ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯಲ್ಲಿ ಅಪ್ಪಂಗೂ ಗೌರವವಿಲ್ಲ, ಅಡ್ವಾಣಿಗೂ ಇಲ್ಲ: ಸೋನಾಕ್ಷಿ ಸಿನ್ಹಾ

|
Google Oneindia Kannada News

ನವದೆಹಲಿ, ಮಾರ್ಚ್ 30: "ನಮ್ಮ ಅಪ್ಪ ಎಷ್ಟೋ ದಿನಗಳ ಹಿಂದೆಯೇ ಬಿಜೆಪಿಯಿಂದ ಹೊರಬರಬೇಕಿತ್ತು. ಅವರಿಗೆ ಸಿಗಬೇಕಾದ ಗೌರವ ಬಿಜೆಪಿಯಲ್ಲಿ ಅವರಿಗೆ ಸಿಗಲಿಲ್ಲ. ಅಡ್ವಾಣಿಯವರನ್ನೂ ಬಿಜೆಪಿ ಗೌರವಿಸಲಿಲ್ಲ" ಎಂದು ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ತಂದೆ ಶತ್ರುಘ್ನ ಸಿನ್ಹಾ ಅವರು ಬಿಜೆಪಿ ತೊರೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಒಂದು ಕಡೆ ನಮಗೆ ಗೌರವ ಇಲ್ಲ ಅನ್ನಿಸಿದಾಗ ಅಲ್ಲಿಂದ ಹೊರಬರಬೇಕು. ಅಲ್ಲಿಂದ ಹೊರಬಂದರೇ ಸಂತೋಷವಾಗಿರುತ್ತೇವೆ ಅನ್ನಿಸಿದರೆ ಅಲ್ಲಿರುವುದರಿಂದ ಯಾವುದೇ ಪ್ರಯೋಜನವಿಲ್ಲ. ಈಗ ನಮ್ಮ ತಂದೆಯವರೂ ಅದನ್ನೇ ಮಾಡಿದ್ದಾರೆ" ಎಂದು ಸೋನಾಕ್ಷಿ ಹೇಳಿದರು.

ರಾಹುಲ್ ಗಾಂಧಿಯ ಭೇಟಿಯಾದ ಬಿಜೆಪಿ ಸಂಸದ ಶತೃಘ್ನ ಸಿನ್ಹಾ ರಾಹುಲ್ ಗಾಂಧಿಯ ಭೇಟಿಯಾದ ಬಿಜೆಪಿ ಸಂಸದ ಶತೃಘ್ನ ಸಿನ್ಹಾ

ಬಿಹಾರದ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಎರಡು ಬಾರಿ ಸ್ಪರ್ಧಿಸಿ ಗೆದ್ದಿದ್ದ 72 ವರ್ಷ ವಯಸ್ಸಿನ ಶತ್ರುಘ್ನ ಸಿನ್ಹ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿರಲಿಲ್ಲ. ಆದ್ದರಿಂದ ಅವರು ಬಿಜೆಪಿ ತೊರೆದಿದ್ದಾರೆ. ಸದ್ಯದಲ್ಲೇ ಕಾಂಗ್ರೆಸ್ ಸೇರಲಿದ್ದು, ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ.

ಬಿಜೆಪಿಗೆ ಸಿನ್ಹಾ ಮೇಲೆ ಮುನಿಸೇಕೆ?

ಬಿಜೆಪಿಗೆ ಸಿನ್ಹಾ ಮೇಲೆ ಮುನಿಸೇಕೆ?

ನಿರಂತರವಾಗಿ ಎನ್ ಡಿಎ ಸರ್ಕಾರದ ನಾಯಕತ್ವದ ಮೇಲೆ ಸಿನ್ಹಾ ವಾಗ್ದಾಳಿ ನಡೆಸಿದ್ದು ಮತ್ತು ಮೋದಿ ಅವರನ್ನು ಸತತ ಟೀಕಿಸುತ್ತಲೇ ಇದ್ದಿದ್ದು, ಬಿಜೆಪಿಯ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿತ್ತು. ಸಿನ್ಹಾ ಬದಲು ಈ ಕ್ಷೇತ್ರದಿಂದ ಬಿಜೆಪಿ ಮುಖಂಡ, ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಿದೆ.

