• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಸೋನಾಲಿ ಬೇಂದ್ರೆಗೆ ಶ್ರದ್ಧಾಂಜಲಿ' ಬಿಜೆಪಿ ಶಾಸಕನ ಎಡವಟ್ಟು ಟ್ವೀಟ್!

|

ಮುಂಬೈ, ಸೆಪ್ಟೆಂಬರ್ 08: ವಿವಾದಗಳನ್ನೇ ಹೊದ್ದು ಮಲಗುತ್ತಿರುವ ಬಿಜೆಪಿ ಶಾಸಕ ರಾಮ್ ಕದಮ್, ಕ್ಯಾನ್ಸರ್ ನಿಂದ ಬಳಲುತ್ತಿರುವ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಅವರಿಗೆ 'ಶ್ರದ್ಧಾಂಜಲಿ' ಎಂದು ಟ್ವೀಟ್ ಮಾಡಿ, ಭಾರೀ ಆಕ್ರೋಶಕ್ಕೆ ಈಡಾಗಿದ್ದಾರೆ.

"ಅಮೆರಿಕದಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಸೋನಾಲಿ ಬೇಂದ್ರೆ ಅವರು ಇಹಲೋಕ ತ್ಯಜಿಸಿದ್ದಾರೆ. ಅವರಿಗೆ ನನ್ನ ಸಂತಾಪಗಳು" ಎಂದು ಅವರು ಮರಾಠಿ ಭಾಷೆಯಲ್ಲಿ ಮಾಡಿದ ಟ್ವೀಟ್ ಅನ್ನು ರಾಮ್ ಕದಮ್ ವಿರೋಧಿಗಳು ಟ್ರೋಲ್ ಮಾಡುತ್ತಿದ್ದಾರೆ.

ಕ್ಯಾನ್ಸರ್ ಪೀಡಿತ ಸೋನಾಲಿ ಬೇಂದ್ರೆಯವರ ಭಾವುಕ ಸಾಲು ಮತ್ತು ಹೊಸ ವಿಡಿಯೋ

ಜೊತೆಗೆ ಸೋನಾಲಿ ಬೇಂದ್ರೆ ಅವರ ಅಭಿಮಾನಿಗಳು ಕದಮ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೂ ಮೊದಲೇ ಅವರು ನಿಧನರಾಗಿದ್ದಾರೆಂದು ಟ್ವೀಟ್ ಮಾಡಿ ಹಲವು ರಾಜಕಾರಣಿಗಳು ಪ್ರಮಾದ ಎಸಗಿದ್ದರು. ಆದರೆ ನಿಖರ ಮಾಹಿತಿಯೇ ಇಲ್ಲದೆ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹೀಗೆಲ್ಲ ಟ್ವೀಟ್ ಮಾಡುವುದು ಸರಿಯೇ ಎಂದು ಟ್ವಿಟ್ಟರ್ ನಲ್ಲಿ ಕದಮ್ ಅವರನ್ನು ಹಲವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಟ್ವೀಟ್ ಮಾಡಿ ಡಿಲೀಟ್ ಮಾಡಿದ ಕದಮ್

ಟ್ವೀಟ್ ಮಾಡಿ ಡಿಲೀಟ್ ಮಾಡಿದ ಕದಮ್

ಬೇಜವಾಬ್ದಾರಿ ಟ್ವೀಟ್ ಮಾಡಿ ನಂತರ ಅದನ್ನು ಕದಮ್ ಡಿಲೀಟ್ ಮಾಡಿದ್ದಾರಾದರೂ ಅವರ ಟ್ವೀಟ್ ನ ಸ್ಕ್ರೀನ್ ಶಾಟ್ ಅಂತೂ ಟ್ರೋಲ್ ಆಗುತ್ತಲೇ ಇದೆ. ಇತ್ತೀಚೆಗಷ್ಟೇ ಹುಡುಗಿಯರನ್ನು ಕಿಡ್ನ್ಯಾಪ್ ಮಾಡಿ ಮದುವೆ ಮಾಡಿಸುತ್ತೇನೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಕದಮ್ ವಿವಾದದ ಪಟ್ಟಿಗೆ ಇದು ಹೊಸ ಸೇರ್ಪಡೆ ಎನ್ನಿಸಿದೆ.

