ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರಾಠಿಗರಿಗೆ ಮೀಸಲಾತಿಗೆ ಕೋರ್ಟ್ ಸಮ್ಮತಿ; 13 ಪರ್ಸೆಂಟ್ ಗೆ ಇಳಿಸಲು ಸೂಚನೆ

|
Google Oneindia Kannada News

ಮುಂಬೈ, ಜೂನ್ 27: ಸರಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮರಾಠಿಗರಿಗೆ ಮೀಸಲಾತಿ ಸಾಂವಿಧಾನಿಕ ಮಾನ್ಯತೆ ನೀಡುವ ವಿಚಾರವನ್ನು ಬಾಂಬೆ ಹೈ ಕೋರ್ಟ್ ಗುರುವಾರ ಎತ್ತಿ ಹಿಡಿದಿದೆ. ನ್ಯಾಯಮೂರ್ತಿಗಳಾದ ರಂಜಿತ್ ಮೋರೆ ಭಾರತಿ ಡಾಂಗ್ರೆ ಅವರ ವಿಭಾಗೀಯ ಪೀಠವು ಮೀಸಲಾತಿಯ ಪ್ರಮಾಣವನ್ನು 16 ಪರ್ಸೆಂಟ್ ನಿಂದ 12 ಅಥವಾ 13 ಪರ್ಸೆಂಟ್ ಗೆ ಇಳಿಸುವಂತೆ ಹೇಳಿದೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸಿನಂತೆ ಮೀಸಲಾತಿ ಜಾರಿಗೆ ತರುವಂತೆ ಸೂಚಿಸಿದೆ. ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗದವರಿಗೆ ರಾಜ್ಯ ಸರಕಾರವು ಮೀಸಲಾತಿ ಒದಗಿಸುವುದನ್ನು ನಾವು ಒಪ್ಪುತ್ತೇವೆ ಹಾಗೂ ಆ ನಿರ್ಧಾರ ಎತ್ತಿ ಹಿಡಿಯುತ್ತೇವೆ. ಆದರೆ 16 ಪರ್ಸೆಂಟ್ ಬದಲಿಗೆ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸಿನಂತೆ 12 ಅಥವಾ 13 ಪರ್ಸೆಂಟ್ ಗೆ ಇಳಿಸಬೇಕು ಎಂದು ಕೋರ್ಟ್ ತಿಳಿಸಿದೆ.

ಮರಾಠರ ನಂತರ ಬ್ರಾಹ್ಮಣರಿಂದ ಮೀಸಲಾತಿಗಾಗಿ ಪಟ್ಟುಮರಾಠರ ನಂತರ ಬ್ರಾಹ್ಮಣರಿಂದ ಮೀಸಲಾತಿಗಾಗಿ ಪಟ್ಟು

ಸರಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮರಾಠಿಗರಿಗೆ 16 ಪರ್ಸೆಂಟ್ ಮೀಸಲಾತಿ ನೀಡುವ ಮಹಾರಾಷ್ಟ್ರ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ, ಸಾಕಷ್ಟು ಅರ್ಜಿಗಳು ಬಂದಿದ್ದವು. ಮಹಾರಾಷ್ಟ್ರದಲ್ಲಿ ಈಗಾಗಲೇ 52 ಪರ್ಸೆಂಟ್ ನಷ್ಟು ಮೀಸಲಾತಿ ಇದ್ದು, 16 ಪರ್ಸೆಂಟ್ ಹೆಚ್ಚುವರಿಯಾಗಿ ಮರಾಠಿಗರಿಗೆ ಮೀಸಲಾತಿ ಸೇರಿ 68 ಪರ್ಸೆಂಟ್ ಗೆ ಏರಿಕೆ ಆಗಲಿದೆ.

Bombay high court agrees for Maratha quota in Maharashtra; but should be within 13 percent

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಯಾವುದೇ ರಾಜ್ಯದಲ್ಲಿ ಮೀಸಲಾತಿ ಪ್ರಮಾಣವು ಐವತ್ತು ಪರ್ಸೆಂಟ್ ಮೀರುವಂತಿಲ್ಲ. ಆದ್ದರಿಂದ ಈ ಆದೇಶವನ್ನು ಮಹಾರಾಷ್ಟ್ರ ಸರಕಾರ ಮೀರಿದೆ ಎಂದು ಕೋರ್ಟ್ ನಲ್ಲಿ ಪ್ರಶ್ನಿಸಲಾಗಿತ್ತು.

English summary
Bombay high court agrees for Maratha quota in jobs and education in Maharashtra on Thursday. But it should be within 12 to 13 percent, which was recommended by State backward commission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X