ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಪಕ್ಷದ ಪ್ರಮುಖ ನಾಯಕನಿಗೆ ಥಳಿಸಿದ ಬಿಎಸ್‌ಪಿ ಕಾರ್ಯಕರ್ತರು

|
Google Oneindia Kannada News

ಅಮರಾವತಿ (ಮಹಾರಾಷ್ಟ್ರ), ಜೂನ್ 18: ಲೋಕಸಭೆ ಚುನಾವಣೆಯಲ್ಲಿ ಸೋಲಿನ ಬಗ್ಗೆ ಕರೆಯಲಾಗಿದ್ದ ಅತ್ಮಾವಲೋಕನ ಸಭೆಯಲ್ಲಿ ರೊಚ್ಚಿಗೆದ್ದ ಕಾರ್ಯಕರ್ತರು ತಮ್ಮ ರಾಜ್ಯ ಮಟ್ಟದ ನಾಯಕನ್ನೇ ಓಡಾಡಿಸಿಕೊಂಡು ಹೊಡೆದಿದ್ದಾರೆ.

ಘಟನೆ ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದಿದ್ದು, ಸೋಲಿನಿಂದ ಕುಪಿತರಾಗಿದ್ದ ಬಿಎಸ್‌ಪಿ ಕಾರ್ಯಕರ್ತರು ತಮ್ಮ ಪಕ್ಷದ ಮಹಾರಾಷ್ಟ್ರ ರಾಜ್ಯ ಕಾರ್ಯದರ್ಶಿ ಸಂದೀಪ್ ತಾಜ್ನೆ ಅವರನ್ನು ಥಳಿಸಿದ್ದಾರೆ. ಸಂದೀಪ್ ಹಾಗೋ ಹೀಗೋ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಗಲಾಟೆಯ ವಿಡಿಯೋ ಇದೀಗ ವೈರಲ್ ಆಗಿದೆ.

ಸಂದೀಪ್ ತಾಜ್ನೆ ಅವರು ಚುನಾವಣೆ ಸಮಯದಲ್ಲಿ ನಡೆದಿದ್ದ ಸಮಾವೇಶದಲ್ಲಿ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು, ಅಂತಹ ಪ್ರಮುಖ ಮುಖಂಡನ ವಿರುದ್ಧವೇ ಕಾರ್ಯಕರ್ತರು ಕ್ರೋದಾಗ್ನಿ ಪ್ರದರ್ಶಿಸಿದ್ದಾರೆ.

BSP party workers attack state party chief in Maharashtra

ಘಟನೆಯ ವಿಡಿಯೋ ಒಂದು ಹರಿದಾಡುತ್ತಿದ್ದು, ಕಾರ್ಯಕರ್ತರು ಮೊದಲಿಗೆ ಸಿಟ್ಟಿನಿಂದ ಮಾತನಾಡಿ ಆ ನಂತರ ಸಂದೀಪ್ ಅವರನ್ನು ಥಳಿಸಲು ಪ್ರಾರಂಭಿಸುತ್ತಾರೆ, ನಂತರ ಕುರ್ಚಿಗಳಿಂದ ಹೊಡೆಯುತ್ತಾರೆ, ಹಾಗೋ-ಹೀಗೋ ಸಂದೀಪ್ ಅವರು ಹರಿದ ಶರ್ಟ್‌ನಲ್ಲಿಯೇ ಜಾಗ ಬಿಟ್ಟು ಪಲಾಯನ ಮಾಡುತ್ತಾರೆ.

2020ರ ಹೊತ್ತಿಗೆ ಎಸ್ಪಿ, ಬಿಎಸ್ಪಿ, ಆರ್ ಜೆಡಿ ನಿರ್ನಾಮ: ಪಾಸ್ವಾನ್ 2020ರ ಹೊತ್ತಿಗೆ ಎಸ್ಪಿ, ಬಿಎಸ್ಪಿ, ಆರ್ ಜೆಡಿ ನಿರ್ನಾಮ: ಪಾಸ್ವಾನ್

ಮಹಾರಾಷ್ಟ್ರದಲ್ಲಿ ಬಿಎಸ್‌ಪಿಯ ಪ್ರದರ್ಶನ ತೀವ್ರ ಕುಸಿತವಾಗಿದ್ದು, ಕಳೆದ ಬಾರಿಗಿಂತಲೂ ಅತ್ಯಂತ ಕಡಿಮೆ ಮತ ಈ ಬಾರಿ ಬಿಎಸ್‌ಪಿಗೆ ಬಂದಿದೆ. ಹಾಗಾಗಿ ಕಾರ್ಯಕರ್ತರು ಇದಕ್ಕೆ ಮುಖಂಡರೇ ಕಾರಣ ಎಂದು ದೂರಿದ್ದಾರೆ.

English summary
BSP party workers hit their party state general secretory in a meeting held today in Maharashtra's Amaravathi. BSP leader Sandeep Tajne manage to escape from their.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X