ಮುದ್ದಿನ ಮಗನಿಗೆ ಸೋನಾಲಿ ಬೇಂದ್ರೆ ಬರೆದ ಕಣ್ಣೀರುಕ್ಕಿಸುವ ಪತ್ರ

ಮೊದಲು ಶ್ರದ್ಧಾಂಜಲಿ, ನಂತರ ಸಮಜಾಯಿಷಿ!

ಮೊದಲು ಶ್ರದ್ಧಾಂಜಲಿ ಟ್ವೀಟ್ ಮಾಡಿ ಪ್ರಮಾದ ಎಸಗಿ, ನಂತರ ಡಿಲೀಟ್ ಮಾಡಿದ್ದಾಯ್ತು. ಕೊನೆಗೆ ಕಳೆದ ಎರಡು ದಿನಗಳಿಂದ ಅವರ ಆರೋಗ್ಯದ ಬಗ್ಗೆ ಕೆಲವು ವದಂತಿ ಹಬ್ಬಿತ್ತು. ನಾನು ಅವರ ಆರೋಗ್ಯ ಸುಧಾರಿಸಲಿ ಮತ್ತು ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.

ನಟಿ ಸೋನಾಲಿ ಬೇಂದ್ರೆಗೆ ಕ್ಯಾನ್ಸರ್ ಚಿಕಿತ್ಸೆ, ಈಗ ಹೇಗಿದ್ದಾರೆ ಗೊತ್ತಾ?

ಇವರೊಬ್ಬ ಶಾಸಕ!

ಸದಾ ವಿವಾದ ಸೃಷ್ಟಿಸುವ ಈ ವ್ಯಕ್ತಿ ಒಬ್ಬ ಶಾಸಕ! ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಮಹಾರಾಷ್ಟ್ರ ಪೊಲೀಸ್ ಯಾಕೆ ಈತನ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ? ಈತ ಈಗ ನಟಿ ಸೋನಾಲಿ ಬೇಂದ್ರೆ ಇಹಲೋಕ ತ್ಯಜಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಇಂಥವರ ವಿರುದ್ಧ ಒದಲು ಕ್ರಮ ಕೈಗೊಳ್ಳಿ ಎಂದಿದ್ದಾರೆ ನೀತಾ ಕೋಲಾಟ್ಕರ್

ಕ್ಯಾನ್ಸರ್ ನಿಂದ ಬಳಲುತ್ತಿರುವ ಸೋನಾಲಿಬೇಂದ್ರೆ

ಕ್ಯಾನ್ಸರ್ ನಿಂದ ಬಳಲುತ್ತಿರುವ ಸೋನಾಲಿ ಬೇಂದ್ರೆ ಅವರು ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಧನಾತ್ಮಕ ಮನೋಭಾವದಿಂದ ಕ್ಯಾನ್ಸರ್ ಅನ್ನು ಗೆಲ್ಲುವ ಪ್ರಯತ್ನದಲ್ಲಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದರೂ ತಮ್ಮ ಮಾತುಗಳ ಮೂಲಕ, ಅಕ್ಷರಗಳ ಮೂಲಕ ನೂರಾರು ಜನರಲ್ಲಿ ಸ್ಫೂರ್ತಿ ತುಂಬುತ್ತಿರುವ ಅವರ ಕುರಿತು ಇಂಥ ಬೇಜವಾಬ್ದಾರಿ ಹೇಳಿಕೆ ನೀಡೋದು ಸರಿಯೇ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP MLA Ram Kadam, under fire over his "will kidnap girl" remarks, was caught on the wrong foot again Friday after he tweeted that Bollywood actor Sonali Bendre was no more, only to retract it after realising that the news was not true and facing massive backlash.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more