• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಂಬೈ; ಕಟ್ಟಡ ಕುಸಿತ ಮಕ್ಕಳು ಸೇರಿ 11 ಜನರು ಸಾವು

|
Google Oneindia Kannada News

ಮುಂಬೈ, ಜೂನ್ 10; ಮುಂಬೈ ನಗರದ ಪಶ್ಚಿಮ ಭಾಗದ ಮಲಾಡ್ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದಿದೆ. ಘಟನೆಯಲ್ಲಿ 11 ಜನರು ಮೃತಪಟ್ಟಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ನಾಲ್ಕು ಅಂತಸ್ತಿನ ಕಟ್ಟಡ ಬುಧವಾರ ತಡರಾತ್ರಿ ಕುಸಿದು ಮತ್ತೊಂದು ಕಟ್ಟಡದ ಮೇಲೆ ಬಿದ್ದಿದೆ. ಇದುವರೆಗೂ 18 ಜನರನ್ನು ರಕ್ಷಣೆ ಮಾಡಲಾಗಿದ್ದು, 6 ಮಕ್ಕಳು ಸೇರಿದಂತೆ 11 ಜನರು ಮೃತಪಟ್ಟಿದ್ದಾರೆ.

ಮೈಸೂರು; ಲಾಕ್‌ಡೌನ್‌ನಲ್ಲಿ ಜೆಸಿಬಿ ಘರ್ಜನೆ, ಅಕ್ರಮ ಕಟ್ಟಡ ತೆರವು ಮೈಸೂರು; ಲಾಕ್‌ಡೌನ್‌ನಲ್ಲಿ ಜೆಸಿಬಿ ಘರ್ಜನೆ, ಅಕ್ರಮ ಕಟ್ಟಡ ತೆರವು

ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಅವಶೇಗಳಡಿ ಸಿಲುಕಿದ ಜನರಿಗಾಗಿ ಹುಡುಕಾಟವನ್ನು ನಡೆಸಲಾಗುತ್ತಿದೆ. ಘಟನೆಯಲ್ಲಿ 6 ಜನರು ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಥಾಣೆಯಲ್ಲಿ ವಸತಿ ಕಟ್ಟಡ ಕುಸಿದು ಐವರ ದುರ್ಮರಣ ಥಾಣೆಯಲ್ಲಿ ವಸತಿ ಕಟ್ಟಡ ಕುಸಿದು ಐವರ ದುರ್ಮರಣ

"ಇದೊಂದು ವಿಷಾದಕರ ಘಟನೆ. 18 ಜನರನ್ನು ಇದುವರೆಗೂ ರಕ್ಷಣೆ ಮಾಡಲಾಗಿದೆ. ಪೊಲೀಸರು ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ" ಎಂದು ಪೊಲೀಸ್ ಅಧಿಕಾರಿ ದಿಲೀಪ್ ಸಾವಂತ್ ಹೇಳಿದ್ದಾರೆ.

3 ಸಾವಿರ ಡೈನಮೈಟ್ ಬಳಸಿ ಟ್ರಂಪ್‌ಗೆ ಸೇರಿದ್ದ ಕಟ್ಟಡ ಸ್ಫೋಟಿಸಿದ್ದು ಯಾಕೆ..? 3 ಸಾವಿರ ಡೈನಮೈಟ್ ಬಳಸಿ ಟ್ರಂಪ್‌ಗೆ ಸೇರಿದ್ದ ಕಟ್ಟಡ ಸ್ಫೋಟಿಸಿದ್ದು ಯಾಕೆ..?

ಪೊಲೀಸರು, ಅಗ್ನಿ ಶಾಮಕದಳದ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಜೆಸಿಬಿ ಸಹಾಯದಿಂದ ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ. ಅವಶೇಷಗಳಡಿ ಇನ್ನೂ ಜನರು ಸಿಲುಕಿದ್ದಾರೆಯೇ ಎಂದು ಹುಡುಕಾಟ ನಡೆಸಲಾಗುತ್ತಿದೆ.

English summary
Building collapsed at Malad west of Mumbai. 11 people died and 7 injured. Search and rescue operation continues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X