ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪರಾಧ ಎಸಗುವುದು ಸೋನು ಸೂದ್ ಚಾಳಿಯಾಗಿದೆ: ಮುಂಬೈ ಪಾಲಿಕೆ ಗಂಭೀರ ಆರೋಪ

|
Google Oneindia Kannada News

ಮುಂಬೈ, ಜನವರಿ 13: ಬಾಲಿವುಡ್ ನಟ ಸೋನು ಸೂದ್ ಪದೇ ಪದೇ ಅಪರಾಧ ಎಸಗುವ ಚಾಳಿಯುಳ್ಳವರು. ಅವರು ನಿರಂತರವಾಗಿ ಅನಧಿಕೃತ ನಿರ್ಮಾಣ ಕಾಮಗಾರಿಗಳನ್ನು ನಡೆಸುತ್ತಲೇ ಇರುತ್ತಾರೆ ಎಂದು ಮುಂಬೈ ಮಹಾನಗರ ಪಾಲಿಕೆ ಬಾಂಬೆ ಹೈಕೋರ್ಟ್ ಮುಂದೆ ಆರೋಪ ಮಾಡಿದೆ.

ಮುಂಬೈ ಉಪನಗರ ಜುಹುದಲ್ಲಿ ಈ ಹಿಂದೆ ಎರಡು ಬಾರಿ ತೆರವು ಕಾರ್ಯಾಚರಣೆ ನಡೆಸಿದ್ದರೂ ಅವರು ಮತ್ತೆ ಅಕ್ರಮ ಮನೆ ನಿರ್ಮಾಣ ಕಾರ್ಯ ಮುಂದುವರಿಸಿದ್ದಾರೆ ಎಂದು ಬಿಎಂಸಿ ಮಂಗಳವಾರ ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಹೇಳಿದೆ.

ಬಾಲಿವುಡ್ ನಟ ಸೋನುಸೂದ್ ವಿರುದ್ಧ ಮುಂಬೈ ಪಾಲಿಕೆ ದೂರುಬಾಲಿವುಡ್ ನಟ ಸೋನುಸೂದ್ ವಿರುದ್ಧ ಮುಂಬೈ ಪಾಲಿಕೆ ದೂರು

ಕಳೆದ ಅಕ್ಟೋಬರ್‌ನಲ್ಲಿ ಬಿಎಂಸಿ ತಮ್ಮ ವಿರುದ್ಧ ನೋಟಿಸ್ ನೀಡಿದ್ದನ್ನು ಮತ್ತು ನೋಟಿಸ್ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಡಿಸೆಂಬರ್‌ನಲ್ಲಿ ಸಿವಿಲ್ ನ್ಯಾಯಾಲಯವೊಂದು ವಜಾಗೊಳಿಸಿದ್ದನ್ನು ಪ್ರಶ್ನಿಸಿ ಸೋನು ಸೂದ್ ಬಾಂಬೆ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಬಿಎಂಸಿ ಈ ಅಫಿಡವಿಟ್ ಸಲ್ಲಿಸಿದೆ.

ನೀವು ವಿಲನ್ ಆಗಿದ್ದಕ್ಕೆ ನಾನು ಹೀರೋ ಹಾಗೆ ಕಾಣುತ್ತಿದ್ದೇನೆ ಎಂದ ಕಂಗನಾ!ನೀವು ವಿಲನ್ ಆಗಿದ್ದಕ್ಕೆ ನಾನು ಹೀರೋ ಹಾಗೆ ಕಾಣುತ್ತಿದ್ದೇನೆ ಎಂದ ಕಂಗನಾ!

ಸೋನು ಸೂದ್ ಅವರು ತಮ್ಮ ಆರು ಅಂತಸ್ತಿನ 'ಶಕ್ತಿ ಸಾಗರ್' ನಿವಾಸದ ಕಟ್ಟಡವನ್ನು ವಾಣಿಜ್ಯ ಹೋಟೆಲ್ ಆಗಿ ಬದಲಿಸಲು ರಚನಾತ್ಮಕ ಬದಲಾವಣೆ ಮಾಡಿದ್ದಾರೆ ಎಂದು ಬಿಎಂಸಿ ಆರೋಪ ಮಾಡಿದೆ. ಮುಂದೆ ಓದಿ.

ರೂಢಿಗತ ಅಪರಾಧಿ

ರೂಢಿಗತ ಅಪರಾಧಿ

'ಅರ್ಜಿದಾರರು ಸಾಂಪ್ರದಾಯಿಕ ಅಪರಾಧಿ. ಅವರು ತಮ್ಮ ಅನಧಿಕೃತ ಕಾರ್ಯಗಳ ವಾಣಿಜ್ಯ ಲಾಭವನ್ನು ಆನಂದಿಸಲು ಬಯಸುತ್ತಿದ್ದಾರೆ. ಹೀಗಾಗಿ ಅವರು ತೆರವುಗೊಳಿಸಲಾಗಿದ್ದ ಭಾಗವನ್ನು ಮತ್ತೆ ಕಟ್ಟಡಲು ಆರಂಭಿಸಿದ್ದಾರೆ. ಪರವಾನಗಿ ಇಲಾಖೆಯ ಅನುಮತಿ ಇಲ್ಲದೆ ಮತ್ತು ಅಕ್ರಮವಾಗಿ ಹೋಟೆಲ್ ನಡೆಸುವಂತೆ ಮಾಡಲು ಬದಲಾವಣೆ ಮಾಡುತ್ತಿದ್ದಾರೆ' ಎಂದು ಬಿಎಂಸಿ ಅಫಿಡವಿಟ್‌ನಲ್ಲಿ ದೂರಿದೆ.

