ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಮುಂಬೈನ ಕೊರೊನಾ ಹಾಟ್‌ಸ್ಪಾಟ್ ಆಗುತ್ತಿದೆ ಧಾರಾವಿ, ಬಿಎಂಸಿ ಎಚ್ಚರ

|
Google Oneindia Kannada News

ಮುಂಬೈ, ಮಾರ್ಚ್ 05: ಧಾರಾವಿ ಮತ್ತೆ ಮುಂಬೈನ ಕೊರೊನಾ ಹಾಟ್‌ಸ್ಪಾಟ್‌ ಆಗುತ್ತಿದೆ ಎಂದು ಬೃಹನ್‌ ಮುಂಬೈ ಮಹಾನಗರ ಪಾಲಿಕೆ ಎಚ್ಚರಿಕೆ ನೀಡಿದೆ. ಕೊರೊನಾ ಆರಂಭದಲ್ಲಿ ಧಾರಾವಿಯಲ್ಲೇ ಅತಿ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದರು, ಇದೀಗ ಮತ್ತೊಮ್ಮೆ ಧಾರಾವಿ ಕೊರೊನಾ ಹಾಟ್‌ಸ್ಪಾಟ್ ಎನಿಸಿಕೊಂಡಿದೆ.

ಏಷ್ಯಾದ ಅತಿದೊಡ್ಡ ಕೊಳೆಗೇರಿ, ಧಾರಾವಿ 2021ರ ಜನವರಿ 22 ರಂದು ಕೇವಲ 10 ಪ್ರಕರಣಗಳಿಂದ ಆರಂಭವಾಗಿ ಮಾರ್ಚ್ 4ರ ವೇಳೆಗೆ ಸಕಾರಾತ್ಮಕ ಪ್ರಕರಣಗಳಲ್ಲಿ ಏಳು ಪಟ್ಟು ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ.

ಮಹಾರಾಷ್ಟ್ರ: 5 ದಿನದ ನಂತರ 8000ಕ್ಕಿಂತ ಕಡಿಮೆ ಕೊರೊನಾ ಕೇಸ್ಮಹಾರಾಷ್ಟ್ರ: 5 ದಿನದ ನಂತರ 8000ಕ್ಕಿಂತ ಕಡಿಮೆ ಕೊರೊನಾ ಕೇಸ್

ಮುಂಬೈನಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಪರಿಣಾಮ ಬಿಎಂಸಿಯು ಕೆಲವು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಕಳೆದ ವರ್ಷದಂತೆ ಈ ಬಾರಿ ಮೊದಲು ಸ್ಲಂಗಳಲ್ಲಿ ಕೊರೊನಾ ಪರೀಕ್ಷೆ ಮಾಡಲಾಯಿತು, ಅವರಲ್ಲಿ ಸುಮಾರು 15-20 ಮಂದಿಯಲ್ಲಿ ಕೊರೊನಾ ಸೋಂಕು ಇರುವುದು ಬೆಳಕಿಗೆ ಬಂದಿದೆ.

BMC On Alert Dharavi Re-Emerges As Mumbai Covid Hotspot

ಧಾರಾವಿಯಲ್ಲಿ ಫೆಬ್ರವರಿ 28 ರಂದು 11 ಹೊಸ ಪ್ರಕರಣಗಳು ಪತ್ತೆಯಾಗಿದ್ದವು, ಮಾರ್ಚ್ 1 ರಂದು ಕೂಡ 11 ಹೊಸ ಪ್ರಕರಣಗಳು ಪತ್ತೆಯಾಗಿತ್ತು, ಮಾರ್ಚ್ 2 ರಂದು 8, ಮಾರ್ಚ್ 3 ರಂದು 14 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಧಾರಾವಿಯಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರುವವರ ಸಂಖ್ಯೆ 94ಕ್ಕೆ ಏರಿಕೆಯಾಗಿದೆ. ಈ ಕುರಿತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾತನಾಡಿ, ಸಾಮಾಜಿ ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ ಇಲ್ಲವಾದಲ್ಲಿ ಮತ್ತೆ ಸೋಂಕು ಹೆಚ್ಚಾಗಲಿದೆ ಎಂದು ಜನತೆಗೆ ಕಿವಿಮಾತು ಹೇಳಿದ್ದರು.

ಪುಣೆಯಲ್ಲಿ ಕೊರೊನಾ ಕಾಟ: ಮಾರ್ಚ್.14ರವರೆಗೂ ರಾತ್ರಿ ನಿಷೇಧಾಜ್ಞೆಪುಣೆಯಲ್ಲಿ ಕೊರೊನಾ ಕಾಟ: ಮಾರ್ಚ್.14ರವರೆಗೂ ರಾತ್ರಿ ನಿಷೇಧಾಜ್ಞೆ

ಕೇಂದ್ರ ಆರೋಗ್ಯ ಸಚಿವಾಲಯದ ಮೂರು ಮಂದಿ ತಂಡ, ಮಹಾರಾಷ್ಟ್ರ, ಕೇರಳ, ಚತ್ತೀಸ್‌ಗಢ, ಮಧ್ಯಪ್ರದೇಶ, ಗುಜರಾತ್, ಪಂಜಾಬ್, ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದೆ.

English summary
Asia’s largest slum, Dharavi has reported a sevenfold increase in Covid-19 positive cases to 73 as of 4 March from just 10 cases on 22 January, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X