ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರಭಕ್ಷಕ ಅವನಿ ಹತ್ಯೆ : ಆಘಾತಕಾರಿ ಸತ್ಯ ಬಿಚ್ಚಿಟ್ಟ ನಟ ರಂದೀಪ್ ಹೂಡಾ

|
Google Oneindia Kannada News

ಮುಂಬೈ, ನವೆಂಬರ್ 05 : ಮಹಾರಾಷ್ಟ್ರದ ಯಾವತ್ಮಾಳ್ ಅರಣ್ಯದಲ್ಲಿ ಹೆಣ್ಣು ಹುಲಿ ಅವನಿ ಹತ್ಯೆಯ ಕುರಿತಂತೆ ದೇಶದಾದ್ಯಂತ ಸಾಕಷ್ಟು ಚರ್ಚೆ ನಡೆಯುತ್ತಿದೆ. ಪರಿಸರ ಪ್ರೇಮಿಗಳು ಕ್ರೋಧಿತರಾಗಿದ್ದಾರೆ.

ದೀಪಾವಳಿ ವಿಶೇಷ ಪುರವಣಿ

ಈ ಕುರಿತು, ಮರ್ಡರ್ 3, ಒನ್ಸ್ ಅಪಾನ್ ಎ ಟಾಮ್ ಇನ್ ಮುಂಬೈ, ಜಿಸಮ್ 2, ಸರಬ್ಜಿತ್, ಬಾಂಬೆ ಟಾಕೀಸ್, ರಂಗ್ ರಸಿಯಾ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಬಾಲಿವುಡ್ ನಟ ರಂದೀಪ್ ಹೂಡಾ ಸವಿವರ ಪತ್ರವೊಂದನ್ನು ಟ್ವಿಟ್ಟರ್ ನಲ್ಲಿ ಬರೆದಿದ್ದು, ಅವನಿ ಹತ್ಯೆಯ ಕುರಿತ ಕೆಲವು ಆಘಾತಕಾರಿ ವಾಸ್ತವಾಂಶಗಳನ್ನು ಬಿಚ್ಚಿಟ್ಟಿದ್ದಾರೆ.

ಅವನಿಯ ಮರಿಗಳೂ ನರಭಕ್ಷಕವಾಗಿವೆ... ಭಾವುಕನಾಗಿ ಶೂಟರ್ ಹೇಳಿದ ಮಾತು!ಅವನಿಯ ಮರಿಗಳೂ ನರಭಕ್ಷಕವಾಗಿವೆ... ಭಾವುಕನಾಗಿ ಶೂಟರ್ ಹೇಳಿದ ಮಾತು!

2 ವರ್ಷಗಳಲ್ಲಿ 13 ಜನರನ್ನು ಬಲಿ ತೆಗೆದುಕೊಂಡಿದ್ದ ನರಭಕ್ಷಕ ಹೆಣ್ಣು ಹುಲಿಯನ್ನು ಕೊಂದಿದ್ದೇ ಸರಿ ಎಂದು ವಾದಿಸುವವರು ಒಂದೆಡೆಯಾದರೆ, ಅದನ್ನು ಮಾನವೀಯ ನೆಲೆಯಿಂದ ನೋಡಬೇಕಿತ್ತು, ಜೀವಂತವಾಗಿ ಹಿಡಿದಿದ್ದರೆ ತಪ್ಪಿರಲಿಲ್ಲ, ಆದರೆ ಕೊಲ್ಲುವ ಜರೂರತ್ತು ಏನಿತ್ತು ಎಂದು ಮತ್ತೆ ಕೆಲವರು ಪ್ರಶ್ನಿಸಿದ್ದಾರೆ. ಎರಡೂ ವಾದವೂ ಅವರವರ ಮಟ್ಟಿಗೆ ಸರಿಯೇ. ಆದರೆ ವಾಸ್ತವಾಂಶ ಏನು... ರಂದೀಪ್ ಹೂಡಾ ಮಾತಲ್ಲಿ ಕೇಳಿ...

