ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೀಮಾ ಕೋರೆಗಾಂವ್ ಪ್ರಕರಣ: ಸುಧಾ ಭಾರದ್ವಾಜ್‌ಗೆ ಜಾಮೀನು

|
Google Oneindia Kannada News

ಮುಂಬೈ, ಡಿಸೆಂಬರ್ 01: ನ್ಯಾಯಮೂರ್ತಿಗಳಾದ ಎಸ್‌ ಎಸ್ ಶಿಂಧೆ ಮತ್ತು ಎನ್‌ ಜೆ ಜಾಮ್‌ದಾರ್‌ ಅವರಿದ್ದ ಪೀಠ, ಸುಧಾ ಅವರಿಗೆ ಮಾತ್ರ ಜಾಮೀನು ಮಂಜೂರು ಮಾಡಿದೆ. ಪುಣೆಯ ಸೆಷನ್ಸ್ ನ್ಯಾಯಾಧೀಶರಾದ ಕೆ ಡಿ ವದನೆ ಮತ್ತು ಆರ್ ಎಂ ಪಾಂಡೆ ಅವರು ಪ್ರಕರಣದಲ್ಲಿ ಆದೇಶಗಳನ್ನು ಹೊರಡಿಸಲು ಯಾವುದೇ ಅಧಿಕಾರ ವ್ಯಾಪ್ತಿ ಹೊಂದಿಲ್ಲ ಎಂಬ ಕಾರಣಕ್ಕಾಗಿ ಅಪರಾಧ ಪ್ರಕ್ರಿಯಾ ಸಂಹಿತೆಯಡಿಯಲ್ಲಿ ಸುಧಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ನ್ಯಾಯಾಲಯ ಜಾಮೀನು ನೀಡಿತು. ಆರೋಪಪಟ್ಟಿಯನ್ನು ಪರಿಗಣಿಸಿ ಸಿಆರ್‌ಪಿಸಿ ಸೆಕ್ಷನ್ 167 (2)ರ ಅಡಿ ಡಿಫಾಲ್ಟ್ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು.

ಆಗಸ್ಟ್ 2018ರಿಂದ ಸುಧಾ ಜೈಲಿನಲ್ಲಿದ್ದು ಅವರನ್ನು ದೆಹಲಿಯಲ್ಲಿ ಬಂಧಿಸಿ ಮುಂಬೈಗೆ ಕರೆದೊಯ್ಯಲಾಗಿತ್ತು. ಛತ್ತೀಸ್‌ಗಢದಲ್ಲಿ ಬುಡಕಟ್ಟು ಸಮುದಾಯ ಹಾಗೂ ಇತರರ ಹಕ್ಕುಗಳಿಗಾಗಿ ಕೆಲಸ ಮಾಡಿದ ಸುಧಾ ಅವರು ತಮ್ಮ ಬಂಧನ ನಡೆದಾಗ ದೆಹಲಿಯ ಪ್ರತಿಷ್ಠಿತ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಬೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಸುಧಾ ಅವರ ಬಂಧನಕ್ಕೂ ಮುನ್ನ ಈ ಪ್ರಕರಣದಲ್ಲಿ ಆಂಧ್ರದ ಕ್ರಾಂತಿಕಾರಿ ಕವಿ ವರವರ ರಾವ್, ನಾಗರೀಕ ಹಕ್ಕುಗಳ ಹೋರಾಟಗಾರ್ತಿ ಸುಧಾ ಭಾರದ್ವಾಜ್, ಲೇಖಕ ಆನಂದ ತೆಲ್ತುಂಬ್ಡೆ, ಮಾನವ ಹಕ್ಕು ಕಾರ್ಯಕರ್ತ ಅರುಣ್, ಪತ್ರಕರ್ತ ಗೌತಮ್, ಮಾನವ ಹಕ್ಕುಗಳ ಕಾರ್ಯಕರ್ತೆ ಸುಸಾನ್ ಅಬ್ರಹಾಂ, ಸಾಮಾಜಿಕ ಹೋರಾಟಗಾರ ಗೊನ್ಸಾಲ್ವಿಸ್ ಅವರುಗಳನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದರು.

