ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕ್ಸಿಜನ್‌ ಕೊರತೆಯಿಂದ ಸಾವು: ಮಹಾ ಸರ್ಕಾರದ ಹೇಳಿಕೆ ಉಲ್ಲೇಖಿಸಿ ರಾವತ್‌ಗೆ ಬಿಜೆಪಿ ತಿರುಗೇಟು

|
Google Oneindia Kannada News

ನವದೆಹಲಿ, ಜು.21: "ಆಮ್ಲಜನಕದ ಕೊರತೆಯಿಂದ ಯಾವುದೇ ಸಾವು ಸಂಭವಿಸಿಲ್ಲ" ಎಂಬ ಕೇಂದ್ರದ ಹೇಳಿಕೆಯನ್ನು ಶಿವಸೇನೆ ಸಂಸದ ಸಂಜಯ್ ರಾವತ್‌ ತೀವ್ರವಾಗಿ ಟೀಕಿಸಿದ್ದಾರೆ. ಬಿಜೆಪಿಯ "ನಾಚಿಕೆಯಿಲ್ಲದ ರಾಜಕೀಯ" ಹೇಳಿದ್ದಾರೆ. ಸಂಜಯ್‌ ರಾವತ್‌ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ, ಕೋವಿಡ್‌ನ ಎರಡನೇ ಅಲೆಯಲ್ಲಿ ರಾಜ್ಯದಲ್ಲಿ ಆಮ್ಲಜನಕದ ಕೊರತೆಯಿಂದ ಯಾವುದೇ ರೋಗಿಗಳು ಸಾವನ್ನಪ್ಪಿಲ್ಲ ಎಂದು ಬಾಂಬೆ ಹೈಕೋರ್ಟ್‌ಗೆ ತಿಳಿಸಿದ ಮಹಾರಾಷ್ಟ್ರ ಸರ್ಕಾರ ಕಳುಹಿಸಿದ ಮಾಹಿತಿಯ ಮೇಲೆ ಕೇಂದ್ರವು ಅವಲಂಬಿಸಿದೆ ಎಂದು ಹೇಳಿದೆ.

ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆಯು, ಸರ್ಕಾರವು "ಆಮ್ಲಜನಕದ ಕೊರತೆಯಿಂದಾಗಿ ಯಾವುದೇ ಸಾವನ್ನು ವರದಿ ಮಾಡಿಲ್ಲ" ಎಂದು ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ. "ರಾಜ್ಯದಲ್ಲಿ ಆಮ್ಲಜನಕದ ಕೊರತೆಯಿಂದ ಜನರು ಸಾವನ್ನಪ್ಪಿದ್ದಾರೆಂದು ನಾವು ಎಂದಿಗೂ ಹೇಳಲಿಲ್ಲ. ಅನೇಕರಿಗೆ ಸಹ-ಕಾಯಿಲೆಗಳು ಮತ್ತು ಇತರ ಕಾಯಿಲೆಗಳಂತಹ ಸಮಸ್ಯೆಗಳಿವೆ. ಆಮ್ಲಜನಕದ ಕೊರತೆಯಿಂದ ಯಾವುದೇ ಸಾವು ಸಂಭವಿಸಿಲ್ಲ," ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ ಎಂದಿದ್ದಾರೆ.

'ತುರ್ತು ಪರಿಸ್ಥಿತಿಗಿಂತ ಪೆಗಾಸಸ್‌ ದಾಳಿ ಅಪಾಯಕಾರಿ': ಜೆಪಿಸಿ ತನಿಖೆಗೆ ಶಿವಸೇನೆ ಆಗ್ರಹ'ತುರ್ತು ಪರಿಸ್ಥಿತಿಗಿಂತ ಪೆಗಾಸಸ್‌ ದಾಳಿ ಅಪಾಯಕಾರಿ': ಜೆಪಿಸಿ ತನಿಖೆಗೆ ಶಿವಸೇನೆ ಆಗ್ರಹ

