ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟದಲ್ಲಿ ಸರ್ಕಾರ ಬಂದ ತಕ್ಷಣ, ಬುಲೆಟ್ ಟ್ರೈನ್ ಔಟ್

|
Google Oneindia Kannada News

ಮುಂಬೈ, ನವೆಂಬರ್ 22: ಮಹಾರಾಷ್ಟ್ರದಲ್ಲಿ ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ, ಬುಲೆಟ್ ಟ್ರೈನ್ ಯೋಜನೆಗೆ ಅಡ್ಡಗಾಲು ಹಾಕಲಾಗುತ್ತದೆ ಎಂಬ ಸುದ್ದಿ ಬಂದಿದೆ. ಮುಂಬೈ ಮತ್ತು ಅಹಮದಾಬಾದ್ ನಡುವಿನ ಈ ಬುಲೆಟ್ ಟ್ರೈನ್ ಯೋಜನೆಯ ಶಂಕುಸ್ಥಾಪನೆ ಮಾಡಲಾಗಿದೆ. ಆದರೆ, ಈ ಯೋಜನೆಯನ್ನು ಎನ್ಸಿಪಿ ವಿರೋಧಿಸಿದ್ದು, ಶಿವಸೇನಾ ಪರೋಕ್ಷವಾಗಿ ಅನೇಕ ಬಾರಿ ಪ್ರಶ್ನಿಸಿತ್ತು.

"ಶಿವಸೇನೆ ಯಾವತ್ತೂ ಅಭಿವೃದ್ಧಿಯ ವಿರೋಧಿ ಪಕ್ಷವಲ್ಲ. ಆದರೆ ನಿಜವಾಗಿಯೂ ನಮಗೆ ಬುಲೆಟ್ ರೈಲು ಅಗತ್ಯವಿದೆಯೇ? ಸರಕಾರದ ಆದ್ಯತೆ ಏನು? ವ್ಯಾಪಾರಿಗಳಾಗಲಿ, ಉದ್ಯಮಿಗಳಾಗಲಿ, ಸಾಮಾನ್ಯ ಜನರಾಗಲಿ ಬುಲೆಟ್ ರೈಲು ಯೋಜನೆ ಬೇಕೆಂದು ಹೇಳಿಲ್ಲ. ಹಾಗಿದ್ದರೆ 1,08,000 ಕೋಟಿ ರೂಪಾಯಿಗಳ ಈ ಯೋಜನೆಯ ಉದ್ದೇಶವೇನು?," ಎಂದು ಶಿವಸೇನೆ ವಕ್ತಾರ ಮನಿಷಾ 2017ರಲ್ಲಿ ಪ್ರಶ್ನಿಸಿದ್ದರು. ಈಗ ಮಹಾರಾಷ್ಟದಲ್ಲಿಅಧಿಕಾರ ಕೈಗೆ ಬಂದ ಬಳಿಕ ಕೇಂದ್ರ ಸರ್ಕಾರಿ ಯೋಜನೆಗಳನ್ನು ಬದಲಾಯಿಸುವ ಸ್ಥಳೀಯ ಯೋಜನೆಗಳಿಗೆ ಮಾತ್ರ ಆದ್ಯತೆ ನೀಡುವ ಅಂಶವೂ ಹೊಸ ಮೈತ್ರಿಯ ಮುಂದಿದೆ.

ಒಂದೂವರೆ ನಿಮಿಷದಲ್ಲಿ ಮುಗಿದ ಆ ಆಪರೇಷನ್ ಬಗ್ಗೆ ತಿಳಿಯಬೇಕಾದ 10 ಸಂಗತಿ ಒಂದೂವರೆ ನಿಮಿಷದಲ್ಲಿ ಮುಗಿದ ಆ ಆಪರೇಷನ್ ಬಗ್ಗೆ ತಿಳಿಯಬೇಕಾದ 10 ಸಂಗತಿ

ಭಾರತದ ಮೊಟ್ಟಮೊದಲ ಬುಲೆಟ್ ಟ್ರೈನ್ ಗೆ 2017ರ ಸೆ.14ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಶಂಕುಸ್ಥಾಪನೆ ನೆರವೇರಿಸಿದ್ದಾಗಿದೆ. 2023 ರ ಹೊತ್ತಿಗೆ ಬುಲೆಟ್ ಟ್ರೈನ್ ಕಾರ್ಯಾರಂಭವೂ ಆಗಲಿದೆ.

