ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ-ಶಿವಸೇನೆ ಕುಚಿಕು ಕುಚಿಕು, ಮತ್ತೆ ಒಂದಾಗಿ ಪ್ರಚಾರ ಶುರು!

|
Google Oneindia Kannada News

ಮುಂಬೈ, ಮಾರ್ಚ್ 15: ಹಾವು-ಮುಂಗುಸಿ ರೀತಿ ಕಚ್ಚಾಡುತ್ತಿದ್ದ ಬಿಜೆಪಿ-ಶಿವಸೇನೆ ಒಂದಾಗಿ, ಇದೀಗ ಒಟ್ಟಿಗೇ ಪ್ರಚಾರ ನಡೆಸಲು ನಿರ್ಧರಿಸಿವೆ. ಮುಂಬರುವ ಲೋಕಸಭಾ ಚುನಾವಣೆಗೆ ಮಾರ್ಚ್ 24 ರಿಂದ ಕೊಲ್ಹಾಪುರದಿಂದ ಜಂಟಿ ಪ್ರಚಾರ ಆರಂಭವಾಗಲಿದ್ದು, ಅದಕ್ಕೂ ಮುನ್ನ ಪಕ್ಶಃದ ಮುಖಂಡರು, ಕಾರ್ಯಕರ್ತರ ಸಭೆ ನಡೆಯಲಿದೆ.

ಮಾರ್ಚ್ 15, 17, 18 ರಂದು ಬೇರೆ ಬೇರೆ ಸ್ಥಳಗಳಲ್ಲಿ ಸಭೆ ನಡೆಯಲಿದ್ದು, ಈ ಸಭೆಗಳು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ನೇತೃತ್ವದಲ್ಲಿ ನಡೆಯಲಿದೆ.

ಬಿಜೆಪಿ -ಶಿವಸೇನಾ ಜಂಟಿ ಪ್ರಚಾರ ಕಾರ್ಯಕ್ಕೆ ಮೋದಿ ಸ್ಟಾರ್ ಪ್ರಚಾರಕಬಿಜೆಪಿ -ಶಿವಸೇನಾ ಜಂಟಿ ಪ್ರಚಾರ ಕಾರ್ಯಕ್ಕೆ ಮೋದಿ ಸ್ಟಾರ್ ಪ್ರಚಾರಕ

ಬಿಜೆಪಿ-ಶಿವಸೇನೆಯ ಜಂಟಿ ಪ್ರಣಾಳಿಕೆಯನ್ನೂ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಮಹಾರಾಷ್ಟ್ರದ ಒಟ್ಟು 48 ಲೋಕಸಭಾ ಕ್ಷೇತ್ರಗಳಲ್ಲಿ 25 ರಲ್ಲಿ ಬಿಜೆಪಿ ಮತ್ತು 23 ರಲ್ಲಿ ಶಿವಸೇನೆ ಕಣಕ್ಕಿಳಿಯಲಿವೆ.

BJP-Shiv Sena joint campaign will be started from March 24

ಕಳೆದ ಹಲವು ದಶಕಗಳಿಂದಲೂ ಬಿಜೆಪಿ-ಶಿವಸೇನೆ ಮೈತ್ರಿ ಮಾಡಿಕೊಂಡೇ ಚುನಾವಣೆ ಎದುರಿಸಿವೆ. ಆದರೆ ಕೆಲದಿನಗಳಿಂದ ಬಿಜೆಪಿ ನಾಯಕತ್ವದ ಕುರಿತು ಕೆಲವು ವೈಮನಸ್ಯವಿದ್ದಿದ್ದರಿಂದ ಅದು ಈ ಬಾರಿ ಎನ್ ಡಿಎ ಯಿಂದ ದೂರವುಳಿಯುವ ಮಾತನ್ನು ಹಲವು ಬಾರಿ ಆಡಿತ್ತು. ಆದರೆ ಕೊನೆಯೇ ಕ್ಷಣಗಳಲ್ಲಿ ಮತ್ತೆ ಎನ್ ಡಿಎ ಜೊತೆಯೇ ಚುನಾವನೆ ಎದುರಿಸುವ ನಿರ್ಧಾರವನ್ನು ಶಿವಸೇನೆ ಮಾಡಿದೆ.

ಬಿಜೆಪಿ-ಶಿವಸೇನೆ ಸೀಟು ಹಂಚಿಕೆ: ಮೈತ್ರಿ ಪಕ್ಷಕ್ಕೆ ತೀವ್ರ ಬೇಸರಬಿಜೆಪಿ-ಶಿವಸೇನೆ ಸೀಟು ಹಂಚಿಕೆ: ಮೈತ್ರಿ ಪಕ್ಷಕ್ಕೆ ತೀವ್ರ ಬೇಸರ

ಏಪ್ರಿಲ್ 11 ರಿಂದ ಆರಂಭವಾಗುವ ಲೋಕಸಭಾ ಚುನಾವಣೆ ಮೇ 19 ರವರೆಗೆ ಒಟ್ಟು ಏಳು ಹಂತಗಳಲ್ಲಿ ನಡೆಯಲಿದ್ದು, ಮೇ 23 ರಂದು ಫಲಿತಾಂಶ ಹೊರಬೀಳಲಿದೆ.

English summary
Lok Sabha elections 2019: BJP and Shiv Sena will jointly address campaign in Maharashtra from March 24.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X