ಎಪ್ರಿಲ್‌ನಲ್ಲಿ ಆಮ್ಲಜನಕ ಸಂಗ್ರಹಣಾ ಘಟಕದಲ್ಲಿ ಸೋರಿಕೆಯಾದ ಕಾರಣ ನಾಸಿಕ್ ಆಸ್ಪತ್ರೆಯಲ್ಲಿ ಆಮ್ಲಜನಕದ ಪೂರೈಕೆ ಕಡಿತಗೊಂಡು 22 ರೋಗಿಗಳು ಸಾವನ್ನಪ್ಪಿದರು. ಈ ವಿಚಾರದಲ್ಲಿ ನಿರ್ಲಕ್ಷ್ಯದ ಬಗ್ಗೆ ಮಾಧ್ಯಮಕ್ಕೆ ರಾಜೇಶ್‌ ಹೇಳಿಕೆ ನೀಡಿದ್ದರು. ಆದರೆ ಸುದ್ದಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ ರಾಜೇಶ್ ತೋಪೆ "ರಾಜ್ಯದಲ್ಲಿ ಆಮ್ಲಜನಕದ ಕೊರತೆಯಿಂದ ಜನರು ಸಾವನ್ನಪ್ಪಿದ್ದಾರೆಂದು ನಾವು ಎಂದಿಗೂ ಹೇಳಲಿಲ್ಲ," ಎಂದಿದ್ದಾರೆ. ಈ ನಡುವೆ "ಆಮ್ಲಜನಕದ ಕೊರತೆಯಿಂದ ಯಾವುದೇ ಸಾವು ಸಂಭವಿಸಿಲ್ಲ" ಎಂಬ ಕೇಂದ್ರದ ಹೇಳಿಕೆಯನ್ನು ಟೀಕಿಸಿದ್ದ ಶಿವಸೇನೆ ಸಂಸದ ಸಂಜಯ್ ರಾವತ್‌ಗೆ ರಾಜೇಶ್‌ ಹೇಳಿಕೆ ಉಲ್ಲೇಖಿಸಿಯೇ ಬಿಜೆಪಿ ಟಾಂಗ್‌ ನೀಡಿದೆ.

BJP Slams Shiv Senas Sanjay Raut over File Case Against Government statement

"ಸಂಜಯ್ ರಾವತ್‌ ದ್ವಂದ್ವದಲ್ಲಿದ್ದಾರೆ. ಕೋವಿಡ್‌ ವೇಳೆ ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿರುವ ಬಗ್ಗೆ ಶಿವಸೇನೆ ಮತ್ತು ಕಾಂಗ್ರೆಸ್ ಬೇರೆ ಬೇರೆ ನಿಲುವು ಹೊಂದಿದೆ. ಮೈತ್ರಿ ಸರ್ಕಾರ ಬೇರೆ ಬೇರೆ ಹೇಳಿಕೆಯನ್ನು ನೀಡುತ್ತಿದೆ. ಕೇಂದ್ರ ಸರ್ಕಾರಕ್ಕೆ ಮತ್ತು ಪತ್ರಿಕೆಗಳಿಗೆ ಆಮ್ಲಜನಕದ ಕೊರತೆಯಿಂದಾಗಿ ಮಹಾರಾಷ್ಟ್ರ ರಾಜ್ಯದಲ್ಲಿ ಸಾವಿನ ಸಂಖ್ಯೆಯನ್ನು ಸಂತೋಷದಿಂದ ಒದಗಿಸಿ. ಕೇಂದ್ರಬಿಂದುವಾಗಿರುವ ದೆಹಲಿ ರಾಜ್ಯಕ್ಕೂ ಇದೇ ಹೇಳಿಕೆ ಅ‌ನ್ವಯವಾಗುತ್ತದೆ," ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಹೇಳಿದ್ದಾರೆ.

"ಅನಾರೋಗ್ಯ ಮತ್ತು ನಾಚಿಕೆಯಿಲ್ಲದ ಶಿವಸೇನೆ ನಾಯಕ ಸಂಜಯ್ ರಾವತ್‌ ಹೇಗಿದ್ದಾರೆಂದು ನೋಡಿ. ಮೇ 2021 ರಲ್ಲಿ ಠಾಕ್ರೆ ಸರ್ಕಾರ ಬಾಂಬೆ ಹೈಕೋರ್ಟ್‌ಗೆ ವರದಿಯನ್ನು ಸಲ್ಲಿಸಿ, ಆಮ್ಲಜನಕದ ಕೊರತೆಯಿಂದ ಯಾವುದೇ ರೋಗಿಯು ಸಾವನ್ನಪ್ಪಿಲ್ಲ ಎಂದು ಹೇಳಿಕೊಂಡಿದೆ. ಮಾಹಿತಿಯ ಆಧಾರದ ಮೇಲೆ ಕೇಂದ್ರವು ತನ್ನ ವರದಿಯನ್ನು ಸಿದ್ಧಪಡಿಸಿದೆ, ರಾಜ್ಯ ಸರ್ಕಾರ ರವಾನಿಸಿದೆ,"ಎಂದು ಬಿಜೆಪಿ ಟ್ವೀಟ್ ಮಾಡಿದೆ.

