ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ -ಶಿವಸೇನಾ ಜಂಟಿ ಪ್ರಚಾರ ಕಾರ್ಯಕ್ಕೆ ಮೋದಿ ಸ್ಟಾರ್ ಪ್ರಚಾರಕ

|
Google Oneindia Kannada News

ಮುಂಬೈ, ಮಾರ್ಚ್ 13: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮೈತ್ರಿಯನ್ನು ಪುನಃ ಸ್ಥಾಪಿಸಿಕೊಂಡಿರುವ ಬಿಜೆಪಿ ಹಾಗೂ ಶಿವಸೇನಾ ಈಗ ಜಂಟಿಯಾಗಿ ಚುನಾವಣಾ ಪ್ರಚಾರ ಕಾರ್ಯಕ್ಕೆ ಸಿದ್ಧತೆ ನಡೆಸಿವೆ. ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಸ್ಟಾರ್ ಪ್ರಚಾರಕರಾಗಿ ಕಾಣಿಸಿಕೊಳ್ಳಲಿದ್ದಾರೆ.

ಸುಜಯ್ ನಂತರ ಕಾಂಗ್ರೆಸ್ಸಿಗೆ 'ಕೈ' ಕೊಟ್ಟ ಶಾಸಕ ಕಾಳಿದಾಸಸುಜಯ್ ನಂತರ ಕಾಂಗ್ರೆಸ್ಸಿಗೆ 'ಕೈ' ಕೊಟ್ಟ ಶಾಸಕ ಕಾಳಿದಾಸ

ಸದ್ಯಕ್ಕೆ ಲಭ್ಯ ಮಾಹಿತಿಯಂತೆ, ಪ್ರಧಾನಿ ನರೇಂದ್ರ ಮೋದಿ ಅಲ್ಲದೆ,ಗೃಹ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ನಿತಿನ್ ಗಡ್ಕರಿ, ಉತ್ತರಪ್ರದೇಶ ಸಿಎಂ ಯೋಗಿ ಅದಿತ್ಯನಾಥ್ ಅವರು ಸ್ಟಾರ್ ಪ್ರಚಾರಕರಾಗಿ ಭಾಗವಹಿಸಲಿದ್ದು, ಮಾರ್ಚ್ 24ರಿಂದ ಜಂಟಿ ಸಮಾವೇಶಗಳು ಆರಂಭವಾಗಲಿವೆ.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ಸಿಗೆ ಮುಜುಗರ ತಂದಿತ್ತ ಸುಜಯ್ ಪಾಟೀಲ್ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ಸಿಗೆ ಮುಜುಗರ ತಂದಿತ್ತ ಸುಜಯ್ ಪಾಟೀಲ್

ಬಿಜೆಪಿ ಹಾಗೂ ಶಿವಸೇನಾ ನಡುವಿನ ಸೀಟು ಹಂಚಿಕೆ ಪೂರ್ಣಗೊಂಡರೂ ಜಲ್ನಾ ಹಾಗೂ ಈಶಾನ್ಯ ಮುಂಬೈ ಲೋಕಸಭೆ ಚುನಾವಣೆ ಸ್ಥಾನಗಳ ಬಗ್ಗೆ ಇನ್ನೂ ಚರ್ಚೆ ಮುಂದುವರೆದಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 24 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಇನ್ನು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ 20 ಸ್ಥಾನದಲ್ಲಿ ಸ್ಪರ್ಧಿಸಿತ್ತು. 4 ಸ್ಥಾನಗಳನ್ನು ಇತರ ಮಿತ್ರ ಪಕ್ಷಗಳಿಗೆ ಬಿಟ್ಟುಕೊಡಲಾಗಿತ್ತು. ಆದರೆ 2014ರಲ್ಲೇ ನಡೆದ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. 2014ರಲ್ಲಿ ಬಿಜೆಪಿ 23 ಹಾಗೂ 18 ಕ್ಷೇತ್ರಗಳಲ್ಲಿ ಗೆಲುವು ಕಂಡಿದ್ದವು.

BJP-Shiv Sena to hold six mega rallies together; PM Modi, CM Yogi on star campaigners list

ಒಟ್ಟು 288 ಸ್ಥಾನಗಳ ಪೈಕಿ 260 ಸ್ಥಾನಗಳಲ್ಲಿ ಬಿಜೆಪಿ ಹಾಗೂ ಶಿವಸೇನೆ 282ರಲ್ಲಿ ಸ್ಪರ್ಧಿಸಿದ್ದವು. ಆ ಪೈಕಿ ಬಿಜೆಪಿ 122 ಮತ್ತು ಶಿವಸೇನೆ 63ರಲ್ಲಿ ಜಯ ಸಾಧಿಸಿದ್ದರೆ, ಆ ನಂತರ ಒಟ್ಟಾಗಿ ಸರಕಾರ ರಚಿಸಿದ್ದವು. ಆದರೆ, ಅದು ಸಲೀಸಾಗಿ ಸಾಗುತ್ತಿಲ್ಲ. ಈ ಬಾರಿ ಒಟ್ಟು 48 ಲೋಕಸಭಾ ಕ್ಷೇತ್ರಗಳಿರುವ ಮಹಾರಾಷ್ಟ್ರದಲ್ಲಿ ಬಿಜೆಪಿ 25 ಸ್ಥಾನಗಳಿಗೆ ಹಾಗೂ ಶಿವಸೇನೆ 23 ಸ್ಥಾನಗಳಿಗೆ ಸ್ಪರ್ಧೆ ಮಾಡಲಿವೆ. ಮಹಾರಾಷ್ಟ್ರದಲ್ಲಿ ಒಟ್ಟು ನಾಲ್ಕು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಏಪ್ರಿಲ್ 11ರಿಂದ ಆರಂಭಗೊಳ್ಳಲಿದೆ. ಮುಂಬೈನಲ್ಲಿ ಏಪ್ರಿಲ್ 29ಕ್ಕೆ ಮತದಾನ ನಿಗದಿಯಾಗಿದೆ. ಮೇ 23ಕ್ಕೆ ಫಲಿತಾಂಶ ಬರಲಿದೆ.

English summary
With Lok Sabha Elections round the corner, the Bharatiya Janata Party (BJP) and Shiv Sena have decided to launch a joint campaign across the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X