ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾ ಚುನಾವಣೆ : ಬಿಜೆಪಿ-ಶಿವಸೇನಾ ನಡುವೆ ಸೀಟು ಹಂಚಿಕೆ ಅಂತಿಮ

|
Google Oneindia Kannada News

ಮುಂಬೈ, ಜೂನ್ 03: ಲೋಕಸಭೆ ಚುನಾವಣೆ ಫಲಿತಾಂಶದಿಂದ ಉತ್ತೇಜನಗೊಂಡಿರುವ ಬಿಜೆಪಿ ಹಾಗೂ ಶಿವಸೇನೆ ಈಗ ಮತ್ತೊಮ್ಮೆ 'ಜೊಡೆತ್ತು'ಗಳಂತೆ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಎದುರಿಸಲು ಸಜ್ಜಾಗಿವೆ.

ಮುಂಬರುವ ವಿಧಾನಸಭೆ ಚುನಾವಣೆಯನ್ನು ಒಟ್ಟಿಗೆ ಎದುರಿಸಲು ನಿರ್ಧರಿಸಲಾಗಿದ್ದು, ಎರಡು ಪಕ್ಷಗಳು ತಲಾ 135 ಸ್ಥಾನಗಳಲ್ಲಿ ಸ್ಪರ್ಧಿಸುವ ಒಪ್ಪಂದಕ್ಕೆ ಬಂದಿವೆ ಎಂದು ಬಿಜೆಪಿಯ ಹಿರಿಯ ನಾಯಕ, ಕಂದಾಯ ಸಚಿವ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ.

ಫಲಿತಾಂಶ ಬಳಿಕ, ಕಾಂಗ್ರೆಸ್ ಶಾಸಕರಿಂದ ಬಿಜೆಪಿಗೆ ವಲಸೆ ಫಲಿತಾಂಶ ಬಳಿಕ, ಕಾಂಗ್ರೆಸ್ ಶಾಸಕರಿಂದ ಬಿಜೆಪಿಗೆ ವಲಸೆ

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಒಟ್ಟು 288 ಸದಸ್ಯರ ಬಲ ಹೊಂದಿದೆ. ಉಭಯ ಪಕ್ಷಗಳು ತಲಾ 135 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಉಳಿದ 18 ಕ್ಷೇತ್ರಗಳನ್ನು ಎನ್​ಡಿಎ ಮೈತ್ರಿಕೂಟದ ಇತರೆ ಮಿತ್ರಪಕ್ಷಗಳಿಗೆ ಬಿಟ್ಟುಕೊಡಲಾಗುತ್ತಿದೆ ಎಂದು ಹೇಳಿದರು.

.

BJP, Shiv Sena to fight Maharashtra Assembly polls in 135 seats each: Chandrakant Patil

ದೇವೇಂದ್ರ ಫಡ್ನವಿಸ್​ಅವರು ಮತ್ತೊಮ್ಮೆ ಮೈತ್ರಿಕೂಟದ ಸಿಎಂ ಅಭ್ಯರ್ಥಿಯಾಗಿ ಒಮ್ಮತದ ಆಯ್ಕೆಯಾಗಿದ್ದಾರೆ ಈ ಬಗ್ಗೆ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ಕೂಡಾ ಸೂಚನೆ ನೀಡಿದ್ದಾರೆ ಎಂದರು.

ಮೋದಿ ಸರ್ಕಾರ್ 2ನಲ್ಲಿ ಶಿವಸೇನೆಯ ಅರವಿಂದ್ ಗೆ ಸ್ಥಾನ ಮೋದಿ ಸರ್ಕಾರ್ 2ನಲ್ಲಿ ಶಿವಸೇನೆಯ ಅರವಿಂದ್ ಗೆ ಸ್ಥಾನ

122 ಶಾಸಕರ ಬಲವನ್ನು ನಾವು ಹೊಂದಿದ್ದೇವೆ, 8 ಪಕ್ಷೇತರರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ, ಶಿವಸೇನಾ 63 ಶಾಸಕರನ್ನು ಹೊಂದಿದೆ.ಹೀಗಾಗಿ, ನಾವು 5 ಹೆಚ್ಚುವರಿ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅವಕಾಶವನ್ನು ಹೊಂದುತ್ತಿದ್ದೇವೆ ಎಂದು ತಿಳಿಸಿದರು.

ಮಹಾರಾಷ್ಟ್ರ ಕಾಂಗ್ರೆಸ್ಸಿನಲ್ಲಿ ಕಿರಿಕ್ : ಅಶೋಕ್ ಚವಾಣ್ ಸಂಭಾಷಣೆ ಆಡಿಯೋ ಸೋರಿಕೆ ಮಹಾರಾಷ್ಟ್ರ ಕಾಂಗ್ರೆಸ್ಸಿನಲ್ಲಿ ಕಿರಿಕ್ : ಅಶೋಕ್ ಚವಾಣ್ ಸಂಭಾಷಣೆ ಆಡಿಯೋ ಸೋರಿಕೆ

2019ರ ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ 48 ಸ್ಥಾನಗಳ ಪೈಕಿ ಮೈತ್ರಿಕೂಟ 41 ಸ್ಥಾನ ಗಳಿಸಿದೆ. 25 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ 23 ಕ್ಷೇತ್ರದಲ್ಲಿ ಗೆದ್ದರೆ, ಶಿವಸೇನಾ 23 ಕ್ಷೇತ್ರಗಳ ಪೈಕಿ 18ರಲ್ಲಿ ಜಯಭೇರಿ ಬಾರಿಸಿದೆ. ಮಹಾರಾಷ್ಟ್ರದಲ್ಲಿ 2019ರ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

English summary
Saffron allies BJP and Shiv Sena will share equal number of seats in the upcoming Maharashtra Assembly elections, a senior BJP leader has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X