 ಉದ್ಯೋಗ ಸೃಷ್ಟಿಯಾಗುತ್ತದೆ ಎನ್ನುವುದು ಸುಳ್ಳು

ಉದ್ಯೋಗ ಸೃಷ್ಟಿಯಾಗುತ್ತದೆ ಎನ್ನುವುದು ಸುಳ್ಳು

"ರೈತರ ಸಾಲ, ಶಿಕ್ಷಣ, ಆರೋಗ್ಯ ಸೇವೆ ಮತ್ತು ಮೂಲ ಸೌಕರ್ಯಗಳೂ ಸೇರಿದಂತೆ ಹಲವು ಸಮಸ್ಯೆಗಳಿಂದ ದೇಶದ ಜನ ಬಳಲುತ್ತಿದ್ದಾರೆ. ಸಮಾಜದ ಕೆಳ ವರ್ಗದವರು ಸರಕಾರದ ಆದ್ಯತೆಯಾಗಬೇಕಿತ್ತು. ಆದರೆ ಹಾಗಾಗಿಲ್ಲ," ಎಂದು ಮನಿಷಾ ಖಾಂಡ್ಯೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಬುಲೆಟ್ ರೈಲು ಯೋಜನೆಯಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎನ್ನುವುದು ಸುಳ್ಳು. ಜಪಾನ್ ಮೆಷೀನ್ ಗಳಿಂದ ಹಿಡಿದ ಕಾರ್ಮಿಕರನ್ನೂ ಕರೆತರುತ್ತದೆ. 1,08,000 ಕೋಟಿ ರೂಪಾಯಿಯ ಯೋಜನೆಯಲ್ಲಿ ಕನಿಷ್ಟ 30,000 ಕೋಟಿ ರೂಪಾಯಿಯನ್ನು ಮಹಾರಾಷ್ಟ್ರವೇ ಹೂಡಿಕೆ ಮಾಡಬೇಕಾಗುತ್ತದೆ. ಹೀಗಿರುವಾಗ ರೈತರ ಆತ್ಮಹತ್ಯೆಯನ್ನು ಪರಿಗಣಿಸಿ ರೈತರ ಸಾಲ ಮನ್ನಾ ಸರಕಾರದ ಆದ್ಯತೆಯಾಗಬೇಕಿದೆ. ಜನಪರ ಯೋಜನೆಪೆ ರಾಜ್ಯ ಸರ್ಕಾರ ಆದ್ಯತೆ ನೀಡಲಿದೆ ಎಂದರು.

 2022 ಆಗಸ್ಟ್ 15ಕ್ಕೆ ಅರ್ಪಣೆ ಮಾಡಲು ಸಿದ್ಧತೆ

2022 ಆಗಸ್ಟ್ 15ಕ್ಕೆ ಅರ್ಪಣೆ ಮಾಡಲು ಸಿದ್ಧತೆ

1.1 ಲಕ್ಷ ಕೋಟಿ ಮೌಲ್ಯದ ಈ ಬುಲೆಟ್ ಟ್ರೈನ್ ಯೋಜನೆಯು ಭಾರತೀಯ ರೈಲ್ವೆ ಮತ್ತು ಜಪನೀಸ್ ಪರ್ಮ್ ಶಿಂಕನ್ಸೆನ್ ಟೆಕ್ನಾಲಜಿಯ ಜಂಟಿ ಸಹಭಾಗಿತ್ವದಲ್ಲಿ ನಡೆಯುತ್ತಿದೆ. ಜಪಾನ್ ತಂಡದ ಅಂದಾಜಿನ ಪ್ರಕಾರ ಈ ಯೋಜನೆ 2023 ರಲ್ಲಿ ಸಂಪೂರ್ಣ ಮುಕ್ತಾಯಗೊಂಡು, ಬುಲೆಟ್ ಟ್ರೈನ್ ಕಾರ್ಯಾರಂಭವಾಗಲಿದೆ. 2022 ಆಗಸ್ಟ್ 15 ರಂದೇ ಅಂದರೆ ಭಾರತ 75 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುವಾಗಲೇ ಈ ರೈಲು ಕಾರ್ಯಾರಂಭಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಇಂಗಿತ ವ್ಯಕ್ತಪಡಿಸಿದ್ದಾರೆ.

ಚೆನ್ನೈ- ಬೆಂಗಳೂರ್ ಬುಲೆಟ್ ಟ್ರೈನ್ ಸೇರಿ 10 ಹೊಸ ರೈಲು?ಚೆನ್ನೈ- ಬೆಂಗಳೂರ್ ಬುಲೆಟ್ ಟ್ರೈನ್ ಸೇರಿ 10 ಹೊಸ ರೈಲು?