Array

ನಿಮ್ಮೊಂದಿಗೆ ಸತ್ಯ ಹಂಚಿಕೊಳ್ಳುತ್ತೇನೆ

'ಅವನಿ ಹತ್ಯೆಯ ಕುರಿತಂತೆ ಪರಿಸರವಾದಿಗಳು, ಹುಲಿಪ್ರೇಮಿಗಳು ನೀಡಿದ ಪ್ರತಿಕ್ರಿಯೆ, ಆಕ್ರೋಶ ನನ್ನನ್ನು ಭಾವಪರವಶನನ್ನಾಗಿ ಮಾಡಿದೆ. ಈ ವಿಷಯದಲ್ಲಿ ಸರ್ಕಾರದ ಹಸ್ತಕ್ಷೇಪವನ್ನೂ ನಾನು ಸ್ವಾಗತಿಸುತ್ತೇನೆ. ಆದರೆ ಒಬ್ಬ ಶೂಟರ್ ನನ್ನು ಅವನಿ ಹತ್ಯೆಗಾಗಿ ನೇಮಿಸಿದ್ದನ್ನು ನಾನು ಒಪ್ಪುವುದಿಲ್ಲ. ಅವನಿಯನ್ನು ಬದುಕಲು ಬಿಡಿ ಎಂದು ಹೋರಾಟ ನಡೆಸುತ್ತಿರುವವರಿಗಾಗಿ ಈ ಪತ್ರ. ನನಗೂ ಅವನಿಯ ಹತ್ಯೆ ಮತ್ತು ಅದರ ಎರಡು ಮರಿಗಳ ನೆನಪಾದರೆ ಬೇಸರವಾಗುತ್ತದೆ. ಆದರೆ ಈ ಕುರಿತು ನಾನು ಹಲವು ಅಧ್ಯಯನ ಮಾಡಿದೆ. ಅಧ್ಯಯನವಿಲ್ಲದೆ ಯಾವ ವಿಷಯದ ಬಗ್ಗೆ ಮಾತನಾಡುವುದೂ ಸರಿಯಲ್ಲ ಎಂಬುದು ನನ್ನ ಭಾವನೆ. ಅಧ್ಯಯನದ ನಂತರ ನನಗೆ ಕೆಲವು ವಿಷಯಗಳು ತಿಳಿದವು. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ'- ರಂದೀಪ್ ಹೂಡಾ.

ನರಭಕ್ಷಕ 'ಅವನಿ ಹುಲಿ' ಇನ್ನಿಲ್ಲ! 13 ಜನರನ್ನು ಕೊಂದಿದ್ದ ಹುಲಿಗೆ ಗುಂಡೇಟು!ನರಭಕ್ಷಕ 'ಅವನಿ ಹುಲಿ' ಇನ್ನಿಲ್ಲ! 13 ಜನರನ್ನು ಕೊಂದಿದ್ದ ಹುಲಿಗೆ ಗುಂಡೇಟು!

ನರಭಕ್ಷಕ ಹುಲಿ ಅಪಾಯಕಾರಿ

ನರಭಕ್ಷಕ ಹುಲಿ ಅಪಾಯಕಾರಿ

ನರಭಕ್ಷಕವಾಗಿ ಬದಲಾಗಿದ್ದ ಅವನಿ ಆ ಭಾಗದಲ್ಲಿ ಯಾವ ಮನುಷ್ಯರಿಗೂ ನಡೆದಾಡುವುದಕ್ಕೆ ಬಿಡುತ್ತಿರಲಿಲ್ಲ. ಅದು ಅಲ್ಲಿಯೇ ಇದ್ದರೆ ಮತ್ತಷ್ಟು ಜನರನ್ನು ಕೊಂದು ಸಾಯಿಸುತ್ತಿತ್ತು. ಆದರೆ ವಿಷಯ ಅಷ್ಟೇ ಅಲ್ಲ, ಆ ಊರಿನ ಜನರು ಅವನಿ ಕಾಟದಿಂದ ತಪ್ಪಿಸಿಕೊಳ್ಳುವ ಕಾರಣಕ್ಕೆ ಹುಲಿ ಬರಬಹುದಾದ ಜಾಗಕ್ಕೆ ವಿಷ ಹಾಕುವ ಸಾಧ್ಯತೆ ಇತ್ತು. ಇದರಿಂದ, ಅವನಿಯೆಂದು ಬೇರೆ ಹುಲಿಗಳೂ ಸಾಯುವ ಸಂಭವವಿತ್ತು. ಅದು ಹುಲಿ ರಕ್ಷಿತಾರಣ್ಯವಾದ್ದರಿಂದ ಈ ನಡೆಯಿಂದ ಹುಲಿಗಳ ಸಂತತಿಯೇ ಕಡಿಮೆಯಾಗುವ ಸಾಧ್ಯತೆ ಇತ್ತು- ರಂದೀಪ್ ಹೂಡಾ.

ಉತ್ತರ ಪ್ರದೇಶದಲ್ಲಿ ದೊಣ್ಣೆಯಿಂದ ಬಡಿದು, ಟ್ರಾಕ್ಟರ್ ಹಾಯಿಸಿ ಹುಲಿಯ ಹತ್ಯೆಉತ್ತರ ಪ್ರದೇಶದಲ್ಲಿ ದೊಣ್ಣೆಯಿಂದ ಬಡಿದು, ಟ್ರಾಕ್ಟರ್ ಹಾಯಿಸಿ ಹುಲಿಯ ಹತ್ಯೆ

ಅಲ್ಲಿದ್ದಿದ್ದು ಎರಡೇ ಎರಡು ಆಯ್ಕೆ!

