ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮ ಮಂದಿರ ನಿರ್ಮಿಸದಿದ್ದರೆ, ಬಿಜೆಪಿ ನಿರ್ನಾಮ : ಶಿವಸೇನೆ

|
Google Oneindia Kannada News

ಮುಂಬೈ, ಅಕ್ಟೋಬರ್ 09: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸರಣಿ ವಾಗ್ದಾಳಿ ಆರಂಭಿಸಿರುವ ಶಿವಸೇನೆ, ಮಂಗಳವಾರದಂದು ತನ್ನ ಮುಖವಾಣಿ ಸಾಮ್ನಾದಲ್ಲಿ ಖಡಕ್ ಎಚ್ಚರಿಕೆ ಸಂದೇಶವೊಂದನ್ನು ಬಿಜೆಪಿಗೆ ನೀಡಿದೆ.

ಅಯೋಧ್ಯದಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಭಾರತೀಯ ಜನತಾ ಪಕ್ಷ(ಬಿಜೆಪಿ) ಏನಾದರೂ ಮಾತಿಗೆ ತಪ್ಪಿದರೆ, ಪಕ್ಷ ನಿರ್ನಾಮವಾಗಲಿದೆ ಎಂದು ಬರೆಯಲಾಗಿದೆ.

ಮೋದಿ ಸೋಲಿಸಲು ಶಿವಸೇನೆಯ ಹೊಸ ಆಯುಧ- ಹಿಂದುತ್ವ, ಅಯೋಧ್ಯೆ!ಮೋದಿ ಸೋಲಿಸಲು ಶಿವಸೇನೆಯ ಹೊಸ ಆಯುಧ- ಹಿಂದುತ್ವ, ಅಯೋಧ್ಯೆ!

'Ram Mandir Banao, nahi toh Ram naam satya hai' ಎಂಬ ಶೀರ್ಷಿಕೆಯೊಂದಿಗೆ ಸಾಮ್ನಾದಲ್ಲಿ ಕಟು ಶಬ್ದಗಳಿಂದ ಎಚ್ಚರಿಕೆ ನೀಡಲಾಗಿದೆ.

BJP will be dethroned if Ram Temple is not built, warns Shiv Sena

ಕೇಂದ್ರ ಹಾಗೂ ಉತ್ತರಪದೇಶದಲ್ಲಿ ಅಧಿಕಾರಕ್ಕೆ ಬರಲು ಹಿಂದುತ್ವ ಹಾಗೂ ರಾಮ ಮಂದಿರ ನಿರ್ಮಾಣ ಮಾಡುವ ಭರವಸೆ ನೀಡುತ್ತಾ ಬಂದ ಬಿಜೆಪಿ ತನ್ನ ಮಾತಿಗೆ ತಪ್ಪಿದೆ. ರಾಮ ಮಂದಿರ ನಿರ್ಮಾಣ ಬರಿ ಚುನಾವಣೆ ಸಂದರ್ಭದ ಆಶ್ವಾಸನೆಯಾಗಿ ಉಳಿದಿದೆ,ರಾಮಮಂದಿರ ನಿರ್ಮಾಣ ಪರ ಹೋರಾಟ ಮಾಡುವವರಿಗೂ ಸರ್ಕಾರದಿಂದ ತೊಂದರೆಗಳಾಗುತ್ತಿವೆ ಎಂದು ಬರೆಯಲಾಗಿದೆ.

ರಾಮಜನ್ಮ ಭೂಮಿ ಜಮೀನು ವಿವಾದ ವಿಚಾರಣೆಗೆ ಮುಹೂರ್ತ ನಿಗದಿ ರಾಮಜನ್ಮ ಭೂಮಿ ಜಮೀನು ವಿವಾದ ವಿಚಾರಣೆಗೆ ಮುಹೂರ್ತ ನಿಗದಿ

ಪಕ್ಷದ ನಾಯಕ ಸಂಜಯ್ ರಾವತ್ ಮಾತನಾಡಿ, ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ಅಯೋಧ್ಯದ ವಿವಾದ ಸ್ಥಳಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದೆ. ರಾಮ್ ಜನ್ಮಭೂಮಿ ಟ್ರಸ್ಟಿನ ಜನಮೇಜಯ ಶರಣ್ ಜಿ ಅವರು ಈ ಬಗ್ಗೆ ಆಹ್ವಾನ ನೀಡಲಿದ್ದಾರೆ ಎಂದರು.

'RSS, ಬಿಜೆಪಿಯವರ ನುಡಿಯಲ್ಲಿ ರಾಮ, ನಡೆಯಲ್ಲಿ ನಾಥೂರಾಮ!''RSS, ಬಿಜೆಪಿಯವರ ನುಡಿಯಲ್ಲಿ ರಾಮ, ನಡೆಯಲ್ಲಿ ನಾಥೂರಾಮ!'

ಮೊಘಲ್ ದೊರೆ ಬಾಬರ್ ಅವರು ಅಯೋಧ್ಯಾದಲ್ಲಿ 1528ರಲ್ಲಿ ಬಾಬ್ರಿ ಮಸೀದಿ ನಿರ್ಮಿಸಿದ್ದ . ಡಿಸೆಂಬರ್ 06,1992ರಂದು ಬಾಬ್ರಿ ಮಸೀದಿಯನ್ನು ಹಿಂದೂ ಕಾರ್ಯಕರ್ತರು ಕೆಡವಿದ ಆರೋಪವಿದೆ. ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಿಸಲು ಹಿಂದೂ ಪರ ಸಂಘಟನೆಗಳು ಮುಂದಾಗಿವೆ.

English summary
The Shiva Sena on Tuesday intensified its that it on Prime Minister Narendra Modi over the construction of Ram Temple in Ayodhya and waned the Bharatiya Janata Party (BJP) government that it will be thrown out of power if it fails to build the temple, as promised.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X