Bombay High Court Grants Default Bail To Sudha Bharadwaj In Bhima Koregaon Case

ಜನವರಿ 1, 1818 ರಂದು ದಲಿತರು ಮತ್ತು ಮರಾಠರ ನಡುವೆ ನಡೆದ ಗಲಭೆಯೇ ಭೀಮಾ ಕೊರೆಗಾಂವ್ ಗಲಭೆ. ಕೊರೆಗಾಂವ್ ಎಂಬ ಹಳ್ಳಿ ಭೀಮಾ ನದಿ ತೀರದಲ್ಲಿದೆ. ಈ ಪ್ರದೇಶದಲ್ಲಿ ಯುದ್ಧ ನಡೆದಿದ್ದರಿಂದ ಅದಕ್ಕೆ ಭೀಮಾ ಕೊರೆಗಾಂವ್ ಎಂಬ ಹೆಸರು. ಇದರ 200 ವರ್ಷಾಚರಣೆ ಡಿಸೆಂಬರ್(2017) -ಜನವರಿಯಲ್ಲಿ ನಡೆದಿತ್ತು. ಈ ಸಂದರ್ಭದಲ್ಲಿ ಮರಾಠರ ವಿರುದ್ಧ ಯುದ್ಧ ಗೆದ್ದ ದಿನವನ್ನು, 'ವಿಜಯ ದಿವಸ' ಎಂಬ ಹೆಸರಿನಲ್ಲಿ ದಲಿತರು ಆಚರಿಸುತ್ತಿದ್ದರು. ಆದರೆ ಆಚರಣೆಯ ಸಂದರ್ಭ ದಲ್ಲಿ ಇದ್ದಕ್ಕಿದ್ದಂತೆ ಘರ್ಷಣೆ ಉಂಟಾಗಿ, ದಲಿತ ಯುವಕನೋರ್ವ ಮೃತಪಟ್ಟಿದ್ದ. ಇದರಿಂದ ಈ ಘರ್ಷಣೆ ಉಗ್ರರೂಪ ಪಡೆದು, ಸಾಕಷ್ಟು ಜನರಿಗೆ ಗಾಯವಾಗಿತ್ತು. ನಂತರ ಮಹಾರಾಷ್ಟ್ರ ಬಂದ್ ಸಹ ಆಚರಿಸಲಾಗಿತ್ತು.

ಮಾವೋವಾದಿ ಜತೆ ನಂಟು ಶಂಕೆ, ಹಲವು ವಿಚಾರವಾದಿಗಳ ಬಂಧನ, ಆಕ್ರೋಶಮಾವೋವಾದಿ ಜತೆ ನಂಟು ಶಂಕೆ, ಹಲವು ವಿಚಾರವಾದಿಗಳ ಬಂಧನ, ಆಕ್ರೋಶ


ಮಾವೋ ಸಿದ್ಧಾಂತಗಳ ಅನುಯಾಯಿಗಳಾದ ಕೆಲವು ವಿಚಾರವಾದಿಗಳ ಕೈವಾಡವೂ ಈ ಗಲೆಭೆಯಲ್ಲಿದೆ ಎಂಬ ಮಾಹಿತಿ ಮಹಾರಾಷ್ಟ್ರ ಪೊಲಿಸರಿಗೆ ಲಭ್ಯವಾದ ಪರಿಣಾಮ UAPA(Unlawful Activities Prevention Act) ಕಾಯ್ದೆಯ ಅಡಿಯಲ್ಲಿ ಅವರನ್ನು ಬಂಧಿಸಲಾಗಿತ್ತು. ಈ ಕಾಯ್ದೆಯ ಪ್ರಕಾರ ಯಾವುದೇ ವಾರೆಂಟ್ ನ ಅಗತ್ಯವಿಲ್ಲದೆ ವ್ಯಕ್ತಿಯ ಮನೆಯಲ್ಲಿ ತನಿಖೆ ನಡೆಸಬಹುದು. ಈ ಕಾಯ್ದೆಯಡಿಯಲ್ಲೇ ದೂರು ದಾಖಲಿಸಿ ವಿಚಾರವಾದಿಗಳ ಮನೆಯಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿರುವ ಮಾಹಿತಿಗಳನ್ನೊಳಗೊಂಡ ಎರಡು ಪತ್ರಗಳು ಪೊಲೀಸರಿಗೆ ಲಭಿಸಿತ್ತು. ಈ ಪತ್ರದಲ್ಲಿ, ಮಾವೋವಾದಿಗಳೇ ರಾಜೀವ್ ಗಾಂಧಿ ಹತ್ಯೆಯ ಮಾದರಿಯಲ್ಲಿಯೇ ಮೋದಿ ಹತ್ಯೆಗೂ ಸಂಚು ರೂಪಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಆದ್ದರಿಂದ ಮಾವೋ ಸಿದ್ಧಾಂತವನ್ನು ಅನುಸರಿಸುವವರ ಮೇಲೆ ಒಂದು ಕಣ್ಣಿಡಲು ಪೊಲೀಸರು ಚಿಂತಿಸಿದ್ದರು.

