• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಂಬೈ ಖಾಲಿ ಮಾಡಿದ ಕಂಗನಾ: ಶಿವಸೇನೆ, ಮಹಾ ಸರಕಾರದ ಮುಂದೆ ಮಂಡಿ ಊರಿದರೇ?

|

ಮುಂಬೈ, ಸೆ 14: ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ಭಾರೀ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್, ಕೊನೆಗೂ, ಉದ್ದವ್ ಠಾಕ್ರೆ ನೇತೃತ್ವದ ಸಮ್ಮಿಶ್ರ ಸರಕಾರದ ಮುಂದೆ ಮಂಡಿ ಊರಿದರೇ?

ಮುಂಬೈ ತೊರೆಯುತ್ತಿದ್ದೇನೆ ಎನ್ನುವ ಕಂಗನಾ ಅವರ ಟ್ವೀಟ್ ಈ ರೀತಿ ಸಂಶಯ ಪಡುವಂತೆ ಮಾಡಿದೆ. ಠಾಕ್ರೆ ಸರಕಾರಕ್ಕೆ ಠಕ್ಕರ್ ನೀಡುತ್ತಾ, ಎಲ್ಲಾ ರಹಸ್ಯಗಳನ್ನು ಬಯಲುಗೆಳೆಯುತ್ತೇನೆ ಎಂದು ಆರ್ಭಟಿಸಿದ್ದ ಕಂಗನಾ, ಅವರ ಮುಂಬೈ ತೊರೆಯುವ ನಿರ್ಧಾರ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಸಮ್ಮಿಶ್ರ ಸರಕಾರದ ಜೊತೆಗೆ, ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿಯವರ ವಿರುದ್ದವೂ ಕಿಡಿಕಾರಿದ್ದ ಕಂಗನಾ, "ಇತಿಹಾಸ ನಿಮ್ಮ ಮೌನವನ್ನು ನಿರ್ಣಯಿಸುತ್ತದೆ" ಎಂದು ಟ್ವೀಟ್ ಮಾಡಿದ್ದರು.

ಕಂಗನಾ ರಣಾವತ್ ಕಟ್ಟಡ ನೆಲಸಮ ಪ್ರಕರಣಕ್ಕೆ ಹೊಸ ಟ್ವಿಸ್ಟ್!

ಸೆಪ್ಟಂಬರ್ ಒಂಬತ್ತರಂದು ಭಾರೀ ಭದ್ರತೆಯೊಂದಿಗೆ ಮುಂಬೈಗೆ ಆಗಮಿಸಿದ್ದ ಕಂಗನಾ, ಕಳೆದ ಭಾನುವಾರ (ಸೆ 13) ಮಹಾರಾಷ್ಟ್ರದ ರಾಜ್ಯಪಾಲರಾದ ಭಗತ್ ಸಿಂಗ್ ಕೊಶ್ಯಾರಿಯವರನ್ನು ಭೇಟಿಯಾಗಿದ್ದರು. ಕಂಗನಾ ಮಾಡಿರುವ ಟ್ವೀಟ್ ಹೀಗಿದೆ..

ಕಂಗನಾ ರಣಾವತ್, ಸೋನಿಯಾ ಗಾಂಧಿಗೆ ಟ್ವೀಟ್

ಕಂಗನಾ ರಣಾವತ್, ಸೋನಿಯಾ ಗಾಂಧಿಗೆ ಟ್ವೀಟ್

"ಡಾ.ಅಂಬೇಡ್ಕರ್ ನಮಗೆ ನೀಡಿರುವ ಸಂವಿಧಾನದ ತತ್ವಗಳನ್ನು ಎತ್ತಿ ಹಿಡಿಯುವಂತೆ ಕೋರಲು, ನಿಮ್ಮ ಸರಕಾರಕ್ಕೆ ಸೂಚಿಸಲು ನಿಮಗೆ ಸಾಧ್ಯವಿಲ್ಲವೇ? ನೀವು ಪಶ್ಚಿಮದಲ್ಲಿ ಹುಟ್ಟಿ ಬೆಳೆದು ಭಾರತದಲ್ಲಿ ನೆಲೆಸಿದ್ದೀರಿ. ಮಹಿಳೆಯರು ಹೋರಾಟದ ಬಗ್ಗೆ ನಿಮಗೆ ಗೊತ್ತಿರಬಹುದು. ನಿಮ್ಮ ಸರಕಾರ ಮಹಿಳೆಗೆ ಕಿರುಕುಳ ನೀಡಿ, ವ್ಯವಸ್ಥೆಯನ್ನು ಅಪಹಾಸ್ಯ ಮಾಡುತ್ತಿದೆ. ನಿಮ್ಮ ಮೌನವನ್ನು ಇತಿಹಾಸ ನಿರ್ಣಯಿಸುತ್ತದೆ. ನೀವು ಈ ವಿಚಾರದಲ್ಲಿ ಮಧ್ಯಪ್ರವೇಶಿಸುತ್ತೀರಿ ಎಂದು ನಂಬಿದ್ದೇನೆ"ಎಂದು ಕಂಗನಾ ರಣಾವತ್, ಸೋನಿಯಾ ಗಾಂಧಿಗೆ ಟ್ವೀಟ್ ಮಾಡಿದ್ದರು.

