ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಶಾಂತ್ ಕೇಸ್: ತನಿಖೆಗಾಗಿ ಮುಂಬೈಗೆ ಬಂದ ಬಿಹಾರ ಪೊಲೀಸ್‌ಗೆ ಕ್ವಾರಂಟೈನ್!

|
Google Oneindia Kannada News

ಮುಂಬೈ, ಆಗಸ್ಟ್ 03: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಮುಂಬೈಗೆ ಆಗಮಿಸಿದ್ದ ಬಿಹಾರ ಪೊಲೀಸ್ ಅಧಿಕಾರಿಯನ್ನು ಮುಂಬೈ ಮಹಾನಗರ ಪಾಲಿಕೆಯವರು ಒತ್ತಾಯವಾಗಿ ಕ್ವಾರಂಟೈನ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಕುರಿತು ಬಿಹಾರ ಡಿಐಜಿ ಗುಪ್ತೇಶ್ವರ್ ಪಾಂಡೆ ಭಾನುವಾರ ಟ್ವೀಟ್ ಮಾಡಿ, ಮುಂಬೈ ಪೊಲೀಸರ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ''ಕರ್ತವ್ಯ ನಿರತವಾಗಿ ಪಾಟ್ನಾದಿಂದ ಮುಂಬೈಗೆ ತಲುಪಿರುವ ಐಪಿಎಸ್ ಅಧಿಕಾರಿ ಬಿನಯ್ ತಿವಾರಿ ಅವರನ್ನು ರಾತ್ರಿ 11 ಗಂಟೆಗೆ ಬಿಎಂಸಿ ಅಧಿಕಾರಿಗಳು ಬಲವಂತವಾಗಿ ಕ್ವಾರಂಟೈನ್ ಮಾಡಿದ್ದಾರೆ' ಎಂದು ದೂರಿದ್ದಾರೆ.

'ವಿನಂತಿ ಹೊರತಾಗಿಯೂ, ಕನಿಷ್ಠ ಅವರಿಗೆ ಐಪಿಎಸ್ ಆಧಾರಿತ ವಸತಿ ಸೌಕರ್ಯವನ್ನು ಸಹ ಒದಗಿಸಲಾಗಿಲ್ಲ. ಗೋರೆಗಾಂವ್‌ನ ಅತಿಥಿ ಗೃಹದಲ್ಲಿ ಇರಿಸಲಾಗಿದೆ' ಎಂದು ಬಿಹಾರ ಪೊಲೀಸ್ ಆಯುಕ್ತ ಕಿಡಿಕಾರಿದ್ದಾರೆ.

Bihar Police Who Investigate The Sushant Singh Case In Mumbai Forcefully Quarantined

ಜೂನ್ 14ರಂದು ಮುಂಬೈನ ಬಾಂದ್ರಾದ ನಿವಾಸದಲ್ಲಿ ಅನುಮಾನಸ್ಪಾದವಾಗಿ ಮೃತಪಟ್ಟ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಪ್ರಕರಣವನ್ನು ಬಿಹಾರ ಪೊಲೀಸ್ ಮತ್ತು ಮುಂಬೈ ಪೊಲೀಸರು ಪ್ರತ್ಯೇಕವಾಗಿ ತನಿಖೆ ಮಾಡುತ್ತಿದ್ದಾರೆ.

ಸುಶಾಂತ್ ಸಿಂಗ್ ಕೇಸ್‌ ಸಿಬಿಐಗೆ ನೀಡಲು ಬಿಹಾರ ಸಿಎಂ ಒಪ್ಪಿಗೆ!ಸುಶಾಂತ್ ಸಿಂಗ್ ಕೇಸ್‌ ಸಿಬಿಐಗೆ ನೀಡಲು ಬಿಹಾರ ಸಿಎಂ ಒಪ್ಪಿಗೆ!

ಸುಶಾಂತ್ ತಂದೆ ನೀಡಿದ ದೂರಿನ ಅನ್ವಯ ಬಿಹಾರ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆಗಾಗಿ ಮುಂಬೈಗೆ ಭೇಟಿ ನೀಡಿದ್ದಾರೆ. ಆದರೆ. ಬಿಹಾರ್ ಪೊಲೀಸರು, ಮುಂಬೈಗೆ ಬಂದು ವಿಚಾರಣೆ ಮಾಡುತ್ತಿರುವುದಕ್ಕೆ ಮುಂಬೈ ಪೊಲೀಸರು ಸಹಕರಿಸುತ್ತಿಲ್ಲ ಎಂಬ ಆರೋಪವೂ ಇದೆ.

English summary
Bihar police SP Binay Tiwari who arrived in Mumbai to investigate the Sushant Singh Rajput case forcefully quarantined.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X