ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾ. ಅಂಬೇಡ್ಕರ್ ಮನೆಗೆ ಕೆಲ್ಲೆಸೆತ, ಎಫ್ಐಆರ್ ದಾಖಲು

|
Google Oneindia Kannada News

ಮುಂಬೈ, ಜುಲೈ 8: ಬಾಬಾಸಾಹೇಬ್ ಡಾ. ಬಿ. ಆರ್ ಅಂಬೇಡ್ಕರ್ ಅವರ ಮನೆ ''ರಾಜ್ ಗೃಹ'' ಕ್ಕೆ ಕೆಲ್ಲೆಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ಎಫ್ಐಆರ್ ಹಾಕಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

Recommended Video

INDO-CHINA : We stand with India : Mark Meadows | USA | Oneindia Kannada

ಮಂಗಳವಾರ ಸಂಜೆ ನಡೆದ ಈ ಕೃತ್ಯವನ್ನು ಖಂಡಿಸಿ, ಅನೇಕ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿರುವ ವಿಷಯ ತಿಳಿದ ಪ್ರಕಾಶ್ ಅಂಬೇಡ್ಕರ್ ಅವರು ಸಮುದಾಯಕ್ಕೆ ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ.

ಅಷ್ಟೊಂದು ಅವಮಾನವಾಗದಿದ್ದರೆ ಅಂಬೇಡ್ಕರ್ ಹುಟ್ಟುತ್ತಿದ್ದರೆ?ಅಷ್ಟೊಂದು ಅವಮಾನವಾಗದಿದ್ದರೆ ಅಂಬೇಡ್ಕರ್ ಹುಟ್ಟುತ್ತಿದ್ದರೆ?

ಕೆಲ ದುಷ್ಕರ್ಮಿಗಳಿಂದ ಅಚಾತುರ್ಯ ನಡೆದಿದೆ. ಶಾಂತಿ, ಸಹನೆಯಿಂದ ಎಲ್ಲರೂ ಇರಬೇಕು ಎಂದು ಈ ಮೂಲಕ ಕೋರುತ್ತೇನೆ. ಘಟನೆ ಬಗ್ಗೆ ಗೃಹ ಸಚಿವ ಅನಿಲ್ ದೇಶ್ ಮುಖ್ ಬಗ್ಗೆ ಮಾತನಾಡಿದ್ದೇನೆ, ಸೂಕ್ತ ತನಿಖೆ ನಡೆಸುವ ಭರವಸೆ ನೀಡಿದ್ದಾರೆ ಎಂದಿದ್ದಾರೆ.

BR Ambedkar’s House in Mumbai Vandalised, FIR Registered

ಘಟನೆಯನ್ನು ಖಂಡಿರುವ ಗೃಹ ಸಚಿವ ಅನಿಲ್ ದೇಶ್ ಮುಖ್, ಈ ಬಗ್ಗೆ ತನಿಖೆ ಆರಂಭಗೊಂಡಿದ್ದು, ಎಫ್ ಐಆರ್ ಹಾಕಲಾಗಿದೆ ಎಂದಿದ್ದಾರೆ.

ವಂಚಿತ್ ಬಹುಜನ್ ಅಘಾಡಿ ಅಧ್ಯಕ್ಷ, ಡಾ. ಅಂಬೇಡ್ಕರ್ ಅವರ ಮೊಮ್ಮಗ ಸುಜಾತ್ ಅವರು ದಿ ಕ್ವಿಂಟ್ ಜೊತೆ ಮಾತನಾಡಿ, ಬಾಬಾಸಾಹೇಬ್ ಅವರ ಕುಟುಂಬ ಮನೆಯಲ್ಲಿದ್ದಾಗ ಈ ಘಟನೆ ನಡೆದಿದೆ. ಅನಾಮಿಕ ವ್ಯಕ್ತಿಗಳು ಏಕಾಏಕಿ ಎರಡು ರೂಮ್ ಗಳ ಮೇಲೆ ಕಲ್ಲೆಸೆದಿದ್ದಾರೆ. ಮ್ಯೂಸಿಯಂ ಹಾಗೂ ಫೋಟೋ ಗ್ಯಾಲರಿ, ಬಾಬಾಸಾಹೇಬ್ ಪುಸ್ತಕ ಇನ್ನಿತರ ಅಮೂಲ್ಯ ವಸ್ತುಗಳಿದ್ದ ರೂಮ್ ಹಾಗೂ ಇನ್ನೊಂದು ಪಕ್ಷದ ಕಚೇರಿ, ಮೀಟಿಂಗ್ ರೂಮ್ ಮೇಲೆ ಕಲ್ಲು ಎಸೆಯಲಾಗಿದೆ ಎಂದು ಹೇಳಿದ್ದಾರೆ.

English summary
A day after Dr BR Ambedkar’s house, known as ‘Rajgruha’, was attacked by unidentified persons, an FIR was registered by the Mumbai Police on Wednesday, 8 July, news agency PTI reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X