ಭಾರವಾದ ಹೃದಯದಿಂದ ಮುಂಬೈ ತೊರೆಯುತ್ತಿದ್ದೇನೆ

ಕಂಗನಾ ಮಾಡಿರುವ ಟ್ವೀಟ್, "ಭಾರವಾದ ಹೃದಯದಿಂದ ಮುಂಬೈ ತೊರೆಯುತ್ತಿದ್ದೇನೆ. ನನ್ನ ಮೇಲೆ ನಿರಂತರ ದಾಳಿ ಮಾಡಲಾಗುತ್ತಿತ್ತು, ಉಗ್ರರಂತೆ ನನ್ನ ಮೇಲೆ ಬೆದರಿಕೆ ಹಾಕಲಾಗುತ್ತಿದೆ, ನಿಂದನೆ ಮಾಡಲಾಗುತ್ತಿದೆ. ನನ್ನ ಕಚೇರಿಯನ್ನು ಧ್ವಂಸ ಮಾಡಲಾಯಿತು ಮತ್ತು ನನ್ನ ಮನೆಯನ್ನೂ ಕೆಡವಲು ಪ್ರಯತ್ನಿಸಲಾಯಿತು" ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.

ಮುಂಬೈಗೆ ಬಂದಿಳಿಯುತ್ತಿದ್ದಂತೆಯೇ ಸಿಎಂ ಉದ್ಧವ್ ಠಾಕ್ರೆಗೆ ಕಂಗನಾ ಬಹಿರಂಗ ಸವಾಲು

ಪಾಕ್ ಆಕ್ರಮಿತ ಕಾಶ್ಮೀರದಂತೆ ಭಾಸವಾಗುತ್ತಿದೆ

ಪಾಕ್ ಆಕ್ರಮಿತ ಕಾಶ್ಮೀರದಂತೆ ಭಾಸವಾಗುತ್ತಿದೆ

"ನನ್ನ ಸುತ್ತ ಭದ್ರತೆ ಇರುವಂತೆ ಮಾಡಲಾಯಿತು. ಇವುಗಳೆಲ್ಲವನ್ನೂ ನೋಡಿದಾಗ ಮುಂಬೈ ನಗರ, ಪಾಕ್ ಆಕ್ರಮಿತ ಕಾಶ್ಮೀರದಂತೆ ಭಾಸವಾಗುತ್ತಿದೆ ಎಂದು ನಾನು ಹೇಳಿದ ಮಾತು ಸತ್ಯವಲ್ಲವೇ ಎನ್ನುವಷ್ಟು ಮತ್ತೆ ಸಾಬೀತಾಗುತ್ತಿದೆ, ನನ್ನ ಹೇಳಿಕೆ ಸರಿಯಾಗಿದೆ ಎನಿಸುತ್ತಿದೆ" ಎಂದು ಕಂಗನಾ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಉದ್ಧವ್ ಠಾಕ್ರೆ, ನಿಮ್ಮ ಎಲ್ಲಾ ವಿಷಯಗಳನ್ನು ಬಹಿರಂಗಗೊಳಿಸದೇ ಬಿಡುವುದಿಲ್ಲ

ಉದ್ಧವ್ ಠಾಕ್ರೆ, ನಿಮ್ಮ ಎಲ್ಲಾ ವಿಷಯಗಳನ್ನು ಬಹಿರಂಗಗೊಳಿಸದೇ ಬಿಡುವುದಿಲ್ಲ

"ಬನ್ನಿ..ಉದ್ಧವ್ ಠಾಕ್ರೆ ಮತ್ತು ಕರಣ್ ಜೋಹರ್ ಗ್ಯಾಂಗ್, ನೀವು ನನ್ನ ಕಚೇರಿಯನ್ನು ನೆಲಸಮಗೊಳಿಸಿದಿರಿ, ಬನ್ನಿ ನನ್ನ ಮನೆ, ದೇಹವನ್ನೂ ನೆಲಸಮ ಮಾಡಿ. ಇಡೀ ಜಗತ್ತೇ ನೀವು ಮಾಡುತ್ತಿರುವುದನ್ನು ನೋಡಲಿ. ನಾನು ಸಾಯಲಿ ಅಥವಾ ಬದಕಲಿ, ನಿಮ್ಮ ಎಲ್ಲಾ ವಿಷಯಗಳನ್ನು ಬಹಿರಂಗಗೊಳಿಸದೇ ಬಿಡುವುದಿಲ್ಲ"ಎಂದು ಬಹಿರಂಗ ಸವಾಲು ಹಾಕಿದ್ದ, ಕಂಗನಾ ರಣಾವತ್, ಈಗ ಮುಂಬೈ ತೊರೆಯುತ್ತಿರುವುದಾಗಿ ಟ್ವೀಟ್ ಮಡಿದ್ದಾರೆ. ಅವರಿಗೆ ಕೇಂದ್ರ ಸರಕಾರ ವೈ+ ಭದ್ರತೆಯನ್ನು ನೀಡಿತ್ತು.

English summary
Bollywood Actress Kangana Ranaut Leaves Mumbai Says My PoK Comparision Was Bang On,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X