ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ಹಾಜಿ ಅಲಿ ದರ್ಗಾಕ್ಕೆ ಮಹಿಳೆಯರಿಗೂ ಪ್ರವೇಶ

|
Google Oneindia Kannada News

ಮುಂಬೈ, ಆಗಸ್ಟ್, 26: ಮುಂಬೈನ ಹಾಜಿ ಅಲಿ ದರ್ಗಾದ ಪವಿತ್ರ ಸ್ಥಳಕ್ಕೆ ಇನ್ನು ಮುಂದೆ ಎಲ್ಲರಿಗೂ ಮುಕ್ತ ಪ್ರವೇಶ. ಪ್ರವೇಶ ನೀಡುವ ಸಂಬಂಧ ಲಿಂಗ ತಾರತಮ್ಯದ ಪ್ರಶ್ನೆಯೇ ಇಲ್ಲ ಎಂದು ಬಾಂಬೆ ಹೈಕೋರ್ಟ್‌ ಶುಕ್ರವಾರ ಮಹತ್ವದ ಆದೇಶ ನೀಡಿದೆ.

ಮಹಿಳಾ ಸಂಘಟನೆಯೊಂದು ಪ್ರವೇಶ ನಿಷೇಧ ಪ್ರಶ್ನೆ ಮಾಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈ ಕೋರ್ಟ್ ಇಂಥ ಆದೇಶ ನೀಡಿದೆ. ಅಲ್ಲದೇ ದರ್ಗಾ ಪ್ರವೇಶಕ್ಕೆ ಅನುಮತಿ ಕೇಳಿದರವರಿಗೆ ಅಗತ್ಯ ಭದ್ರತೆ ನೀಡುವಂತೆಯೂ ತಿಳಿಸಿದೆ.[ಋತುಚಕ್ರ ಪತ್ತೆಹಚ್ಚಿ ಅಂದವನ ವಿರುದ್ಧ ಮಹಿಳೆಯರ ಸಮರ]

 Bombay HC permits women inside Haji Ali dargah

ಪ್ರವೇಶ ನಿಷೇಧ ಪ್ರಶ್ನೆ ಮಾಡಿ ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ ಸಂಘಟನೆ 2014 ರ ನವೆಂಬರ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಕೆ ಮಾಡಿತ್ತು.[ಶನೈಶ್ವರನಿಗೆ ಮಹಿಳೆಯಿಂದ ಪೂಜೆ]

ಬಾಂಬೆ ಹೈಕೋರ್ಟಿನ ವಿಭಾಗೀಯ ಪೀಠದ ನ್ಯಾಯಮೂರ್ತಿ ವಿ ಎಂ ಕಾನಡೆ ಮತ್ತು ರೇವತಿ ಮೋಹಿತೆ ಶುಕ್ರವಾರ ಆದೇಶ ನೀಡಿದ್ದಾರೆ. ಬಾಂಬೆ ಹೈಕೋರ್ಟಿನ ಈ ತೀರ್ಪನ್ನು ಸ್ವಾಗತಿಸಿರುವ ಭೂಮಾತಾ ಬ್ರಿಗೇಡ್‌ನ‌ ಮುಖ್ಯಸ್ಥೆ ತೃಪ್ತಿ ದೇಸಾಯಿ ಅವರು, "ಇದು ಮಹಿಳೆಯರ ಪಾಲಿಗೆ ಸಿಕ್ಕ ದೊಡ್ಡ ಜಯ" ಎಂದು ಹೇಳಿಕೆ ನೀಡಿದ್ದಾರೆ.

English summary
In a historic verdict, the Bombay High Court on Friday permitted the entry of women upto the restricted grave area of the famous Haji Ali dargah located off the Worli seashore. A division bench of Justice Justice V. M. Kanade and Justice Revati Mohite-Dhere stayed the judgement for six weeks to allow an appeal in the Supreme Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X