Bhima Koregaon Case

ಹೈದರಾಬಾದ್, ಮುಂಬೈ, ಫರಿದಾಬಾದ್, ದೆಹಲಿ ಸೇರಿದಂತೆ ಹಲವು ನಗರಗಳಲ್ಲಿ ಏಕಕಾಲದಲ್ಲಿ ಪೊಲಿಸರು ದಾಳಿ ನಡೆಸಿದ್ದಾರೆ. ಆದರೆ ವಿಚಾರವಾದಿಗಳ ಬಂಧನವನ್ನು ಹಲವರು ಕಟು ಶಬ್ದಗಳಿಂದ ಟೀಕಿಸಿದ್ದು, ಭಾರತದಲ್ಲಿ ಇದೀಗ ತುರ್ತುಪರಿಸ್ಥಿತಿ ಘೋಷಣೆಯಾಗಿದೆ ಎಂದು ಲೇವಡಿ ಮಾಡಿದ್ದಾರೆ. ಬಂಧನಕ್ಕೆ ಸಂಬಂಧಿಸಿದ ವಿಚಾರಣೆ ನ್ಯಾಯಾಲಯದಲ್ಲಿ ಇನ್ನೂ ಮುಂದುವರೆದಿದೆ.

2018ರ ಜನವರಿ 1ರಂದು ಭೀಮಾ-ಕೋರೆಗಾಂವ್‌ ಯುದ್ಧದ 200ನೇ ವರ್ಷದ ವಿಜಯೋತ್ಸವದ ವೇಳೆ ನಡೆದ ಹಿಂಸಾಚಾರದಲ್ಲಿ ಒಬ್ಬ ಮೃತಪಟ್ಟು, 30 ಪೊಲೀಸರು ಗಾಯಗೊಂಡಿದ್ದ ಘಟನೆ ಸಂಬಂಧಿಸಿದಂತೆ ಆರೋಪದ ಮೇಲೆ ಹನಿ ಬಾಬು, ಸಾಮಾಜಿಕ ಕಾರ್ಯಕರ್ತ ಗೌತಮ್ ನವಲಖಾ, ಮಾನವ ಹಕ್ಕುಗಳ ಹೋರಾಟಗಾರ ಫಾದರ್ ಸ್ಟ್ಯಾನ್ ಸ್ವಾಮಿ, ಗೋವಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಪ್ರಾಧ್ಯಾಪಕ ಆನಂದ್ ತೇಲ್ತುಂಬ್ಡೆ, ಜ್ಯೋತಿ ಜಗ್ತಾಪ್, ಸಾಗರ್ ಗೋರ್ಖೆ ಮತ್ತು ರಮೇಶ್ ಗೈಚೋರ್ ಅವರ ವಿರುದ್ಧ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಮಾವೋವಾದಿ ಚಟುವಟಿಕೆಗಳನ್ನ ನಡೆಸಲು ಮಾವೋವಾದಿ ಕಾರ್ಯಕರ್ತರ ಪಡೆ ಹಾಗೂ ಬೆಂಬಲಿಗರ ಮಧ್ಯೆ ಇರುವ ಹಣಕಾಸು ವ್ಯವಸ್ಥೆ ಕೂಡ ಅನಾವರಣಗೊಂಡಿದೆ" ಎಂದು ತನ್ನ ಚಾರ್ಜ್​ಶೀಟ್​ನಲ್ಲಿ ಎನ್​ಐಎ ಆರೋಪಿಸಿದೆ.

English summary
Bhima Koregaon Case: Bombay High Court today granted Default Bail To Activist Sudha Bharadwaj.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X