ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಬ್ಲ್ಯಾಕ್‌ ಫಂಗಸ್‌ಗೆ ಇದುವರೆಗೆ 52 ಮಂದಿ ಬಲಿ

|
Google Oneindia Kannada News

ಮುಂಬೈ, ಮೇ 14: ಬ್ಲ್ಯಾಕ್ ಫಂಗಸ್ ಹಾವಳಿ ದೇಶದಲ್ಲಿ ಉಲ್ಬಣಗೊಂಡಿದ್ದು, ಮಹಾರಾಷ್ಟ್ರದಲ್ಲಿ ಇದುವರೆಗೆ 52 ಮಂದಿ ಮೃತಪಟ್ಟಿದ್ದಾರೆ.

Recommended Video

ಕೊರೊನದಿಂದ ಮತ್ತೊಂದು ರೋಗ, ಕರ್ನಾಟಕದಲ್ಲಿ 33, ಮುಂಬೈನಲ್ಲಿ 56 ಜನರ ಸಾವು | Oneindia Kannada

ಕೊರೊನಾ ಸೋಂಕಿತರು ಆಸ್ಪತ್ರೆಗಳಲ್ಲಿ ಹೆಚ್ಚು ಕಾಲ ಉಳಿದರೆ ಅಥವಾ ಸೋಂಕಿನಿಂದ ಗುಣಮುಖರಾದ ಬಳಿಕ ಮಲಿನ ಪರಿಸರದಲ್ಲಿ ವಾಸಮಾಡುತ್ತಿದ್ದರೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳಲಿದೆ.

ಕೊರೊನಾ 2ನೇ ಅಲೆ ಜೊತೆ ಬೆಂಗಳೂರಿನಲ್ಲಿ ಡೆಡ್ಲಿ ಬ್ಲಾಕ್‌ ಫಂಗಸ್‌ ಅಟ್ಯಾಕ್‌ಕೊರೊನಾ 2ನೇ ಅಲೆ ಜೊತೆ ಬೆಂಗಳೂರಿನಲ್ಲಿ ಡೆಡ್ಲಿ ಬ್ಲಾಕ್‌ ಫಂಗಸ್‌ ಅಟ್ಯಾಕ್‌

ಪ್ರಸ್ತುತ ಸಾವನ್ನಪ್ಪಿರುವ ಈ 52 ಮಂದಿಯೂ ಕೊರೊನಾ ಸೋಂಕಿಗೊಳಗಾಗಿ ಚೇತರಿಸಿಕೊಂಡವರೇ ಆಗಿದ್ದರೆಂದು ಆಧಿಕಾರಿಗಳು ಮಾಹಿತಿ ನೀಡಿದ್ದಾರೆ.

Black Fungus Has Claimed 52 Lives In Maharashtra So Far: Official

ಮ್ಯೂಕೋರ್ಮೈಕೋಸಿಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ತಗುಲಿದವರ ಚಿಕಿತ್ಸೆಗೆ ಬಹುಶಿಸ್ತೀಯ ವಿಧಾನದ ಅಗತ್ಯವಿರುತ್ತದೆ, ಇದರಿಂದ ಆರೋಗ್ಯದ ಮೂಲಸೌಕರ್ಯಗಳ ಮೇಲೆ ಮತ್ತಷ್ಟು ಹೊರೆ ಬೀಳುವ ಸಾಧ್ಯತೆಗಳಿವೆ.

ಪರಿಸ್ಥಿತಿ ನಿಭಾಯಿಸಲು ಈಗಾಗಲೇ 1 ಲಕ್ಷ ಡೋಸ್ ಗಳ ಆಂಫೊಟೆರಿಸಿನ್ ಬಿ ಕಳುಹಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ದೀರ್ಘಕಾಲಿಕ ರೋಗದಿಂದ ಬಳಲುತ್ತಿರುವವರ ಮೇಲೆ ಈದು ಅತ್ಯಂತ ಗಂಭೀರ ಪರಿಣಾಮ ಬೀರುತ್ತಿದೆ ಎಂದು ತೋಪೆ ತಿಳಿಸಿದ್ದಾರೆ.

ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ರೋಗಿಗಳಲ್ಲಿ ಅತೀವ್ರ ಜ್ವರ, ಕಣ್ಣಿನ ನೋವು, ಮೂಗು ಕಟ್ಟುವುದು, ಕಣ್ಣಿನ ದೃಷ್ಠಿ ಭಾಗಶಃ ನಷ್ಟಗೊಂಡಿರುವ ಲಕ್ಷಣಗಳು ಕಂಡುಬಂದಿವೆ.

ಈ ನಡುವೆ ಇದೇ ಮೊದಲ ಬಾರಿಗೆ ಮಹಾರಾಷ್ಟ್ರ ಆರೋಗ್ಯ ಸಚಿವಾರ ಬ್ಲ್ಯಾಕ್ ಫಂಗಸ್‌ನಿಂದ ಸಾವನ್ನಪ್ಪಿದ್ದವರ ಕುರಿತಂತೆಯು ಪ್ರತ್ಯೇಕವಾಗಿ ಮಾಹಿತಿ ನೀಡಲು ಆರಂಭಿಸಿದೆ.

ಬುಧವಾರವಷ್ಟೇ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆಯವರು, ರಾಜ್ಯದಲ್ಲಿ ಈ ವರೆಗಲೂ 1,500 ಮಂದಿಯಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ. ಕೊರೊನಾ 2ನೇ ಅಲೆ ವೇಳೆ ತೀವ್ರಗೊಂಡಿದೆ ಎಂದು ಹೇಳಿದ್ದಾರೆ.

English summary
As many as 52 people have died due to Mucormycosis, a rare but dangerous fungal infection, in Maharashtra since the COVID-19 outbreak last year, a senior health department official said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X