ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ಸಿಗೆ ಶಿವಸೇನೆ ಬೆಂಬಲ: ಕೆಂಡಾಮಂಡಲವಾದ ಬಿಜೆಪಿ

|
Google Oneindia Kannada News

ಮುಂಬೈ, ಮೇ 11: ಮಹಾರಾಷ್ಟ್ರದ ಪಾಲುಸ್ ಕಾಡೆಗಅಂವ್ ವಿಧಾನಸಭಾ ಕ್ಷೇತ್ರಕ್ಕೆ ಮೇ 28 ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಶಿವಸೇನೆಯು ಕಾಂಗ್ರೆಸ್ಸಿಗೆ ಬೆಂಬಲ ನೀಡಲು ನಿರ್ಧರಿಸಿಸದೆ.

ಶಿವಸೇನೆಯ ಈ ನಿರ್ಧಾರ ಬಿಜೆಪಿ ಮುಖಂಡರ ಕಣ್ಣು ಕೆಂಪಾಗಿಸಿದೆ. ಈ ಕುರಿತು ಖಾರವಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ರಾಮ್ ಕದಮ್, 'ತನ್ನ ಉಗುರನ್ನು ತಾನೇ ಕತ್ತರಿಸಿಕೊಂಡು, ತಾನು ಹುತಾತ್ಮ ಎನ್ನುವ ಸ್ವಭಾವ ಶಿವಸೇನೆಯದು. ಪಾಲುಸ್ ಕಾಡೆಗಾಂವ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಬೆಂಬಲಿಸುತ್ತಿರುವ ಶಿವಸೇನೆಯ ನಡೆ ಅದರ ಇಬ್ಬಗೆಯ ನೀತಿಯನ್ನು ಪ್ರದರ್ಶಿಸುತ್ತದೆ' ಎಂದಿದ್ದಾರೆ.

ಪ್ರಧಾನಿ ಕನಸು ಕಾಣಲು ರಾಹುಲ್‌ಗೆ ಹಕ್ಕಿದೆ: ಶಿವಸೇನಾಪ್ರಧಾನಿ ಕನಸು ಕಾಣಲು ರಾಹುಲ್‌ಗೆ ಹಕ್ಕಿದೆ: ಶಿವಸೇನಾ

ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಪಾಲುಸ್ ಕಾಡೆಗಾಂವ್ ಕ್ಷೇತ್ರದ ಶಾಸಕರಾಗಿದ್ದ ಪತಂಗರಾವ್ ಕದಮ್ ಅವರ ನಿಧನದ ನಂತರ ತೆರವಾದ ಸ್ಥಾನಕ್ಕೆ ಉಪಚುನಅವಣೆ ನಡೆಯುತ್ತಿದ್ದು, ಅವರ ಪುತ್ರ ವಿಶ್ವಜಿತ್ ಕದಮ್ ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

BJP hits out at Shiv Sena for supporting Congress

ಈ ಕ್ಷೇತ್ರದಲ್ಲಿ ತಾನು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಶಿವಸೇನೆ ಘೋಷಿಸಿದ್ದು ಬಿಜೆಪಿ ವಲಯದಲ್ಲಿ ಬೇಸರವನ್ನುಂಟು ಮಾಡಿದೆ. ಇತ್ತೀಚೆಗಷ್ಟೇ ಕೇಂದ್ರ ಎನ್ ಡಿಎ ಮೈತ್ರಿಕೂಟದಿಂದಲೂ ಶಿವಸೇನೆ ಆಚೆ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Bharatiya Janata Party (BJP) MLA Ram Kadam on Thursday hit out at its ally Shiv Sena for supporting Congress in Palus-Kadegaon assembly seat bypoll. The Palus-Kadegaon assembly seat fell vacant after senior Maharashtra Congressleader Patangrao Kadam passed away last month. The by-poll is scheduled for May 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X