ಬಿಹಾರ: ಎಲ್ಲ 40 ಸೀಟುಗಳಿಗೆ ಎನ್‌ಡಿಎ ಪಟ್ಟಿ ಬಿಡುಗಡೆ, ಶತ್ರುಘ್ನಗೆ ಟಿಕೆಟ್ ಇಲ್ಲ ಬಿಹಾರ: ಎಲ್ಲ 40 ಸೀಟುಗಳಿಗೆ ಎನ್‌ಡಿಎ ಪಟ್ಟಿ ಬಿಡುಗಡೆ, ಶತ್ರುಘ್ನಗೆ ಟಿಕೆಟ್ ಇಲ್ಲ

ಅಡ್ವಾಣಿಗೂ ಟಿಕೆಟ್ ನೀಡದ ಬಿಜೆಪಿ

ಅಡ್ವಾಣಿಗೂ ಟಿಕೆಟ್ ನೀಡದ ಬಿಜೆಪಿ

ಗುಜರಾತಿನ ಗಾಂಧಿನಗರ ಕ್ಷೇತ್ರದ ಸಂಸದ ಎಲ್ ಕೆ ಅಡ್ವಾನಿ ಅವರಿಗೂ ಈ ಬಾರಿ ಬಿಜೆಪಿ ಟಿಕೆಟ್ ನೀಡಿಲ್ಲ. ಬದಲಾಗಿ ಈ ಕ್ಷೇತ್ರದಿಂದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಕಣಕ್ಕಿಳಿದಿದ್ದು, ಬಿಜೆಪಿ ಹಿರಿಯರಿಗೆ ಗೌರವ ನೀಡುತ್ತಿಲ್ಲ. ಅಡ್ವಾಣಿ ಅವರಿಗೆ ಬಂದ ಸ್ಥಿತಿಯೇ ನನ್ನ ತಂದೆಗೂ ಬಂದಿದೆ ಎಂದು ಸೋನಾಕ್ಷಿ ಸಿನ್ಹಾ ಬೇಸರ ವ್ಯಕ್ತಪಡಿಸಿದರು.

ಏಪ್ರಿಲ್ 6 ರಂದು ಕಾಂಗ್ರೆಸ್ಸಿಗೆ?

ಏಪ್ರಿಲ್ 6 ರಂದು ಕಾಂಗ್ರೆಸ್ಸಿಗೆ?

ಈಗಾಗಲೇ ಬಿಜೆಪಿ ತೊರೆದಿರುವ ಶತ್ರುಘ್ನ ಸಿನ್ಹಾ ಏಪ್ರಿಲ್ 6 ರಂದು ಅಧಿಕೃತವಾಗಿ ಕಾಂಗ್ರೆಸ್ ಸೇರಲಿದ್ದಾರೆ. ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಸ್ಪರ್ಧಿಸಿ, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಅವರು ಎದುರಿಸುವುದು ಬಹುತೇಕ ಖಚಿತವಾಗಿದೆ.

ಚುನಾವಣೆಗೆ ದಿನಗಣನೆ

ಚುನಾವಣೆಗೆ ದಿನಗಣನೆ

ಬಿಹಾರದಲ್ಲಿ ಈಗಾಗಲೇ ಮಹಾ ಮೈತ್ರಿಕೂಟದ ಮಾತುಕತೆ ಸಫಲವಾಗಿದ್ದು, ಸೀಟು ಹಂಚಿಕೆಯೂ ನಡೆದಿದೆ. ಪಾಟ್ನಾ ಸಾಹಿಬ್ ನಿಂದ ಕಾಂಗ್ರೆಸ್ ಅಭ್ಯರ್ಥಿಯೇ ಸ್ಪರ್ಧಿಸುವುದು ಖಚಿತವಾಗಿದೆ. ಏಪ್ರಿಲ್ 11 ರಂದು ಲೋಕಸಭಾ ಚುನಾವಣೆ ಆರಂಭವಾಗಲಿದ್ದು, ಮೇ 19 ರವರೆಗೆ ಏಳು ಹಂತಗಳಲ್ಲಿ ನಡೆಯಲಿದೆ. ಬಿಹಾರದಲ್ಲಿ ಏಳೂ ಹಂತಗಳಲ್ಲೂ ಚುನಾವಣೆ ನಡೆದು, ಮೇ 23 ರಂದು ಫಲಿತಾಂಶ ಹೊರಬೀಳಲಿದೆ.

English summary
Bollywood actress Sonakshi Sinha attacks BJP and said, Neither Dad, Nor Advani Were Given Respect in BJP. BJP denies ticket to Shatrughan Sinha, and he will be joining Congress soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X