ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್-19 ನಿಂದ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ವಾಜಿದ್ ಖಾನ್ ನಿಧನ

|
Google Oneindia Kannada News

ಮುಂಬೈ, ಜೂನ್ 1: ಹೆಸರಾಂತ ಸಂಗೀತ ನಿರ್ದೇಶಕ, ನಿರ್ದೇಶಕ, ಗಾಯಕ ವಾಜಿದ್ ಖಾನ್ ಕೊನೆಯುಸಿರೆಳೆದಿದ್ದಾರೆ. 39 ವರ್ಷ ವಯಸ್ಸಿನ ವಾಜಿದ್ ಖಾನ್ ಭಾನುವಾರ ರಾತ್ರಿ ನಿಧನರಾಗಿದ್ದಾರೆ.

Recommended Video

ಬಾಲಿವುಡ್ ನ ಖ್ಯಾತ ಮ್ಯೂಸಿಕ್ ಕಂಪೋಸರ್ ವಾಜಿದ್ ಖಾನ್ ನಿಧನ | Wajid Khan Passed Away

ಕೆಲವೇ ಕೆಲವು ದಿನಗಳ ಹಿಂದೆಯಷ್ಟೇ ವಾಜಿದ್ ಖಾನ್ ಗೆ ನೋವೆಲ್ ಕೊರೊನಾ ವೈರಸ್ ಸೋಂಕು ತಗುಲಿತ್ತು. ಕಿಡ್ನಿ ಸಂಬಂಧಿ ಖಾಯಿಲೆಯಿಂದಲೂ ಬಳಲುತ್ತಿದ್ದ ವಾಜಿದ್ ಖಾನ್, ಕೆಲವೇ ತಿಂಗಳುಗಳ ಹಿಂದೆಯಷ್ಟೇ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಗೆ ಒಳಗಾಗಿದ್ದರು.

ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ನಿಧನಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ನಿಧನ

ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾದ ಕಾರಣ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಲ್ಲಿದ್ದ ವಾಜಿದ್ ಖಾನ್ ಭಾನುವಾರ ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ.

bollywood-music-director-wajid-khan-passes-away

1998 ರಲ್ಲಿ ಬಿಡುಗಡೆಗೊಂಡ ಸಲ್ಮಾನ್ ಖಾನ್ ಅಭಿನಯದ 'ಪ್ಯಾರ್ ಕಿಯಾ ತೋ ಡರ್ನಾ ಕ್ಯಾ' ಸಿನಿಮಾದ ಮೂಲಕ ವಾಜಿದ್ ಖಾನ್ ಬಾಲಿವುಡ್ ಪ್ರವೇಶಿಸಿದರು. 'ಚೋರಿ ಚೋರಿ', 'ಹಲೋ ಬ್ರದರ್', 'ಮುಜ್ಸೆ ಶಾದಿ ಕರೋಗಿ', 'ಪಾರ್ಟ್ನರ್', 'ವಾಂಟೆಡ್', 'ದಬಾಂಗ್' ಮುಂತಾದ ಚಲನಚಿತ್ರಗಳಿಗೆ ಸಹೋದರ ಸಾಜಿದ್ ಖಾನ್ ಜೊತೆಗೆ ಸೇರಿ ವಾಜಿದ್ ಖಾನ್ ಸಂಗೀತ ಸಂಯೋಜಿಸಿದ್ದರು.

ಸಾಜಿದ್-ವಾಜಿದ್ ಬ್ರದರ್ಸ್ ಕಾಂಬಿನೇಷನ್ ನಿಂದ ಬಾಲಿವುಡ್ ಗೆ ಹಲವು ಸೂಪರ್ ಹಿಟ್ ಹಾಡುಗಳು ಲಭಿಸಿವೆ.

2008 ರಲ್ಲಿ ಬಿಡುಗಡೆಯಾದ 'ಪಾರ್ಟ್ನರ್' ಚಿತ್ರದ ಮೂಲಕ ವಾಜಿದ್ ಖಾನ್ ಗಾಯಕರಾಗಿ ಗುರುತಿಸಿಕೊಂಡರು. 'ಹುಡ್ ಹುಡ್ ದಬಾಂಗ್', 'ಜಲ್ವಾ', 'ಚಿಂತಾ ತ..' ಮುಂತಾದ ಹಿಟ್ ಸಾಂಗ್ಸ್ ಗೆ ವಾಜಿದ್ ಖಾನ್ ದನಿಯಾಗಿದ್ದರು.

ವಾಜಿದ್ ಖಾನ್ ನಿಧನಕ್ಕೆ ಬಾಲಿವುಡ್ ಕಂಬನಿ ಮಿಡಿದಿದೆ. ವಾಜಿದ್ ಖಾನ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಪ್ರಿಯಾಂಕಾ ಛೋಪ್ರಾ ಟ್ವೀಟ್ ಮಾಡಿದ್ದಾರೆ.

English summary
Bollywood Music Director Wajid Khan passes away in Mumbai. He was 39.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X