ಅಕ್ರಮ ವಾಣಿಜ್ಯ ಹೋಟೆಲ್

ಅಕ್ರಮ ವಾಣಿಜ್ಯ ಹೋಟೆಲ್

ಸೋನು ಸೂದ್ ಅವರು ತಮಗೆ ಮಂಜೂರು ಮಾಡಲಾಗಿದ್ದ ಕಟ್ಟಡದ ಯೋಜನೆಗೆ ವಿರುದ್ಧವಾಗಿ ಕಾನೂನಿಗೆ ವಿರುದ್ಧವಾಗಿ ಅಕ್ರಮ ವಾಣಿಜ್ಯ ಹೋಟೆಲ್ ಅನ್ನು ನಿರ್ಮಿಸುವ ಮತ್ತು ಪರಿವರ್ತಿಸುವ ಕಾರ್ಯದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಸಹ ಆರೋಪಿಸಲಾಗಿದೆ.

ಆಧಾರ ರಹಿತ ಆರೋಪ

ಆಧಾರ ರಹಿತ ಆರೋಪ

'ಅರ್ಜಿದಾರರಿಗೆ ಉಲ್ಲೇಖಿಸಲಾಗಿರುವ ಆಸ್ತಿಯನ್ನು ನಿವಾಸದಿಂದ ವಾಣಿಜ್ಯ ಬಳಕೆಯ ಉದ್ದೇಶದ ಕಟ್ಟಡವಾಗಿ ಬದಲಿಸಲು ಯಾವುದೇ ಅನುಮತಿ ನೀಡಿಲ್ಲ. ಅವರಿಗೆ ವಾಣಿಜ್ಯ ಹೋಟೆಲ್ ನಡೆಸಲು ಯಾವ ಪರವಾನಗಿ ಕೂಡ ಸಿಕ್ಕಿಲ್ಲ. ಈ ಕಾರಣಕ್ಕಾಗಿ ಸೋನು ಸೂದ್ ಅವರು ತಮಗೆ ಕಿರುಕುಳ ಹಾಗೂ ದುರುದ್ದೇಶದ ನಡೆಯ ಕುರಿತು ಅನಪೇಕ್ಷಿತ ಮತ್ತು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ' ಎಂದು ತಿಳಿಸಿದೆ.

ಪರವಾನಗಿ ಇಲ್ಲದೆ ಹೋಟೆಲ್

ಪರವಾನಗಿ ಇಲ್ಲದೆ ಹೋಟೆಲ್

'ಅರ್ಜಿದಾರರು ಇಡೀ ಕಟ್ಟಡವನ್ನು ಹೋಟೆಲ್ ನಡೆಸುವ ಸಲುವಾಗಿ ಅನಧಿಕೃತವಾಗಿ ಮಾರ್ಪಾಡು ಮಾಡಿದ್ದಾರೆ. ಹಾಗೆಯೇ ಪರವಾನಗಿ ಇಲ್ಲದೆ ಹೋಟೆಲ್ ನಡೆಸುತ್ತಿದ್ದಾರೆ ಕೂಡ' ಎಂದು ಆರೋಪಿಸಿದೆ. ಅಕ್ರಮ ನಿರ್ಮಾಣದ ವಿರುದ್ಧ ಸೋನು ಸೂದ್ ಅವರಿಗೆ 2018ರ ಸೆಪ್ಟೆಂಬರ್‌ನಲ್ಲಿ ಮೊದಲು ಕ್ರಮ ತೆಗೆದುಕೊಳ್ಳಲಾಗಿತ್ತು. ಆದರೂ ಅವರು ನಿರ್ಮಾಣ ಕಾರ್ಯ ಮುಂದುವರಿಸಿದ್ದಾರೆ. ಅನಧಿಕೃತ ಕಾಮಗಾರಿಯನ್ನು 2018ರ ನವೆಂಬರ್ 12ರಂದು ತೆರವುಗೊಳಿಸಲಾಗಿತ್ತು ಎಂದು ವಿವರಿಸಿದೆ.

ಸೋನು ಬಳಿ ಮಾಲೀಕತ್ವ ದಾಖಲೆಯೇ ಇಲ್ಲ

ಸೋನು ಬಳಿ ಮಾಲೀಕತ್ವ ದಾಖಲೆಯೇ ಇಲ್ಲ

ತೆರವುಗೊಳಿಸಲಾಗಿದ್ದ ಭಾಗವನ್ನು ಮತ್ತೆ ಕಟ್ಟುವ ಮೂಲಕ ಸೋನು ಸೂದ್ ದುರ್ವರ್ತನೆ ಪ್ರದರ್ಶಿಸಿದ್ದಾರೆ. ಹೀಗಾಗಿ 2020ರ ಫೆ. 14ರಂದು ಮತ್ತೊಮ್ಮೆ ತೆರವು ಕಾರ್ಯಾಚರಣೆ ನಡೆಸಲಾಗಿತ್ತು. ತಾವು ಅಥವಾ ತಮ್ಮ ಪತ್ನಿ ಸೋನಾಲಿ ಸೂದ್ ಅವರು ಈ ಕಟ್ಟಡದ ಮಾಲೀಕರು ಎಂದು ಹೇಳಿಕೊಳ್ಳಲು ಅವರ ಬಳಿ ದಾಖಲೆಗಳು ಕೂಡ ಇಲ್ಲ ಎಂದು ಅಫಿಡವಿಟ್‌ನಲ್ಲಿ ಹೇಳಲಾಗಿದೆ.

English summary
Brihanmumbai Municipal Corporation (BMC) in an affidavit to Bombay High Court alleged that Sonu Sood is a Habitual Offender and keeps carrying unathorised construction work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X