ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ -ಶಿವಾಜಿ ಹೋಲಿಕೆ: ವಿವಾದ ಸೃಷ್ಟಿಸಿದ ಹೊಸ ಪುಸ್ತಕ

|
Google Oneindia Kannada News

Recommended Video

ವಿವಾದ ಸೃಷ್ಟಿಸಿದ ಮೋದಿ -ಶಿವಾಜಿ ಹೊಸ ಪುಸ್ತಕ | MODI | SHIVAJI | ONEINDIA KANNADA

ಮುಂಬೈ, ಜನವರಿ 13: ಪ್ರಧಾನಿ ನರೇಂದ್ರ ಮೋದಿ ಅವರನ್ನು ಛತ್ರಪತಿ ಶಿವಾಜಿ ಅವರಿಗೆ ಹೋಲಿಸುವ ಹೊಸ ಪುಸ್ತಕವೊಂದು ಭಾರಿ ವಿವಾದ ಸೃಷ್ಟಿಸಿದೆ.

ಬಿಜೆಪಿ ನಾಯಕ ಜೇ ಭಗವಾನ್ ಗೋಯಲ್ ಬರೆದಿರುವ 'ನರೇಂದ್ರ ಮೋದಿ- ಇಂದಿನ ಶಿವಾಜಿ' ಎಂಬ ಶೀರ್ಷಿಕೆಯ ಪುಸ್ತಕವನ್ನು ದೆಹಲಿಯ ಬಿಜೆಪಿ ಕಚೇರಿಯಲ್ಲಿ ಭಾನುವಾರ ಬಿಡುಗಡೆ ಮಾಡಲಾಗಿದೆ. ಈ ಪುಸ್ತಕ ತೀವ್ರ ಚರ್ಚೆಗೆ ಒಳಗಾಗಿದೆ.

ಶಿವಾಜಿ ಭಾವಚಿತ್ರಕ್ಕೆ ಅವಮಾನಿಸಿದ ಯುವಕರಿಗೆ ಥಳಿತಶಿವಾಜಿ ಭಾವಚಿತ್ರಕ್ಕೆ ಅವಮಾನಿಸಿದ ಯುವಕರಿಗೆ ಥಳಿತ

ಈ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಮತ್ತು ಸಂಸದ ಮನೋಜ್ ತಿವಾರಿ, ರಾಷ್ಟ್ರೀಯ ಉಪಾಧ್ಯಕ್ಷ ಶ್ಯಾಮ್ ಜಾಜು ಮತ್ತು ಮಾಜಿ ಸಂಸದ ಮಹೇಶ್ ಗಿರಿ ಉಪಸ್ಥಿತರಿದ್ದರು.

ಪುಸ್ತಕದ ಕುರಿತು ಗೋಯಲ್ ಅಂತರ್ಜಾಲದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಅದರ ಬೆನ್ನಲ್ಲೇ ಟ್ವಿಟ್ಟರ್‌ನಲ್ಲಿ ಬಿಜೆಪಿ ವಿರುದ್ಧದ ಪೋಸ್ಟ್‌ಗಳು ಹರಿದುಬಂದಿದೆ. ಈ ಪುಸ್ತಕವನ್ನು ನಿಷೇಧಿಸಬೇಕು ಎಂದು ಒತ್ತಾಯಿಸಲಾಗಿದೆ.

ಬಿಜೆಪಿ ಕ್ಷಮೆಯಾಚಿಸಲಿ

ಬಿಜೆಪಿ ಕ್ಷಮೆಯಾಚಿಸಲಿ

ಮೋದಿ ಮತ್ತು ಛತ್ರಪತಿ ಶಿವಾಜಿಯ ಹೋಲಿಕೆ ವಿರುದ್ಧ ಮಹಾರಾಷ್ಟ್ರದ ಆಡಳಿತಾರೂಢ ಮಹಾ ವಿಕಾಸ್ ಅಘಾದಿ (ಎಂವಿಎ) ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಪಟ್ಟುಹಿಡಿದಿರುವ ಮುಖಂಡರು, ಮಹಾರಾಷ್ಟ್ರ ಬಿಜೆಪಿ ನಾಯಕರ ಜತೆ ಈ ವಿಚಾರದ ಕುರಿತು ಚರ್ಚಿಸುವಂತೆ ಒತ್ತಾಯಿಸಿದ್ದಾರೆ.

