• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟಿಆರ್‌ಪಿ ಹಗರಣ: ಅರ್ನಬ್ ಗೋಸ್ವಾಮಿ ಮಧ್ಯಂತರ ರಕ್ಷಣೆ ವಿಸ್ತರಣೆ

|
Google Oneindia Kannada News

ಮುಂಬೈ, ಫೆಬ್ರವರಿ 12: ಟಿಆರ್‌ಪಿ ಹಗರಣದ ವಿಚಾರಣೆ ನಡೆಸುತ್ತಿರುವ ಬಾಂಬೆ ಹೈಕೋರ್ಟ್, ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಮತ್ತು ಎಆರ್‌ಜಿ ಓಟ್ಲಿಯರ್ ಮೀಡಿಯಾದ ಇತರೆ ಉದ್ಯೋಗಿಗಳಿಗೆ ಬಂಧನದಿಂದ ನೀಡಿರುವ ಮಧ್ಯಂತರ ರಕ್ಷಣೆಯನ್ನು ಮಾರ್ಚ್ 5ರವರೆಗೂ ವಿಸ್ತರಿಸಿದೆ.

ಟಿಆರ್‌ಪಿ ಹಗರಣ ಪ್ರಕರಣದಲ್ಲಿ ಮುಂಬೈ ಪೊಲೀಸರ ತನಿಖೆಯನ್ನು ಪ್ರಶ್ನಿಸಿ ಎಆರ್‌ಜಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮುಂದೂಡಿದ ಸಂದರ್ಭದಲ್ಲಿ ಅರ್ನಬ್ ಹಾಗೂ ಇತರೆ ಉದ್ಯೋಗಿಗಳಿಗೆ ನೀಡಿದ್ದ ಮಧ್ಯಂತರ ರಕ್ಷಣೆಯನ್ನು ವಿಸ್ತರಿಸಿದ್ದಾರೆ.

ಅರ್ನಬ್ ಗೋಸ್ವಾಮಿ ವಿರುದ್ಧ ಡಿಸಿಪಿಯಿಂದ ಮಾನಹಾನಿ ದೂರುಅರ್ನಬ್ ಗೋಸ್ವಾಮಿ ವಿರುದ್ಧ ಡಿಸಿಪಿಯಿಂದ ಮಾನಹಾನಿ ದೂರು

ಪೊಲೀಸರ ಆರೋಪಪಟ್ಟಿಗೆ ಪ್ರತಿಯಾಗಿ ಕಳೆದ ವಾರ ಸಲ್ಲಿಸಿದ್ದ ತನ್ನ ಪ್ರತಿವಾದಿ ಅಫಿಡವಿಟ್‌ನಲ್ಲಿ ಎಆರ್‌ಜಿ ಮೀಡಿಯಾ, ತನ್ನ ಅರ್ಜಿಯ ಭಾಗವಾಗಿರದ ಕೆಲವು ಹೊಸ ದಾಖಲೆಗಳನ್ನು ಒದಗಿಸಿತ್ತು ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ತಿಳಿಸಿದ್ದಾರೆ.

ಎಆರ್‌ಜಿ ಸಲ್ಲಿಸಿರುವ ಹೊಸ ದಾಖಲೆಗಳನ್ನು ಪರಿಶೀಲಿಸಲು ತಮಗೆ ಸಮಯಾವಕಾಶದ ಅಗತ್ಯವಿದೆ. ತಮ್ಮ ದಿನದ ವಾದದಲ್ಲಿ ಎಆರ್‌ಜಿ ಪರ ವಕೀಲರಾದ ಹರೀಶ್ ಸಾಳ್ವೆ ಅವರು ಈ ದಾಖಲೆಗಳನ್ನು ಅವಲಂಬಿಸಬಾರದು ಎಂದು ಸಿಬಲ್ ಹೇಳಿದ್ದರು. ಆದರೆ ಈ ದಾಖಲೆಗಳನ್ನೇ ತಾವು ಆಧಾರವಾಗಿಟ್ಟುಕೊಳ್ಳುವುದಾಗಿ ಸಾಳ್ವೆ ವಾದಿಸಿದ್ದರು.

ಅರ್ನಬ್ ಗೋಸ್ವಾಮಿ ವಿರುದ್ಧ ಡಿಸಿಪಿಯಿಂದ ಮಾನಹಾನಿ ದೂರುಅರ್ನಬ್ ಗೋಸ್ವಾಮಿ ವಿರುದ್ಧ ಡಿಸಿಪಿಯಿಂದ ಮಾನಹಾನಿ ದೂರು

ಸಿಬಲ್ ಅವರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಅರ್ನಬ್ ಮತ್ತು ಇತರರಿಗೆ ನೀಡಿದ ಮಧ್ಯಂತರ ನೆಮ್ಮದಿಯನ್ನು ಮುಂದಿನ ದಿನಾಂಕದವರೆಗೂ ವಿಸ್ತರಿಸಿ ಆದೇಶಿಸಿತು.

English summary
Bombay High Court extended interim relief to Arnab Goswami and other employees of ARG Media till March 5 in TRP scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X