮೆಗಾ 2030 ಯೋಜನೆ: ರೈಲ್ವೆಯಲ್ಲಿ 'ನೋ ವೈಟಿಂಗ್ ಲಿಸ್ಟ್', ಎಲ್ಲಾ ಟಿಕೆಟ್ ಕನ್ಫರ್ಮ್ಮೆಗಾ 2030 ಯೋಜನೆ: ರೈಲ್ವೆಯಲ್ಲಿ 'ನೋ ವೈಟಿಂಗ್ ಲಿಸ್ಟ್', ಎಲ್ಲಾ ಟಿಕೆಟ್ ಕನ್ಫರ್ಮ್

ಅಹಮದಾಬಾದ್-ಮುಂಬೈ ಬುಲೆಟ್ ರೈಲು ಯೋಜನೆಯನ್ನು ಕಾರ್ಯಗತಗೊಳಿಸುತ್ತಿರುವ ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೊರೇಶನ್ ಲಿಮಿಟೆಡ್ (ಎನ್‌ಎಚ್‌ಎಸ್‌ಆರ್‌ಸಿ) 3,800 ಚದರ ಮೀಟರ್ ಭೂಮಿಯನ್ನು ನೀಡುವಂತೆ ಥಾಣೆ ಮಹಾನಗರಪಾಲಿಗೆ ಕೇಳಿಕೊಂಡಿತ್ತು. ಆದರೆ ಬುಧವಾರ ಟಿಎಂಸಿಯ ಸಾಮಾನ್ಯ ಸಂಸ್ಥೆಯ ಸಭೆಯಲ್ಲಿ ತಿರಸ್ಕರಿಸಿದೆ ಎಂದು ಹೇಳಲಾಗಿದೆ.

Bullet Train: Thane Municipal Corporation Refuses To Transfer 3000 Sq Mt Land

ಎನ್‌ಎಚ್‌ಎಸ್‌ಆರ್‌ಸಿ ಟಿಎಂಸಿಗೆ 6 ಕೋಟಿ ರೂ.ಗಳ ಪರಿಹಾರಕ್ಕಾಗಿ ಭೂಮಿಯನ್ನು ಹಸ್ತಾಂತರಿಸುವಂತೆ ಕೋರಿತ್ತು. ಈ ಸಂಬಂಧ ಪ್ರಸ್ತಾವನೆ ಬುಧವಾರ ಐದನೇ ಬಾರಿಗೆ ಸಾಮಾನ್ಯ ಮಂಡಳಿಯ ಮುಂದೆ ಬಂದು ತಿರಸ್ಕರಿಸಲ್ಪಟ್ಟಿತು.

ಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ

ಮುಂಬೈ ಮೆಟ್ರೊಗೆ ಕಾರ್ ಶೆಡ್ ಇರುವ ಸ್ಥಳವನ್ನು ಪೂರ್ವ ಮುಂಬಯಿಯ ಕಾಂಜುರ್ಮಾರ್ಗ್‌ಗೆ ಸ್ಥಳಾಂತರಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಆದರೆ ಕೇಂದ್ರ ಸರ್ಕಾರವು ಭೂಮಿ ತನ್ನ ಇಲಾಖೆಗೆ ಸೇರಿದೆ ಎಂದು ಹೈಕೋರ್ಟ್‌ಗೆ ಮೊರೆ ಹೋಗಿದ್ದು, ಭೂಮಿ ಹಂಚಿಕೆಯನ್ನು ಹೈಕೋರ್ಟ್‌ ತಡೆಹಿಡಿದಿದೆ.

English summary
Shiv Sena-led Thane Municipal Corporation has rejected a proposal for handing over land for bullet train it in the district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X