ಮತ್ತೊಬ್ಬ ಶಿವಾಜಿ ಸಾಧ್ಯವಿಲ್ಲ

ಮತ್ತೊಬ್ಬ ಶಿವಾಜಿ ಸಾಧ್ಯವಿಲ್ಲ

'ಮಾತಾಡಿ, ಛತ್ರಪತಿ ಶಿವಾಜಿಯ ವಂಶಸ್ಥರೇ ದಯವಿಟ್ಟು ಮಾತಾಡಿ' ಎಂದು ರಾಜ್ಯಸಭಾ ಸಂಸದ ಉದ್ಯಾನ್ ರಾಜೆ ಟ್ವೀಟ್ ಮಾಡಿದ್ದಾರೆ.

ಶಿವಾಜಿ ಆಶೀರ್ವಾದ ಪಡೆದು ಮೊಘಲರ ಮಣಿಸಿದ್ದ ಮಹಾರಾಜ ಛತ್ರಸಾಲಶಿವಾಜಿ ಆಶೀರ್ವಾದ ಪಡೆದು ಮೊಘಲರ ಮಣಿಸಿದ್ದ ಮಹಾರಾಜ ಛತ್ರಸಾಲ

'ಮತ್ತೊಬ್ಬ ಛತ್ರಪತಿ ಶಿವಾಜಿ ಇರಲು ಸಾಧ್ಯವೇ ಇಲ್ಲ. ಇದನ್ನು ಒಪ್ಪಿಕೊಳ್ಳಲು ಆಗುವುದಿಲ್ಲ' ಎಂದು ವಸತಿ ಸಚಿವ ಮತ್ತು ಎನ್‌ಸಿಪಿ ನಾಯಕ ಜಿತೇಂದ್ರ ಅವ್ಹಾದ್ ಹೇಳಿದ್ದಾರೆ.

ಶಿವಾಜಿ ವಂಶಸ್ಥರು ಬಿಜೆಪಿ ಬಿಡಲಿ

ಶಿವಾಜಿ ವಂಶಸ್ಥರು ಬಿಜೆಪಿ ಬಿಡಲಿ

'ಮೋದಿ ಅವರನ್ನು ಶಿವಾಜಿಗೆ ಸೋಲಿಸಿದ್ದನ್ನು ತಾವು ಇಷ್ಟಪಡುತ್ತೇವೆಯೇ ಎಂಬುದನ್ನು ಛತ್ರಪತಿ ಶಿವಾಜಿಯ ವಂಶದವರು ಹೇಳಬೇಕು. ಪುಸ್ತಕದ ಹಿನ್ನೆಲೆಯಲ್ಲಿ ಛತ್ರಪತಿ ಶಿವಾಜಿ ವಂಶಸ್ಥರು ಬಿಜೆಪಿಯನ್ನು ತೊರೆಯಬೇಕು. ಈ ಕೃತಿ ಮಹಾರಾಷ್ಟ್ರ ಮತ್ತು ಮರಾಠಿ ಜನರ ನಿಂದನೆಯಾಗಿದೆ' ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ಆರೋಪಿಸಿದ್ದಾರೆ.

ಪುಸ್ತಕ ನಿಷೇಧಕ್ಕೆ ಬಿಜೆಪಿ ಸಂಸದ ಆಗ್ರಹ

ಪುಸ್ತಕ ನಿಷೇಧಕ್ಕೆ ಬಿಜೆಪಿ ಸಂಸದ ಆಗ್ರಹ

ಶಿವಾಜಿ ವಂಶಸ್ಥರಾಗಿರುವ ರಾಜ್ಯಸಭೆ ಸಂಸದ ಸಂಭಾಜಿ ರಾಜೆ, ಈ ಪುಸ್ತಕವನ್ನು ಕೂಡಲೇ ನಿಷೇಧಿಸುವಂತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಆಗ್ರಹಿಸಿದ್ದಾರೆ.

ಮೋದಿ ಅವರನ್ನು ಶಿವಾಜಿಗೆ ಹೋಲಿಸುವ ಈ ಪುಸ್ತಕಕ್ಕೂ ತಮಗೂ ಸಂಬಂಧವೇ ಇಲ್ಲ ಎಂದು ಬಿಜೆಪಿ ಪ್ರತಿಪಾದಿಸುತ್ತದೆಯೇ? ಎಂದು ಸಂಜಯ್ ರಾವತ್ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

English summary
A book titled 'Aaj Ke Shivaji: Narendra Modii' by BJP leader Jay Bhagwan Goyal sparks controversy as he compared Modi with Chhatrapati Shivaji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X