'ಬಿಜೆಪಿ ಮತ್ತು ಶಿವಸೇನೆಯ ಬಂಧ ಅಮೀರ್ ಖಾನ್, ಕಿರಣ್ ರಾವ್‌ ನಡುವಿನ ಸಂಬಂಧದಂತೆ': ರಾವತ್‌'ಬಿಜೆಪಿ ಮತ್ತು ಶಿವಸೇನೆಯ ಬಂಧ ಅಮೀರ್ ಖಾನ್, ಕಿರಣ್ ರಾವ್‌ ನಡುವಿನ ಸಂಬಂಧದಂತೆ': ರಾವತ್‌

"ಈಗ ಈ ವರದಿಯ ಬಗ್ಗೆ ಪ್ರತಿಕ್ರಿಯಿಸಿದ ಸಂಜಯ್ ರಾವತ್‌ ತಮ್ಮ ನಕಲಿ ದುಃಖವನ್ನು ವ್ಯಕ್ತಪಡಿಸಿದ್ದಾರೆ. ರಾವತ್‌ ಮೂಕರಾಗಿದ್ದರು ಮತ್ತು ಈ ದೂರಿನ ಆಧಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರಕರಣ ದಾಖಲಿಸಬೇಕು. ಸಂಜಯ್‌ ಹೇಳಿಕೆಗಳು ನಿಖರವಾಗಿ ಶಿವಸೇನೆಯ ಹಾಗೂ ಎಂವಿಎ ಸರ್ಕಾರದ ನಾಚಿಕೆಯಿಲ್ಲದ ರಾಜಕೀಯವನ್ನು ಮತ್ತೊಮ್ಮೆ ಬಹಿರಂಗಪಡಿಸಿವೆ," ಎಂದು ಟೀಕಿಸಿದೆ.

ಎರಡನೇ ಕೋವಿಡ್ ಉಲ್ಬಣದ ಸಮಯದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಆಮ್ಲಜನಕದ ಕೊರತೆಯಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಸಂಸತ್ತಿನಲ್ಲಿ ಸರ್ಕಾರ ಹೇಳಿದ್ದರಿಂದ ಶಿವಸೇನೆ ಭಾರಿ ರಾಜಕೀಯ ಹಿನ್ನಡೆ ಸಾಧಿಸಿದೆ. ಮಂಗಳವಾರ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ, ಕಿರಿಯ ಆರೋಗ್ಯ ಸಚಿವೆ ಭಾರತಿ ಪ್ರವೀಣ್ ಪವಾರ್, "ಆರೋಗ್ಯವು ರಾಜ್ಯ ವಿಷಯವಾಗಿದೆ ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಿಯಮಿತವಾಗಿ ಕೇಂದ್ರಕ್ಕೆ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆಯನ್ನು ವರದಿ ಮಾಡುತ್ತವೆ. ಆದಾಗ್ಯೂ, ಆಮ್ಲಜನಕದ ಕೊರತೆಯಿಂದಾಗಿ ಯಾವುದೇ ಸಾವುಗಳು ನಿರ್ದಿಷ್ಟವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವರದಿಯಾಗಿಲ್ಲ," ಎಂದು ಹೇಳಿದ್ದರು. ಕೋವಿಡ್ ರೋಗಿಗಳು ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಈ ಹೇಳಿಕೆ ನೀಡಿದ್ದರು.

ಈ ವಿಚಾರದಲ್ಲಿ ಮಾತನಾಡಿದ್ದ ಸಂಜಯ್‌ ರಾವತ್‌, "ಆಮ್ಲಜನಕದ ಕೊರತೆಯಿಂದ ಸಂಬಂಧಿಕರನ್ನು ಕಳೆದುಕೊಂಡ ಜನರು ಕೇಂದ್ರ ಸರ್ಕಾರದ ವಿರುದ್ದ ನ್ಯಾಯಾಲಯ ಮೆಟ್ಟಿಲೇರಬೇಕು. ನಾನು ಮೂಕನಾಗಿರುತ್ತೇನೆ. ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳು ಇದನ್ನು ಕೇಳಿದಾಗ ಹೇಗೆ ಭಾವಿಸಿರಬಹುದು. ಈ ಕುಟುಂಬಗಳು ಸರ್ಕಾರದ ವಿರುದ್ಧ ಪ್ರಕರಣ ದಾಖಲಿಸಬೇಕು," ಎಂದು ಸುದ್ದಿಗಾರರಿಗೆ ತಿಳಿಸಿದ್ದರು.

ನಿನ್ನೆ ಸಂಜಯ್‌ ರಾವತ್‌ ಸಂಸತ್ತಿನಲ್ಲಿ "ಹಲವಾರು ರಾಜ್ಯಗಳಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಅನೇಕ ಜನರು ಸಾವನ್ನಪ್ಪಿದ್ದಾರೆ. ಕೇಂದ್ರ ಸರ್ಕಾರವು ಸತ್ಯದಿಂದ ದೂರ ಸರಿಯುತ್ತಿದೆ. ಇದು ಪೆಗಾಸಸ್ (ಇಸ್ರೇಲಿ ಸ್ಪೈವೇರ್) ನ ಪರಿಣಾಮವೆಂದು ತೋರುತ್ತದೆ," ಎಂದು ಲೇವಡಿ ಮಾಡಿದ್ದರು.

(ಒನ್‌ಇಂಡಿಯಾ ಸುದ್ದಿ)

English summary
BJP Slams Shiv Sena's Sanjay Raut over Statement ''File Case Against Government''.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X