ಅಲ್ಲಿದ್ದಿದ್ದು ಎರಡೇ ಎರಡು ಆಯ್ಕೆ!

ಆದ್ದರಿಂದ ಅಲ್ಲಿದ್ದಿದ್ದು ಎರಡೇ ಎರಡು ಆಯ್ಕೆ. ಒಂದು ಅವನಿಯನ್ನು ಜೀವಂತವಾಗಿ ಹಿಡಿಯಬೇಕು, ಇಲ್ಲವೇ ಕೊಲ್ಲಬೇಕು! ಅದನ್ನು ಹಿಡಿದರೆ 10x10 ಅಗಲದ ಪಂಜರದಲ್ಲಿ ಬಂಧಿಸಬೇಕಿತ್ತು. ಸ್ವಚ್ಛಂದವಾಗಿ ವಿಶಾಲ ಕಾಡಿನಲ್ಲಿ ಬದುಕಿದ ಹುಲಿ ಪಂಜರದಲ್ಲಿ ಬದುಕುವುದು ಅಂದ್ರೆ ಎಷ್ಟು ನರಕ! ಅದರ ಬದುಕು ಹೀಗೆಯೇ ಮುಗಿದುಹೋಗುತ್ತಿತ್ತು - ರಂದೀಪ್ ಹೂಡಾ

ಅವನಿ ನೀಡಿದ ಎಚ್ಚರಿಕೆ!

ಅವನಿ ನೀಡಿದ ಎಚ್ಚರಿಕೆ!

ಅವನಿ ಎಚ್ಚರಿಕೆ ನೀಡಿ ಹೋಗಿದ್ದಾಳೆ. ಕೊಲ್ಲುವುದು ಅಪರಾಧ, ಹಾಗಂತ ಉಳಿಸಿಕೊಂಡರೂ ಅಪಾಯ ಎಂಬಂಥ ಸ್ಥಿತಿ ಬಂದಾಗ ಪ್ರಾಣಿಯನ್ನು ಜೀವಂತ ಹಿಡಿದು ಸುರಕ್ಷಿತ ಸ್ಥಳಕ್ಕೆ ಕಳಿಸುವ ವ್ಯವಸ್ಥೆ ತುರ್ತಾಗಿ ನಡೆಯಬೇಕಿದೆ ಎಂಬುದನ್ನು ಈ ಘಟನೆ ತೋರಿಸಿಕೊಟ್ಟಿದೆ. ವನ್ಯಜೀವಿ ತಜ್ಞರು ಈ ಕುರಿತು ಚಿಂತನೆ ನಡೆಸಬೇಕಿದೆ-ರಂದೀಪ್ ಹೂಡಾ

ಶೂಟರ್ ನೇಮಕ ಅತ್ಯಂತ ಅಪಾಯಕಾರಿ ನಡೆ!

ಶೂಟರ್ ನೇಮಕ ಅತ್ಯಂತ ಅಪಾಯಕಾರಿ ನಡೆ!

ಅವನಿಯನ್ನು ಕೊಲ್ಲುವುದಕ್ಕಾಗಿ ಒಬ್ಬ ಶೂಟರ್ ನನ್ನು ನೇಮಿಸಿದ್ದು ಅತ್ಯಂತ ಅಪಾಯಕಾರಿ ನಡೆ. ಅದರ ಅಗತ್ಯವೇನಿತ್ತು? ಹುಲಿಯನ್ನು ಹಿಡಿಯಲು, ಅಗತ್ಯ ಬಿದ್ದರೆ ಕೊಲ್ಲುವುದಕ್ಕೆ ಅರಣ್ಯ ಇಲಾಖೆ ಬಳಿ ಪರಿಕರಗಳಿರಲಿಲ್ಲವೇ? ಅದಕ್ಕಾಗಿ ಹೊರಗಿನಿಂದ ಒಬ್ಬ ಶೂಟರ್ ನನ್ನು ನೇಮಿಸುವುದು ಜನತೆಗೆ ಯಾವ ಸಂದೇಶ ನೀಡುತ್ತದೆ? ಮುಂದೊಂದಿನ ಹುಡುಗಾಟಿಕೆಗೂ ಹುಲಿಯನ್ನು ಹೊಡೆವ ದಿನಗಳು ಬಂದರೆ?- ರಂದೀಪ್ ಹೂಡಾ

English summary
Bollywood actor Randeep hooda writes some facts about tigress Avni's death. Avni was killed by Mahrashtra forest department of Nov 2nd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X