ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಮಹಾರಾಷ್ಟ್ರದ ಸ್ಪೀಕರ್ ಆಗಿ ರಾಹುಲ್ ನಾರ್ವೇಕರ್ ಆಯ್ಕೆ

|
Google Oneindia Kannada News

ಮುಂಬೈ, ಜುಲೈ 03; ಏಕನಾಥ್ ಶಿಂಧೆ ಸರ್ಕಾರದ ವಿಶ್ವಾಸಮತಯಾಚನೆಗೂ ಮುನ್ನ ಭಾನುವಾರ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಆಯ್ಕೆ ನಡೆಯಿತು.

ಮಹಾರಾಷ್ಟ್ರ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಸ್ಪೀಕರ್ ಆಗಿ ರಾಹುಲ್ ನಾರ್ವೇಕರ್ ಆಯ್ಕೆಯಾದರು. ರಾಹುಲ್ ನಾರ್ವೇಕರ್ ಕೊಲಾಬಾ ಕ್ಷೇತ್ರದ ಬಿಜೆಪಿ ಶಾಸಕರು.

ಸಿಎಂ ಆದ್ರೇನು ಬಂಡಾಯ ಶಾಸಕರನ್ನು ಅಮಾನತುಗೊಳಿಸುವಂತೆ ಸುಪ್ರೀಂ ಕೋರ್ಟ್ ಮೊರೆ! ಸಿಎಂ ಆದ್ರೇನು ಬಂಡಾಯ ಶಾಸಕರನ್ನು ಅಮಾನತುಗೊಳಿಸುವಂತೆ ಸುಪ್ರೀಂ ಕೋರ್ಟ್ ಮೊರೆ!

ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ರಾಹುಲ್ ನಾರ್ವೇಕರ್ 164 ಮತಗಳಿಂದ ಸ್ಪೀಕರ್ ಆಗಿ ಆಯ್ಕೆಯಾದರು. ಶಿವಸೇನೆಯಿಂದ ಚುನಾವಣೆಗೆ ಸ್ಪರ್ಧಿಸಿದ್ದ ರಾಜನ್ ಸಾಲ್ವಿ 107 ಮತಗಳನ್ನು ಪಡೆದರು.

Breaking; ಮುಂಬೈಗೆ ಬಂದ ರೆಬಲ್ ಶಾಸಕರು, ಸಿಎಂ & ಡಿಸಿಎಂ ಜೊತೆ ಸಭೆ Breaking; ಮುಂಬೈಗೆ ಬಂದ ರೆಬಲ್ ಶಾಸಕರು, ಸಿಎಂ & ಡಿಸಿಎಂ ಜೊತೆ ಸಭೆ

BJP MLA Rahul Narvekar Elected As Maharashtra Assembly Speaker

2021ರ ಫೆಬ್ರವರಿಯಲ್ಲಿ ಕಾಂಗ್ರೆಸ್‌ನ ನಾನಾ ಪಟೋಲ್ ರಾಜೀನಾಮೆ ನೀಡಿದ ಬಳಿಕ ಸ್ಪೀಕರ್ ಹುದ್ದೆ ಖಾಲಿ ಇತ್ತು. ವಿಧಾನಸಭೆ ಡೆಪ್ಯುಟಿ ಸ್ಪೀಕರ್ ನರಹರಿ ಜೀರವಾಲ್ ನೂತನ ಸ್ಪೀಕರ್‌ ರಾಹುಲ್ ನಾರ್ವೇಕರ್‌ಗೆ ಅಧಿಕಾರ ಹಸ್ತಾಂತರ ಮಾಡಿದರು.

ಜುಲೈ 4ರಂದು ಸಿಎಂ ಏಕನಾಥ್ ಶಿಂಧೆ ಸರ್ಕಾರಕ್ಕೆ ವಿಶ್ವಾಸಮತ ಪರೀಕ್ಷೆ ಜುಲೈ 4ರಂದು ಸಿಎಂ ಏಕನಾಥ್ ಶಿಂಧೆ ಸರ್ಕಾರಕ್ಕೆ ವಿಶ್ವಾಸಮತ ಪರೀಕ್ಷೆ

ರಾಹುಲ್ ನಾರ್ವೇಕರ್‌ಗೆ ಮುಂಬೈನ ಕೊಲಬಾ ಕ್ಷೇತ್ರದ ಬಿಜೆಪಿ ಶಾಸಕರು. ಎನ್‌ಸಿಪಿಯ ಹಿರಿಯ ನಾಯಕ ರಾಮ್‌ರಾಜೇ ನಾಯಕ್ ನಿಂಬಾಳ್ಕರ್ ಅಳಿಯ.

ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಮೊದಲು ಅವರು ಶಿವಸೇನೆ ಯುವ ಘಟಕದ ವಕ್ತಾರರಾಗಿದ್ದರು. ಪಕ್ಷ ತೊರೆದು ಅವರು 2014ರಲ್ಲಿ ಎನ್‌ಸಿಪಿ ಸೇರಿದರು. 2019ರಲ್ಲಿ ಅವರು ಬಿಜೆಪಿ ಸೇರಿದ್ದರು.

ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಬಿಜೆಪಿಯ ಚಂದ್ರಕಾಂತ್ ಪಾಟೀಲ್ ರಾಹುಲ್ ನಾರ್ವೇಕರ್‌ ಹೆಸರು ಮಂಡನೆ ಮಾಡಿದರು. ಕೈಗಳನ್ನು ಎತ್ತುವ ಮೂಲಕ ಶಾಸಕರು ಬೆಂಬಲ ಸೂಚಿಸಿದರು.

ಬಹುಮತ ಸಾಬೀತು ಮಾಡಬೇಕು; ಬಿಜೆಪಿ ಬೆಂಬಲದೊಂದಿಗೆ ಗುರುವಾರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ಮಾಡಬೇಕು.

ನೂತನ ಸ್ಪೀಕರ್ ರಾಹುಲ್ ನಾರ್ವೇಕರ್ ವಿಶ್ವಾಸಮತಯಾಚನೆಯನ್ನು ನಡೆಸಿಕೊಡಲಿದ್ದಾರೆ. ಶಿವಸೇನೆ ಮತ್ತು ಬಿಜೆಪಿ ಮೈತ್ರಿಕೂಟ ಬಹುಮತಗಳಿಸಲಿದೆಯೇ? ಕಾದು ನೋಡಬೇಕಿದೆ.

Recommended Video

ಮೆಕ್ಸಿಕೋದಲ್ಲಿ ಇದೇ ಕಾರಣಕ್ಕೆ ಮೇಯರ್ ಮೊಸಳೆನ ಮದುವೆ ಆಗಿರೋದು !! | OneIndia Kannada

English summary
BJP MLA Rahul Narvekar elected as the Maharashtra assembly speaker on Sunday. Rahul got 164 votes and Shiv Sena MLA Rajan Salvi got 107 votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X