ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ಅನ್‌ಲಾಕ್ ಮಾರ್ಗಸೂಚಿ; ಮಾಲ್ ಓಪನ್

|
Google Oneindia Kannada News

ಮುಂಬೈ, ಆಗಸ್ಟ್ 03 : ದೇಶದಲ್ಲಿಯೇ ಅತಿ ಹೆಚ್ಚು ಕೊರೊನಾ ವೈರಸ್ ಸೋಂಕಿತರು ಇರುವ ನಗರ ಮುಂಬೈ. ಮಹಾನಗರ ಪಾಲಿಕೆ ಅನ್ ಲಾಕ್ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಆಗಸ್ಟ್ 5ರ ಬುಧವಾರದಿಂದ ಜಾರಿಗೆ ಬರಲಿದೆ.

Recommended Video

SpaceX and NASA completes space mission successfully | Oneindia Kannada

ಸೋಮವಾರ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅನ್ ಲಾಕ್ ಮಾರ್ಗಸೂಚಿಯನ್ನು ಪ್ರಕಟಿಸಿದೆ. 'Mission Begin Again' ಎಂಬ ಶೀರ್ಷಿಕೆಯಡಿ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದ್ದು, ಹಲವು ವಿನಾಯಿತಿ ನೀಡಲಾಗಿದೆ.

ಮುಂಬೈ ಸರ್ವೆ: ಶೇ.57ರಷ್ಟು ಕೊರೊನಾ ಸೋಂಕಿತರು ಸ್ಲಂನಲ್ಲಿದ್ದಾರೆ ಮುಂಬೈ ಸರ್ವೆ: ಶೇ.57ರಷ್ಟು ಕೊರೊನಾ ಸೋಂಕಿತರು ಸ್ಲಂನಲ್ಲಿದ್ದಾರೆ

ಮಾಲ್‌ಗಳು, ಮಾರುಕಟ್ಟೆಗಳನ್ನು ಆಗಸ್ಟ್ 5ರಿಂದ ತೆರೆಯಲು ಅನುಮತಿ ನೀಡಲಾಗಿದೆ. ಬೆಳಗ್ಗೆ 9 ರಿಂದ ಸಂಜೆ 7 ಗಂಟೆಯ ತನಕ ತೆರೆಯಬಹುದಾಗಿದೆ. ಆದರೆ, ಚಿತ್ರಮಂದಿರಗಳು ಬಾಗಿಲು ತೆರೆಯಲು ಇನ್ನೂ ಅನುಮತಿ ನೀಡಲಾಗಿಲ್ಲ.

ಮುಂಬೈ ಮೀರಿಸಿದ ಬೆಂಗಳೂರು: ಅತಿ ಹೆಚ್ಚು ಸಕ್ರಿಯ ಕೇಸ್ ಹೊಂದಿರುವ ನಗರ? ಮುಂಬೈ ಮೀರಿಸಿದ ಬೆಂಗಳೂರು: ಅತಿ ಹೆಚ್ಚು ಸಕ್ರಿಯ ಕೇಸ್ ಹೊಂದಿರುವ ನಗರ?

ಮುಂಬೈ ನಗರದಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 1,16,436. ಇದುವರೆಗೂ ನಗರದಲ್ಲಿ 6,447 ಜನರು ಮೃತಪಟ್ಟಿದ್ದಾರೆ.

ರೆಸ್ಟೋರೆಂಟ್ ಓಪನ್ ಇಲ್ಲ

ರೆಸ್ಟೋರೆಂಟ್ ಓಪನ್ ಇಲ್ಲ

ಮಾಲ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಆದರೆ, ಮಾಲ್‌ನಲ್ಲಿರುವ ಚಿತ್ರಮಂದಿರ, ಫುಡ್ ಕೋರ್ಟ್, ರೆಸ್ಟೋರೆಂಟ್ ತೆರೆಯುವಂತಿಲ್ಲ. ಮಾಲ್‌ನಲ್ಲಿರುವ ರೆಸ್ಟೋರೆಂಟ್‌ ಕಿಚನ್ ತೆರೆಯಬಹುದು. ಅಗ್ರಿಗೇಟರ್ ಮೂಲಕ ಅಲ್ಲಿಂದ ಮನೆಗೆ ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶವಿದೆ.

ಮದುವೆ/ಅಂತ್ಯ ಸಂಸ್ಕಾರ

ಮದುವೆ/ಅಂತ್ಯ ಸಂಸ್ಕಾರ

ನಗರದಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿದೆ. ಹವಾನಿಯಂತ್ರಿತವಲ್ಲದ ಕಲ್ಯಾಣ ಮಂದಿರ, ಹಾಲ್‌ನಲ್ಲಿ ಮದುವೆಗಳನ್ನು ನಡೆಸಬಹುದು. ಮದುವೆಗೆ ಮತ್ತು ಅಂತ್ಯ ಸಂಸ್ಕಾರದಲ್ಲಿ 50 ಜನರು ಮಾತ್ರ ಪಾಲ್ಗೊಳ್ಳಲು ಅವಕಾಶವಿದೆ.

ಸ್ಯಾನಿಟೈಸ್ ಮಾಡಬೇಕು

ಸ್ಯಾನಿಟೈಸ್ ಮಾಡಬೇಕು

ಸಾರ್ವಜನಿಕ ಸ್ಥಳದಲ್ಲಿ ಮದ್ಯ, ಪಾನ್ ಮಸಾಲ, ತಂಬಾಕು ಪದಾರ್ಥಗಳನ್ನು ಸೇವಿಸುವುದು ನಿಷೇಧಿಸಲಾಗಿದೆ. ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲು ಇಚ್ಚಿಸಿದರೆ ಅವಕಾಶ ನೀಡಬೇಕು ಎಂದು ಖಾಸಗಿ ಕಚೇರಿಗಳಿಗೆ ಸೂಚನೆ ನೀಡಲಾಗಿದೆ. ಕಚೇರಿ ಪ್ರವೇಶ ದ್ವಾರದಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್ ಇಡಬೇಕು, ಕಚೇರಿಯನ್ನು ಸ್ಯಾನಿಟೈಸ್ ಮಾಡಬೇಕು.

ಅತಿ ಹೆಚ್ಚು ಕೊರೊನಾ ಸೋಂಕಿತರು

ಅತಿ ಹೆಚ್ಚು ಕೊರೊನಾ ಸೋಂಕಿತರು

ಮುಂಬೈ ನಗರದಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 1,16,436. ಇದುವರೆಗೂ ನಗರದಲ್ಲಿ 6,447 ಜನರು ಮೃತಪಟ್ಟಿದ್ದಾರೆ. ದೇಶದಲ್ಲಿಯೇ ಅತಿ ಹೆಚ್ಚು ಕೊರೊನಾ ವೈರಸ್ ಸೋಂಕಿತರು ಇರುವ ಮಹಾನಗರದಲ್ಲಿ ಮುಂಬೈ ಮೊದಲ ಸ್ಥಾನದಲ್ಲಿದೆ.

English summary
Brihanmumbai Municipal Corporation (BMC) announced opening of lockdown under Mission Begin Again. Malls, market complexes allowed to open from 9 am to 7 pm from Aug 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X