 ಜಪಾನ್ ಶೇ.81 ರಷ್ಟು ಹಣನೀಡಲಿದೆ

ಜಪಾನ್ ಶೇ.81 ರಷ್ಟು ಹಣನೀಡಲಿದೆ

ಈ ಯೋಜನೆಗೆ ಜಪಾನ್ ಶೇ.81 ರಷ್ಟು ಹಣನೀಡಲಿದೆ. ಸುಮಾರು 88,000 ಕೋಟಿ ರೂ.ಗಳನ್ನು ಜಪಾನ್ ಸಾಲದ ರೂಪದಲ್ಲಿ ನೀಡಲಿದ್ದು, ಇದಕ್ಕೆ ಕೇವಲ 0.1% ಬಡ್ಡಿಯನ್ನಷ್ಟೇ ಹಾಕಲಾಗುತ್ತದೆ. ಈ ಸಾಲವನ್ನು ಮುಂದಿನ 50 ವರ್ಷಗಳೊಳಗಾಗಿ ತೀರಿಸಬೇಕಾಗುತ್ತದೆ. ಆದರೆ, ಇದಕ್ಕೆ ಮೂರು ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಯೋಜನೆಯ ಸಂಪೂರ್ಣವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿ ಎಂದು ನಿರ್ಣಯ ಕೈಗೊಂಡಿವೆ. ರಾಜ್ಯ ಸರ್ಕಾರ ಈ ಯೋಜನೆಯ 1.08 ಲಕ್ಷ ಕೋಟಿ ರು ಪೈಕಿ 5000 ಕೋಟಿ ರು ವೆಚ್ಚ ಭರಿಸಲು ಮುಂದಾಗಿತ್ತು.

ಮುಂಬೈ-ಅಹಮದಾಬಾದ್ ಬುಲೆಟ್ ರೈಲಿನಿಂದ ಹಲವು ಪರೋಕ್ಷ ಲಾಭಗಳುಮುಂಬೈ-ಅಹಮದಾಬಾದ್ ಬುಲೆಟ್ ರೈಲಿನಿಂದ ಹಲವು ಪರೋಕ್ಷ ಲಾಭಗಳು

 ಗುಜರಾತ್ ಮತ್ತು ಮುಂಬೈ ನಡುವೆ ಓಡಾಟ

ಗುಜರಾತ್ ಮತ್ತು ಮುಂಬೈ ನಡುವೆ ಓಡಾಟ

ಈ ಟ್ರೈನ್ ಗುಜರಾತ್ ಮತ್ತು ಮುಂಬೈ ನಡುವೆ ಓಡಾಡಲಿದ್ದು, 750 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಪಡೆದಿದೆ. ಈ ಟ್ರೈನ್ ಮೂಲಕ 8 ಗಂಟೆಯ ಪ್ರಯಾಣವನ್ನು(12 ನಿಲ್ದಾಣ) ಕೇವಲ 3 ಗಂಟೆಗೆ ಇಳಿಸಬಹುದಾಗಿದೆ. ಟ್ರೈನ್ ಅನ್ನು ಕೇವಲ ನಾಲ್ಕೇ ನಿಲ್ದಾಣಗಳಲ್ಲಿ ನಿಲ್ಲಿಸಿದಲ್ಲಿ ಕೇವಲ 2ಗಂಟೆಗೆ ಮುಂಬೈ ತಲುಪಬಹುದಾಗಿದೆ! ಟಿಕೇಟ್ ಬೆಲೆ ರೂ. 1500/-

ಒಟ್ಟು 508 ಕಿ.ಮೀ.ಉದ್ದದ ದಾರಿಯಲ್ಲಿ ಶೇ.92 ರಷ್ಟು ಎಲೆವೇಟೆಡ್ ಮಾರ್ಗವಾಗಿದ್ದು, ಶೆ.6 ರಷ್ಟು ಸುರಂಗ ಮತ್ತು ಉಳಿದ ಹಾದಿ ನೆಲದ ಮೇಲಿರಲಿದೆ. ಈ ಟ್ರೈನು ಮಹಾರಾಷ್ಟ್ರದ ಥಾಣೆಯ 21 ಕಿ.ಮೀ.ದೂರದ ದೇಶದ ಅತ್ಯಂತ ಉದ್ದದ ಸುರಂಗವನ್ನು ಹಾದುಹೋಗಲಿದೆ. ಮತ್ತು ಇವುಗಳಲ್ಲಿ 7 ಕಿ.ಮೀ.ಸಮುದ್ರದೊಳಗಿನ ಮಾರ್ಗವೂ ಆಗಿರಲಿದೆ.

English summary
India's highly ambitious Bullet train project of National High-Speed Railway Corp (NHSRCL) would hit a roadblock if the Congress-NCP-Shiv Sena alliance forms government in Maharashtra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X